ಈದೀಗ ಬಂದ ಸುದ್ದಿ: ಉಪಚುಣಾವನೆ ಫಲಿತಾಂಶ ಬಿಜೆಪಿ ಬಿಗ್ ಗೆಲುವು! 54 ವರ್ಷದಿಂದ ಸೋಲದ ಕಾಂಗ್ರೆಸ್ ನ ಭದ್ರ ಕೋಟೆ ಛಿದ್ರ!!

ಬೆಂಗಳೂರು(ಸೆ. 27): ಕೇರಳ, ಉತ್ತರ ಪ್ರದೇಶ, ಛತ್ತೀಸ್​ಗಡ ಮತ್ತು ತ್ರಿಪುರಾ ರಾಜ್ಯಗಳ ಒಟ್ಟು 4 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಬಿಜೆಪಿ ಎರಡು ಕ್ಷೇತ್ರಗಳಲ್ಲಿ ಜಯಿಸಿದರೆ, ಕಾಂಗ್ರೆಸ್ ಹಾಗೂ ಎಲ್​ಡಿಎಫ್ ತಲಾ ಒಂದೊಂದು ಸ್ಥಾನ ಗೆದ್ದಿವೆ. ಒಟ್ಟಾರೆಯಾಗಿ, ಬಿಜೆಪಿಗೆ ಒಂದು ಸ್ಥಾನದ ನಷ್ಟವಾದರೆ, ಕಾಂಗ್ರೆಸ್ಸಿಗೆ ಒಂದು ಕಳೆದುಕೊಂಡು ಒಂದನ್ನು ಪಡೆದುಕೊಂಡಿದೆ. ಆದರೆ, ಎಡ ಒಕ್ಕೂಟ ಎಲ್​ಡಿಎಫ್ 54 ವರ್ಷಗಳ ಹೊಸ ಇತಿಹಾಸ ನಿರ್ಮಿಸಿದ್ದು ಈ ಉಪಚುನಾವಣೆಯ ಹೈಲೈಟ್ ಎನಿಸಿದೆ.


ಕೇರಳದ ಪಾಲಾ ಕ್ಷೇತ್ರದಲ್ಲಿ ಎಲ್​ಡಿಎಫ್ ಜಯಭೇರಿ ಭಾರಿಸಿ ಕಾಂಗ್ರೆಸ್ ಭದ್ರಕೋಟೆಯನ್ನು ಛಿದ್ರಗೊಳಿಸಿದೆ. ಛತ್ತೀಸ್​ಗಡದ ದಾಂತೆವಾಡ ಕ್ಷೇತ್ರವನ್ನು ಬಿಜೆಪಿಯಿಂದ ಕಾಂಗ್ರೆಸ್ ಕಿತ್ತುಕೊಂಡಿದೆ. ಉತ್ತರ ಪ್ರದೇಶದ ಹಮೀರ್​ಪುರ ಹಾಗೂ ತ್ರಿಪುರಾದ ಬಾಧರ್​ಘಾಟ್ ಕ್ಷೇತ್ರಗಳನ್ನು ಬಿಜೆಪಿ ಉಳಿಸಿಕೊಂಡಿದೆ.


ಇದನ್ನೂ ಓದಿ: ಭಾರತ-ಪಾಕಿಸ್ತಾನ ಗಡಿಯಲ್ಲಿ ಮತ್ತೊಂದು ಪಾಕ್​ ಡ್ರೋಣ್​ ವಶಕ್ಕೆ ಪಡೆದ ಪೊಲೀಸರು; 3 ದಿನದಲ್ಲಿ ಪತ್ತೆಯಾದ ಎರಡನೇ ಡ್ರೋಣ್​ ಇದು!


ಪಾಲಾದಲ್ಲಿ ಎಲ್​ಡಿಎಫ್ ಹೊಸ ಇತಿಹಾಸ:


ಕೇರಳದ ಕೊಟ್ಟಾಯಂ ಜಿಲ್ಲೆಯ ಪಾಲಾ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್​ನ ಭದ್ರಾತಿಭದ್ರಕೋಟೆ ಎನಿಸಿತ್ತು. ಕಳೆದ 54 ವರ್ಷಗಳಿಂದಲೂ ಕಾಂಗ್ರೆಸ್ ಪಕ್ಷವೇ ಇಲ್ಲಿ ಗೆಲ್ಲುತ್ತಾ ಬಂದಿತ್ತು. ಕೇರಳ ಕಾಂಗ್ರೆಸ್ ಮುಖ್ಯಸ್ಥ ಕೆ.ಎಂ. ಮಣಿ ಅವರು 1965ರಿಂದ ಇಲ್ಲಿಯವರೆಗೆ ಈ ಕ್ಷೇತ್ರದಲ್ಲಿ ಸತತ 12 ಬಾರಿ ಚುನಾವಣೆ ಗೆದ್ದು ಶಾಸಕರಾಗಿದ್ದರು. ಅವರ ನಿಧನದಿಂದ ತೆರವಾದ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಮೊದಲ ಬಾರಿಗೆ ಅಪಜಯ ಸಾಧಿಸಿದೆ. ಎಲ್​​​ಡಿಎಫ್ ಒಕ್ಕೂಟದ ಅಭ್ಯರ್ಥಿ ಮಣಿ ಸಿ. ಕಪ್ಪನ್ ಅವರು ಯುಡಿಎಫ್ ಅಭ್ಯರ್ಥಿ ಟಾಮ್ ಜೋಸ್ ಅವರನ್ನು 2,943 ಮತಗಳ ಅಂತರದಿಂದ ಸೋಲಿಸಿದ್ದಾರೆ. ಇದೇ ಸೋಮವಾರದಂದು ನಡೆದ ಚುನಾವಣೆಯಲ್ಲಿ ಪಾಲಾ ಕ್ಷೇತ್ರದಲ್ಲಿ ಶೇ. 71.41ರಷ್ಟು ಮತದಾನವಾಗಿತ್ತು.


ದಾಂತೆವಾಡದಲ್ಲಿ ಬಿಜೆಪಿಗೆ ಸೋಲು:


ಛತ್ತೀಸ್​ಗಡದ ನಕ್ಸಲ್​ಪೀಡಿತ ದಾಂತೆವಾಡ ಕ್ಷೇತ್ರವನ್ನು ಕಾಂಗ್ರೆಸ್ ಗೆದ್ದುಕೊಂಡಿದೆ. ಪರಿಶಿಷ್ಟ ಜಾತಿಗೆ ಮೀಸಲಾದ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ದೇವತಿ ಕರ್ಮಾ ಜಯಭೇರಿ ಭಾರಿಸಿದ್ದರು. ಮಾವೋವಾದಿ ದಾಳಿಯಲ್ಲಿ ಬಲಿಯಾಗಿದ್ದ ಬಿಜೆಪಿ ಶಾಸಕ ಭೀಮಾ ಮಂಡವಿ ಅವರ ನಿಧನದಿಂದ ಈ ಕ್ಷೇತ್ರ ತೆರವಾಗಿತ್ತು. ಉಪಚುನಾವಣೆಯಲ್ಲಿ ಬಿಜೆಪಿಯು ಭೀಮಾ ಮಾಂಡವಿ ಅವರ ಪತ್ನಿಯನ್ನೇ ಕಣಕ್ಕಿಳಿಸಿತ್ತು. ಆದರೆ, ಗಂಡನ ಭೀಕರ ಸಾವಿನ ಅನುಕಂಪದ ಅಲೆಯಿಂದ ಗೆಲ್ಲುವ ಅವರ ಪತ್ನಿಯ ನಿರೀಕ್ಷೆ ಕೈಗೂಡಲಿಲ್ಲ.


ಇದನ್ನೂ ಓದಿ: ಪಾಕ್ ಉಗ್ರರು ಗಡಿ ನುಸುಳುವ ವಿಡಿಯೋ ಬಿಡುಗಡೆ ಮಾಡಿದ ಸೇನೆ; ನುಸುಳುಕೋರರನ್ನು ಹಿಮ್ಮೆಟ್ಟಿಸಿದ ಸೈನಿಕರು


ಹಮೀರ್​ಪುರದಲ್ಲಿ ಬಿಜೆಪಿಗೆ ಗೆಲುವು:


ಉತ್ತರ ಪ್ರದೇಶದ ಹಮೀರ್​ಪುರ ವಿಧಾನಸಭಾ ಕ್ಷೇತ್ರವನ್ನು ಬಿಜೆಪಿ ಉಳಿಸಿಕೊಂಡಿದೆ. ಕೊಲೆ ಪ್ರಕರಣವೊಂದರ ಸಂಬಂಧ ಬಿಜೆಪಿ ಶಾಸಕ ಅಶೋಕ್ ಕುಮಾರ್ ಚಾಂಡೇಲ್ ಅವರು ಶಿಕ್ಷೆಗೆ ಗುರಿಯಾಗಿ ಜೈಲುಪಾಲಾದ್ದರಿಂದ ಕ್ಷೇತ್ರ ತೆರವಾಗಿತ್ತು. ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಯುವರಾಜ್ ಸಿಂಗ್ ಅವರು 17,771 ಮತಗಳ ಅಂತರದಿಂದ ಎಸ್​ಪಿ ಅಭ್ಯರ್ಥಿ ಮನೋಜ್ ಪ್ರಜಾಪತಿಯನ್ನು ಮಣಿಸಿದರು. ಬಹುಜನ ಸಮಾಜ ಪಕ್ಷದ ನೌಷದ್ ಅಲಿ ಮೂರನೇ ಸ್ಥಾನ ಪಡೆದರು.


ಬಾಧರ್​ಘಾಟ್​ನಲ್ಲಿ ಬಿಜೆಪಿಗೆ ಜಯ; ಕೈ ಪಾಳಯದಲ್ಲೂ ಮಂದಹಾಸ:


ತ್ರಿಪುರಾದ ಬಾಧರ್​ಘಾಟ್ ವಿಧಾನಸಭಾ ಉಪ ಚುನಾವಣೆಯಲ್ಲಿ ಬಿಜೆಪಿಯ ಮಿಮಿ ಮಜುಮ್ದಾರ್ ಅವರು 5,276 ಮತಗಳ ಅಂತರದಿಂದ ಸಿಪಿಐಎಂ ಅಭ್ಯರ್ಥಿ ಬುಲ್ತಿ ಬಿಸ್ವಾಸ್ ಅವರನ್ನು ಸೋಲಿಸಿದ್ದಾರೆ. ಕಾಂಗ್ರೆಸ್​ನ ರತನ್ ಚಂದ್ರ ದಾಸ್ ಅವರು ಮೂರನೇ ಸ್ಥಾನ ಪಡೆದರಾದರೂ ಅವರ ಮತಗಳಿಕೆ ಪ್ರಮಾಣ ಕಳೆದ ಬಾರಿಯದಕ್ಕಿಂತ 18 ಪಟ್ಟು ಹೆಚ್ಚಾಗಿದೆ. ಬಿಜೆಪಿ ಮತ್ತು ಸಿಪಿಐಎಂ ಅಭ್ಯರ್ಥಿಗಳ ಮತ ಪ್ರಮಾಣ ಸ್ವಲ್ಪಮಟ್ಟಿಗೆ ತಗ್ಗಿದೆ.


Comments