ಈದೀಗ ಬಂದ ಸುದ್ದಿ: ಉಪಚುಣಾವನೆ ಫಲಿತಾಂಶ ಬಿಜೆಪಿ ಬಿಗ್ ಗೆಲುವು! 54 ವರ್ಷದಿಂದ ಸೋಲದ ಕಾಂಗ್ರೆಸ್ ನ ಭದ್ರ ಕೋಟೆ ಛಿದ್ರ!!
ಬೆಂಗಳೂರು(ಸೆ. 27): ಕೇರಳ, ಉತ್ತರ ಪ್ರದೇಶ, ಛತ್ತೀಸ್ಗಡ ಮತ್ತು ತ್ರಿಪುರಾ ರಾಜ್ಯಗಳ ಒಟ್ಟು 4 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಬಿಜೆಪಿ ಎರಡು ಕ್ಷೇತ್ರಗಳಲ್ಲಿ ಜಯಿಸಿದರೆ, ಕಾಂಗ್ರೆಸ್ ಹಾಗೂ ಎಲ್ಡಿಎಫ್ ತಲಾ ಒಂದೊಂದು ಸ್ಥಾನ ಗೆದ್ದಿವೆ. ಒಟ್ಟಾರೆಯಾಗಿ, ಬಿಜೆಪಿಗೆ ಒಂದು ಸ್ಥಾನದ ನಷ್ಟವಾದರೆ, ಕಾಂಗ್ರೆಸ್ಸಿಗೆ ಒಂದು ಕಳೆದುಕೊಂಡು ಒಂದನ್ನು ಪಡೆದುಕೊಂಡಿದೆ. ಆದರೆ, ಎಡ ಒಕ್ಕೂಟ ಎಲ್ಡಿಎಫ್ 54 ವರ್ಷಗಳ ಹೊಸ ಇತಿಹಾಸ ನಿರ್ಮಿಸಿದ್ದು ಈ ಉಪಚುನಾವಣೆಯ ಹೈಲೈಟ್ ಎನಿಸಿದೆ.
ಕೇರಳದ ಪಾಲಾ ಕ್ಷೇತ್ರದಲ್ಲಿ ಎಲ್ಡಿಎಫ್ ಜಯಭೇರಿ ಭಾರಿಸಿ ಕಾಂಗ್ರೆಸ್ ಭದ್ರಕೋಟೆಯನ್ನು ಛಿದ್ರಗೊಳಿಸಿದೆ. ಛತ್ತೀಸ್ಗಡದ ದಾಂತೆವಾಡ ಕ್ಷೇತ್ರವನ್ನು ಬಿಜೆಪಿಯಿಂದ ಕಾಂಗ್ರೆಸ್ ಕಿತ್ತುಕೊಂಡಿದೆ. ಉತ್ತರ ಪ್ರದೇಶದ ಹಮೀರ್ಪುರ ಹಾಗೂ ತ್ರಿಪುರಾದ ಬಾಧರ್ಘಾಟ್ ಕ್ಷೇತ್ರಗಳನ್ನು ಬಿಜೆಪಿ ಉಳಿಸಿಕೊಂಡಿದೆ.
ಇದನ್ನೂ ಓದಿ: ಭಾರತ-ಪಾಕಿಸ್ತಾನ ಗಡಿಯಲ್ಲಿ ಮತ್ತೊಂದು ಪಾಕ್ ಡ್ರೋಣ್ ವಶಕ್ಕೆ ಪಡೆದ ಪೊಲೀಸರು; 3 ದಿನದಲ್ಲಿ ಪತ್ತೆಯಾದ ಎರಡನೇ ಡ್ರೋಣ್ ಇದು!
ಪಾಲಾದಲ್ಲಿ ಎಲ್ಡಿಎಫ್ ಹೊಸ ಇತಿಹಾಸ:
ಕೇರಳದ ಕೊಟ್ಟಾಯಂ ಜಿಲ್ಲೆಯ ಪಾಲಾ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ನ ಭದ್ರಾತಿಭದ್ರಕೋಟೆ ಎನಿಸಿತ್ತು. ಕಳೆದ 54 ವರ್ಷಗಳಿಂದಲೂ ಕಾಂಗ್ರೆಸ್ ಪಕ್ಷವೇ ಇಲ್ಲಿ ಗೆಲ್ಲುತ್ತಾ ಬಂದಿತ್ತು. ಕೇರಳ ಕಾಂಗ್ರೆಸ್ ಮುಖ್ಯಸ್ಥ ಕೆ.ಎಂ. ಮಣಿ ಅವರು 1965ರಿಂದ ಇಲ್ಲಿಯವರೆಗೆ ಈ ಕ್ಷೇತ್ರದಲ್ಲಿ ಸತತ 12 ಬಾರಿ ಚುನಾವಣೆ ಗೆದ್ದು ಶಾಸಕರಾಗಿದ್ದರು. ಅವರ ನಿಧನದಿಂದ ತೆರವಾದ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಮೊದಲ ಬಾರಿಗೆ ಅಪಜಯ ಸಾಧಿಸಿದೆ. ಎಲ್ಡಿಎಫ್ ಒಕ್ಕೂಟದ ಅಭ್ಯರ್ಥಿ ಮಣಿ ಸಿ. ಕಪ್ಪನ್ ಅವರು ಯುಡಿಎಫ್ ಅಭ್ಯರ್ಥಿ ಟಾಮ್ ಜೋಸ್ ಅವರನ್ನು 2,943 ಮತಗಳ ಅಂತರದಿಂದ ಸೋಲಿಸಿದ್ದಾರೆ. ಇದೇ ಸೋಮವಾರದಂದು ನಡೆದ ಚುನಾವಣೆಯಲ್ಲಿ ಪಾಲಾ ಕ್ಷೇತ್ರದಲ್ಲಿ ಶೇ. 71.41ರಷ್ಟು ಮತದಾನವಾಗಿತ್ತು.
ದಾಂತೆವಾಡದಲ್ಲಿ ಬಿಜೆಪಿಗೆ ಸೋಲು:
ಛತ್ತೀಸ್ಗಡದ ನಕ್ಸಲ್ಪೀಡಿತ ದಾಂತೆವಾಡ ಕ್ಷೇತ್ರವನ್ನು ಕಾಂಗ್ರೆಸ್ ಗೆದ್ದುಕೊಂಡಿದೆ. ಪರಿಶಿಷ್ಟ ಜಾತಿಗೆ ಮೀಸಲಾದ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ದೇವತಿ ಕರ್ಮಾ ಜಯಭೇರಿ ಭಾರಿಸಿದ್ದರು. ಮಾವೋವಾದಿ ದಾಳಿಯಲ್ಲಿ ಬಲಿಯಾಗಿದ್ದ ಬಿಜೆಪಿ ಶಾಸಕ ಭೀಮಾ ಮಂಡವಿ ಅವರ ನಿಧನದಿಂದ ಈ ಕ್ಷೇತ್ರ ತೆರವಾಗಿತ್ತು. ಉಪಚುನಾವಣೆಯಲ್ಲಿ ಬಿಜೆಪಿಯು ಭೀಮಾ ಮಾಂಡವಿ ಅವರ ಪತ್ನಿಯನ್ನೇ ಕಣಕ್ಕಿಳಿಸಿತ್ತು. ಆದರೆ, ಗಂಡನ ಭೀಕರ ಸಾವಿನ ಅನುಕಂಪದ ಅಲೆಯಿಂದ ಗೆಲ್ಲುವ ಅವರ ಪತ್ನಿಯ ನಿರೀಕ್ಷೆ ಕೈಗೂಡಲಿಲ್ಲ.
ಇದನ್ನೂ ಓದಿ: ಪಾಕ್ ಉಗ್ರರು ಗಡಿ ನುಸುಳುವ ವಿಡಿಯೋ ಬಿಡುಗಡೆ ಮಾಡಿದ ಸೇನೆ; ನುಸುಳುಕೋರರನ್ನು ಹಿಮ್ಮೆಟ್ಟಿಸಿದ ಸೈನಿಕರು
ಹಮೀರ್ಪುರದಲ್ಲಿ ಬಿಜೆಪಿಗೆ ಗೆಲುವು:
ಉತ್ತರ ಪ್ರದೇಶದ ಹಮೀರ್ಪುರ ವಿಧಾನಸಭಾ ಕ್ಷೇತ್ರವನ್ನು ಬಿಜೆಪಿ ಉಳಿಸಿಕೊಂಡಿದೆ. ಕೊಲೆ ಪ್ರಕರಣವೊಂದರ ಸಂಬಂಧ ಬಿಜೆಪಿ ಶಾಸಕ ಅಶೋಕ್ ಕುಮಾರ್ ಚಾಂಡೇಲ್ ಅವರು ಶಿಕ್ಷೆಗೆ ಗುರಿಯಾಗಿ ಜೈಲುಪಾಲಾದ್ದರಿಂದ ಕ್ಷೇತ್ರ ತೆರವಾಗಿತ್ತು. ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಯುವರಾಜ್ ಸಿಂಗ್ ಅವರು 17,771 ಮತಗಳ ಅಂತರದಿಂದ ಎಸ್ಪಿ ಅಭ್ಯರ್ಥಿ ಮನೋಜ್ ಪ್ರಜಾಪತಿಯನ್ನು ಮಣಿಸಿದರು. ಬಹುಜನ ಸಮಾಜ ಪಕ್ಷದ ನೌಷದ್ ಅಲಿ ಮೂರನೇ ಸ್ಥಾನ ಪಡೆದರು.
ಬಾಧರ್ಘಾಟ್ನಲ್ಲಿ ಬಿಜೆಪಿಗೆ ಜಯ; ಕೈ ಪಾಳಯದಲ್ಲೂ ಮಂದಹಾಸ:
ತ್ರಿಪುರಾದ ಬಾಧರ್ಘಾಟ್ ವಿಧಾನಸಭಾ ಉಪ ಚುನಾವಣೆಯಲ್ಲಿ ಬಿಜೆಪಿಯ ಮಿಮಿ ಮಜುಮ್ದಾರ್ ಅವರು 5,276 ಮತಗಳ ಅಂತರದಿಂದ ಸಿಪಿಐಎಂ ಅಭ್ಯರ್ಥಿ ಬುಲ್ತಿ ಬಿಸ್ವಾಸ್ ಅವರನ್ನು ಸೋಲಿಸಿದ್ದಾರೆ. ಕಾಂಗ್ರೆಸ್ನ ರತನ್ ಚಂದ್ರ ದಾಸ್ ಅವರು ಮೂರನೇ ಸ್ಥಾನ ಪಡೆದರಾದರೂ ಅವರ ಮತಗಳಿಕೆ ಪ್ರಮಾಣ ಕಳೆದ ಬಾರಿಯದಕ್ಕಿಂತ 18 ಪಟ್ಟು ಹೆಚ್ಚಾಗಿದೆ. ಬಿಜೆಪಿ ಮತ್ತು ಸಿಪಿಐಎಂ ಅಭ್ಯರ್ಥಿಗಳ ಮತ ಪ್ರಮಾಣ ಸ್ವಲ್ಪಮಟ್ಟಿಗೆ ತಗ್ಗಿದೆ.
Comments
Post a Comment