ಸ್ಪೀಕರ್ ಅಭ್ಯರ್ಥಿ ಫೈನಲ್ !! ರಮೇಶ್ ಕುಮಾರ್ ಸ್ಥಾನಕ್ಕೆ ಈ ನಾಯಕ!

ವಿಧಾನಸಭೆಯ ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ಅವರು ಸೋಮವಾರ ರಾಜೀನಾಮೆ ನೀಡಿದ್ದು, ಅವರಿಂದ ತೆರವಾದ ಸ್ಥಾನಕ್ಕೆ ಜುಲೈ 31ರಂದು ಚುನಾವಣೆ ನಿಗದಿಪಡಿಸಿ ರಾಜ್ಯಪಾಲ ವಜುವಾಯಿ ವಾಲಾ ಅವರು ಆದೇಶ ಹೊರಡಿಸಿದ್ದಾರೆ.
ಬುಧವಾರ ಬೆಳಗ್ಗೆ 11 ಗಂಟೆಗೆ ಸ್ಪೀಕರ್ ಆಯ್ಕೆಗೆ ಚುನಾವಣೆ ನಡೆಯಲಿದೆ. ನಾಳೆ ಬೆಳಗ್ಗೆ 12 ಗಂಟೆಯವರೆಗೆ ವಿಧಾನಸಭಾ ಕಾರ್ಯದರ್ಶಿಗೆ ನಾಮಪತ್ರ ಸಲ್ಲಿಸಬಹುದು ಎಂದು ವಿಧಾನಸಭೆಯಲ್ಲಿ ಇಂದು ಉಪಸಭಾಧ್ಯಕ್ಷ ಕೃಷ್ಣಾ ರೆಡ್ಡಿ ಘೋಷಿಣೆ ಮಾಡಿದ್ದು ಆಡಳಿತ ಹಿಡಿದಿರುವ ಬಿಜೆಪಿ ತನ್ನ ಅಭ್ಯರ್ಥಿಯನ್ನು ಫೈನಲ್ ಮಾಡಿದೆ.
ನೂತನ ಸ್ಪೀಕರ್ ಆಗಿ ಬಿಜೆಪಿ ಶಾಸಕ ಕೆ.ಜಿ.ಬೋಪಯ್ಯ ಅವರು ಆಯ್ಕೆಯಾಗುವುದು ಬಹುತೇಕ ಖಚಿತವಾಗಿದ್ದು ಸಿಎಂ ಬಿ.ಎಸ್.ಯಡಿಯೂರಪ್ಪ ಬೋಪಯ್ಯ ಹೆಸರನ್ನು ಅಂತಿಮ ಮಾಡಿದ್ದಾರೆ.

Comments