Breaking news; ಕಾಂಗ್ರೆಸ್‌ ಶಾಸಕರ ರಾಜೀನಾಮೆಯ ಉಸ್ತುವಾರಿ ಹೊತ್ತಿದ್ದು ಬಿಜೆಪಿಯ ಈ ಇಬ್ಬರು ನಾಯಕರು!?

ಬೆಂಗಳೂರು : ದೋಸ್ತಿ ಸರ್ಕಾರದಲ್ಲಿ ಇಂದು 11 ಮಂದಿ ಅತೃಪ್ತ ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ. ಅವರಲ್ಲಿ ಬಹುತೇಕ ಕಾಂಗ್ರೆಸ್ ಶಾಸಕರೇ ಆಗಿದ್ದಾರೆ.
ಈ ನಡುವೆ ಶಾಸಕರ ರಾಜೀನಾಮೆಗೆ ಸಂಬಂಧಪಟ್ಟಂತೆ ಖುದ್ದು ಪೂರ್ಣ ಜಬ್ದಾರಿಯನ್ನು ಮಾಜಿ ಸಿಎಂ ಬಿಎಸ್‌ವೈ ಆಪ್ತ ಸಂತೋಷ್‌ ಹಾಗೂ ಮಾಜಿ ಶಾಸಕ ಯೋಗಿಶ್ವರ್‌ ಅವರು ವಹಿಸಿಕೊಂಡಿದ್ದರು ಎನ್ನಲಾಗಿದೆ. ಅತೃಪ್ತ ಶಾಸಕರನ್ನು ಒಂದೇ ಕೂಡಿ ಇಡುವುದರ ಜೊತೆಗೆ ಅವರನ್ನು ರಾಜಪಾಲರ ಭವನದ ತನಕ ಹುಷಾರು ಆಗಿ ಕರೆ ತಲುಪುವ ತನಕ ಈ ಇಬ್ಬರು ಬಿಜೆಪಿ ನಾಯಕರು ಖುದ್ದು ಆಸಕ್ತಿ ವಹಿಸಿದ್ದರು ಎನ್ನಲಾಗಿದೆ. ಈ ನಡುವೆ ಮಾಜಿ ಸಿಎಂ ಬಿಎಸ್‌ವೈ ಶಾಸಕರ ರಾಜೀನಾಮೆ ಬಗ್ಗೆ ನನಗೆ ಏನು ತಿಳಿದಿಲ್ಲ ಅಂತ ಹೇಳುತ್ತಿದ್ದರು ಕೂಡ ಅವರ ಗಮನಕ್ಕೆ ಬಾರದೇ ಯಾವುದೇ ಕೆಲಸವನ್ನು ಸಂತೋಷ್‌ ಹಾಗೂ ಯೋಗಿಶ್ವರ್‌‌ ಮಾಡಿಲ್ಲ ಅಂತ ಹೇಳಲಾಗುತ್ತಿದೆ.

Comments