ಬೆಂಗಳೂರು[ಜು.21]: ರಾಜಧಾನಿಯ ಹಲಗೆವಡೇರಹಳ್ಳಿಯಲ್ಲಿ ನಿಯಮಬಾಹಿರವಾಗಿ ಜಮೀನು ಡಿ-ನೋಟಿಫಿಕೇಷನ್ ಮಾಡಿದ ಪ್ರಕರಣ ಸಂಬಂಧ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಕ್ಲೀನ್‌ಚಿಟ್ ನೀಡಿ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟ್ ಅನ್ನು ವಜಾಗೊಳಿಸಿರುವ ಜನಪ್ರತಿನಿಧಿಗಳ ನ್ಯಾಯಾಲಯ, ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಎಲ್ಲ ಆರೋಪಿಗಳ ವಿರುದ್ಧ ಪ್ರಕರಣದ ಮರು ತನಿಖೆ ನಡೆಸುವಂತೆ ಲೋಕಾಯುಕ್ತ ಪೊಲೀಸರಿಗೆ ಸೂಚನೆ ನೀಡಿದೆ.
ಕುಮಾರಸ್ವಾಮಿ ಅವರು ಲೋಕಾಯುಕ್ತ ಪೊಲೀಸರ ಮೇಲೆ ಪ್ರಭಾವ ಬೀರಿ ಬಿ ರಿಪೋರ್ಟ್ ಹಾಕುವಂತೆ ನೋಡಿಕೊಂಡಿದ್ದು, ಅಧಿಕಾರ ದುರುಪಯೋಗಪಡಿಸಿದ್ದಾರೆ. ಹೀಗಾಗಿ ಬಿ ರಿಪೋರ್ಟ್ ಅನ್ನು ನ್ಯಾಯಾಲಯ ಒಪ್ಪಬಾರದು. ಕುಮಾರಸ್ವಾಮಿ ಅವರ ಮೇಲಿನ ಪ್ರಾಸಿಕ್ಯೂಷನ್ ಅನ್ನು ಮುಂದುವರೆಸಬೇಕು ಎಂದು ಚಾಮರಾಜನಗರ ಮೂಲದ ಮಹದೇವಸ್ವಾಮಿ ಎಂಬುವರು ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
Comments
Post a Comment