ಮೈತ್ರಿ ಸರ್ಕಾರ ಕ್ಕೆ ಗುಡ್ ನ್ಯೂಸ್: ಅತೃಪ್ತರ ಮನವೊಲಿಕೆಗೆ ಬಹು ದೊಡ್ಡ 'ದಾಳ' ಉರುಳಿಸಿದ ಡಿಕೆಶಿ.!

  • ಕಾಂಗ್ರೆಸ್ - ಜೆಡಿಎಸ್ ನ 11 ಮಂದಿ ಶಾಸಕರುಗಳು ರಾಜೀನಾಮೆ ನೀಡುವ ಮೂಲಕ ರಾಜ್ಯ ರಾಜಕಾರಣದಲ್ಲಿ ಇಂದು ಅಲ್ಲೋಲಕಲ್ಲೋಲವಾಗಿದ್ದು, ಇದರ ಮಧ್ಯೆ ಅತೃಪ್ತ ಶಾಸಕರ ಮನವೊಲಿಸಿ ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಬಲ ಶೂಟರ್ ಡಿ.ಕೆ. ಶಿವಕುಮಾರ್ ಮುಂದಾಗಿದ್ದಾರೆ.

ರಾಜೀನಾಮೆ ನೀಡುವ ಸಲುವಾಗಿ ಶಾಸಕರುಗಳು ಸ್ಪೀಕರ್ ಕೊಠಡಿಯಲ್ಲಿರುವಾಗಲೇ ಅಲ್ಲಿಗೆ ಭೇಟಿ ನೀಡಿದ್ದ ಡಿಕೆಶಿ ಕೊನೆ ಕ್ಷಣದ ಮನವೊಲಿಕೆ ಯತ್ನ ನಡೆಸಿದ್ದರು. ಆದರೆ ಇದಕ್ಕೆ ಸೊಪ್ಪು ಹಾಕದ ಶಾಸಕರುಗಳು ಸ್ಪೀಕರ್ ರಮೇಶ್ ಕುಮಾರ್ ಅನುಪಸ್ಥಿತಿಯಲ್ಲಿ ಅವರ ಕಾರ್ಯದರ್ಶಿಯವರ ಬಳಿ ರಾಜೀನಾಮೆ ಪತ್ರ ನೀಡಿದ್ದರು.
ಆದರೂ ತಮ್ಮ ಪ್ರಯತ್ನ ಬಿಡದ ಡಿ.ಕೆ. ಶಿವಕುಮಾರ್, ರಾಮಲಿಂಗಾರೆಡ್ಡಿ ಸೇರಿದಂತೆ ಕಾಂಗ್ರೆಸ್ ನ ಐವರು ಶಾಸಕರುಗಳನ್ನು ತಮ್ಮ ಜೊತೆ ಕರೆದುಕೊಂಡು ಹೋಗಿದ್ದಾರೆ.

Comments