ದೋಸ್ತಿ ಸರಕಾರ ಪತನವಾಗಿ ಚುನಾವಣೆ ನಡೆದರೆ ಅದರ ಲಾಭ ಕಾಂಗ್ರೆಸ್,ಬಿಜೆಪಿಗಿಂತ ಜೆಡಿಎಸ್‌ಗೆ ಹೆಚ್ಚು!! ಇದು ಹೇಗೆ ಸಾಧ್ಯ!
ನ್ಯೂಸ್‌ಡೆಸ್ಕ್: ದೋಸ್ತಿ ಸರಕಾರ ಪತನವಾದ್ರೆ ಅದರ ಲಾಭ ಕಾಂಗ್ರೆಸ್‌ಗಿಂತ ಜೆಡಿಎಸ್‌ಗೆ ಲಾಭವೇ ಹೆಚ್ಚು, ಹೌದು, ಹೀಗೊಂದು ಮಾತು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದು ಅಪ್ಪಿ ತಪ್ಪಿ ಏನಾದ್ರು ಸಿಎಂ ಸ್ಥಾನಕ್ಕೆ ಹೆಚ್.ಡಿ ಕುಮಾರಸ್ವಾಮಿ ರಾಜೀನಾಮೆ ನೀಡಿ ರಾಜ್ಯದಲ್ಲಿ ಮತ್ತೊಂದು ಚುನಾವಣೆ ನಡೆದರೆ ಅದರ ಲಾಭವನ್ನು ಜೆಡಿಎಸ್ ಹೆಚ್ಚು ಪಡೆಯಲಿದೆ ಎನ್ನಲಾಗಿದೆ.
ಸದ್ಯ ಅತೃಪ್ತ ಶಾಸಕರ ಪೈಕಿ ಅತಿ ಹೆಚ್ಚು ಮಂದಿ ಕಾಂಗ್ರೆಸ್‌ನವರೇ ಆಗಿರುವ ಹಿನ್ನಲೆಯಲ್ಲಿ ಕಾಂಗ್ರೆಸ್ ಶಾಸಕರಿಂದಲೇ ನಾವು ಅಧಿಕಾರವನ್ನು ಕಳೆದುಕೊಂಡೇವು.
ನಮ್ಮ ಪಾಡಿಗೆ ಅಧಿಕಾರವನ್ನು ನಡಸಲು ಕಾಂಗ್ರೆಸ್ ಶಾಸಕರು ಬಿಡಲಿಲ್ಲ ಅಂತ ಸಿಎಂ ಹೆಚ್‌ಡಿಕೆ ರಾಜ್ಯದ ಜನತೆ ಮುಂದೆ ಈ ವಿಷಯವನ್ನು ಮಂಡನೆ ಮಾಡಿದರೆ ಇದು ಭಾವನತ್ಮಕವಾಗಿ ಜನರಿಗೆ ತಲುಪಲಿದೆ ಎನ್ನಲಾಗಿದೆ.ಇದಲ್ಲದೇ ಮೈಸೂರು ಭಾಗದಲ್ಲಿ ಜೆಡಿಎಸ್‌ಗೆ ಈ ವಿಷ್ಯ ಇನ್ನಷ್ಟು ಹೆಚ್ಚು ಸ್ಥಾನವನ್ನು ವಿಧಾನಸಭಾ ಚುನಾವಣೆಯಲ್ಲಿ ಪಡೆದುಕೊಳ್ಳಲಿದೆ ಅಂತ ತಿಳಿದು ಬಂದಿದೆ. ಇದಲ್ಲದೇ ಆಪರೇಷನ್ ಕಮಲ ವಿಚಾರ ಕೂಡ ಜನರಲ್ಲಿ ಅದರಲ್ಲೂ ಮೈಸೂರು ಭಾಗದಲ್ಲಿ ನಕರಾತ್ಮವಾಗಿ ಪ್ರಭಾವ ಬೀರಲಿದೆ ಎನ್ನಲಾಗುತ್ತಿದೆ. ಈ ಭಾಗದಲ್ಲಿ ಬಿಜೆಪಿಗೆ ಇನ್ನೂ ಸರಿಯಾಗಿ ನೆಲೆ ನಿಲ್ಲುವುದಕ್ಕೆ ಸಾಧ್ಯವಾಗುತ್ತಿಲ್ಲ. ಇದಲ್ಲದೇ ಕಾಂಗ್ರೆಸ್ ಶಾಸಕರು ಮಾಡಿರುವ ಮೋಸ ಕೂಡ ಜನತೆಯಿಂದ ಅನುಕಂಪ ಮೂಡಿಸಲಿದೆ ಅಂತ ಹಿರಿಯ ರಾಜಕೀಯ ಪಂಡಿತರು ಹೇಳುತ್ತಿದ್ದಾರೆ.
ಈ ಹಿಂದೆ ಬಿಜೆಪಿ ಹಾಗೂ ಜೆಡಿಎಸ್ ನೇತೃತ್ವದ 20-20 ಸರಕಾರ ಅಧಿಕಾರದಲ್ಲಿ ಇದ್ದ ವೇಳೆಯಲ್ಲಿ ಜೆಡಿಎಸ್ ಪಕ್ಷ ಬಿಜೆಪಿಗೆ ಸರಿಯಾದ ಸಮಯಕ್ಕೆ ಸರಕಾರ ನಡೆಸಲು ಅವಕಾಶ ನೀಡಲಿಲ್ಲ ಅಂತ ಆರೋಪಿ ವಿಧಾನಸಭಾ ಚುನಾವಣೆಯಲ್ಲಿ ಕೂಡ ಈ ವಿಷಯ ಜನರಲ್ಲಿ ನೆಲೆ ಊರುವಂತೆ ಮಾಡಿ ಬಿಜೆಪಿ ಅತಿ ಹೆಚ್ಚು ಸ್ಥಾನವನ್ನು ಪಡೆದುಕೊಂಡು ಸರಕಾರವನ್ನು ರಾಜ್ಯದಲ್ಲಿ ಮೊದಲ ಬಾರಿಗೆ ರಚನೆ ಮಾಡಲು ಸಾಧ್ಯವಾಯಿತು. ಹೀಗಾಗಿ ಒಂದು ವೇಳೆ ಚುನಾವಣೆ ನಡೆದರೆ ಅದು ಕಾಂಗ್ರೆಸ್‌ಗಿಂತ ಹೆಚ್ಚಾಗಿ ಜೆಡಿಎಸ್‌ಗೆ ಲಾಭವಾಗಲಿದೆ ಎನ್ನಲಾಗಿದ್ದು, ಇದಕ್ಕೆ ಕಾಲವೇ ಉತ್ತರ ನೀಡಲಿದೆ.
ಸದ್ಯ ಮಂದಿ ಶಾಸಕರು ಸ್ಪೀಕರ್‌ಗೆ ರಾಜೀನಾಮೆ ನೀಡಿದ್ದು ಒಂದು ವೇಳೆ ಸ್ಪೀಕರ್ ರಾಜೀನಾಮೆಯನ್ನು ಆಂಗೀಕರ ಮಾಡಿದರು, ಆ ಶಾಸಕರನ್ನು ಅನರ್ಹತೆ ಮಾಡಿದರು ಕೂಡ ರಾಜ್ಯದಲ್ಲಿ ಚುನಾವಣೆ ನಡೆಯೋದು ಪಕ್ಕಾ ಈ ವೇಳೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪ್ರತ್ಯೇಕವಾಗಿ ಕಣಕ್ಕೆ ಇಳಿಯೋದು ಪಕ್ಕಾ, ಈ ವೇಳೆಯಲ್ಲಿ ಯಾವ ರೀತಿಯಲ್ಲಿ ಮೂರು ಪಕ್ಷಗಳಿಗೆ ಜನತೆ ಮತ ಹಾಕುತ್ತಾರೆ ಎನ್ನುವುದನ್ನು ಕಾದುನೋಡಬೇಕಾಗಿದೆ.
Comments
Post a Comment