ಬಿಗ್ ನ್ಯೂಸ್: ನಟಿ ರಮ್ಯಾಗೆ ಕಾಂಗ್ರೆಸ್ ನಿಂದಲೇ ಬಿಗ್ ಶಾಕ್!!

ನಟಿ ಹಾಗೂ ಮಾಜಿ ಸಂಸದೆಯಾಗಿದ್ದ ರಮ್ಯಾ ಅವರು ಈ ಬಾರಿ ಲೋಕಸಭಾ ಚುನಾವಣೆಯ ನಂತರ ರಾಷ್ಟ್ರೀಯ ಕಾಂಗ್ರೆಸ್ ನ ಸಾಮಾಜಿಕ ಜಾಲತಾಣದ ತಮ್ಮ ಕಾರ್ಯವನ್ನು ಇದ್ದಕ್ಕಿದ್ದಂತೆ ನಿಲ್ಲಿಸಿ, ಟ್ವಿಟರ್ ನಲ್ಲಿ ತಾವು ಮಾಡಿದ ಎಲ್ಲಾ ಟ್ವೀಟ್ ಗಳು ಡಿಲೀಟ್ ಆಗಿದ್ದವು. ಅದಾದ ನಂತರ ಅವರು ಮತ್ತೆ ಕಾಂಗ್ರೆಸ್ ಪರವಾಗಿ ಮಾತನಾಡಿದ್ದು, ಬಿಜೆಪಿಯ ಕಾಲೆಳೆಯುವ ಟ್ವೀಟ್ ಮಾಡಿದ್ದು ಇಲ್ಲ. ರಮ್ಯಾ ಅವರು ಕಾಂಗ್ರೆಸ್ ನ ಸೋಷಿಯಲ್ ಮೀಡಿಯಾ ಹೆಡ್ ಆಗಿದ್ದಾಗ ಬಿಜೆಪಿ ಹಾಗೂ ಪ್ರಧಾನಿ ಮೋದಿಯವರನ್ನು ಟೀಕಿಸುತ್ತಾ, ಸದಾ ಒಂದಿಲ್ಲೊಂದು ಪೋಸ್ಟ್ ಹಾಕಿ, ಅದರಿಂದ ಟೀಕೆಗಳಿಗೆ ಗುರಿಯಾಗಿದ್ದು ಕೂಡಾ ಹೌದು‌. ಆದರೆ ಇದ್ದಕ್ಕಿದಂತೆ ಅದೆಲ್ಲಾ ನಿಂತು ಹೋಯಿತು.

ರಮ್ಯಾ ಅವರು ದಿವ್ಯ ಸ್ಪಂದನಾ ಹೆಸರಿನ ಮೂಲಕ ಟ್ವಿಟರ್ ನಲ್ಲಿ ಸಕ್ರಿಯರಾಗಿರುತ್ತಿದ್ದರು. ಅವರು ಏಕಾ ಏಕೀ ಟ್ಟಿಟರ್ ಖಾತೆ ನಿಷ್ಕ್ರಿಯಗೊಳಿಸಿದ ಮೇಲೆ ಅದರ ಬಗ್ಗೆ ಹಲವು ಸುದ್ದಿಗಳು ಹರಡಿದ್ದವು. ಆದರೆ ಈಗ ಅದೆಲ್ಲವುಗಳಿಗೂ ತೆರೆ ಬಿದ್ದಿದೆ. ರಮ್ಯಾ ಅವರ ಜಾಗಕ್ಕೆ ರೋಹನ್ ಗುಪ್ತಾ ಎಐಸಿಸಿಯ ಸಾಮಾಜಿಕ ಜಾಲತಾಣದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಈ ವಿಷಯದ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಅವರು ಆದೇಶ ಹೊರಡಿಸಿದ್ದಾರೆ.
ಅಲ್ಲಿಗೆ ಅಧಿಕೃತವಾಗಿ ರಮ್ಯಾ ಅವರು ಇನ್ನು ಮುಂದೆ ಕಾಂಗ್ರೆಸ್ ನ ಸೋಷಿಯಲ್ ಮೀಡಿಯಾ ಅಧ್ಯಕ್ಷರಾಗಿರುವುದಿಲ್ಲವೆಂಬುದು ತಿಳಿದಾಗಿದೆ.

ದಿವ್ಯಸ್ಪಂದನಾ ರಮ್ಯಾ ಈ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರ ರಾಜೀನಾಮೆಯ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ರೋಹನ್ ಗುಪ್ತಾರನ್ನ ನೇಮಕ ಮಾಡಲಾಗಿದೆ. ರೋಹನ್ ಗುಪ್ತಾ ಇದಕ್ಕಿಂತ ಮೊದಲು ಗುಜರಾತ್ ಕಾಂಗ್ರೆಸ್​ ಸೋಶಿಯಲ್ ಮೀಡಿಯಾ ವಿಭಾಗದಲ್ಲಿ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸುತ್ತಿದ್ದರು. ಈಗ ಅವರನ್ನೇ ಎಐಸಿಸಿ ಸೋಶಿಯಲ್ ಮೀಡಿಯಾ ವಿಭಾಗದ ಮುಖ್ಯಸ್ಥರನ್ನಾಗಿ ನೇಮಿಸಿದೆ ಕಾಂಗ್ರೆಸ್. ರಮ್ಯ ಅವರು ಸಕ್ರಿಯ ರಾಜಕಾರಣದಿಂದ ದೂರ ಸರಿದಿದ್ದರೂ , ಮೀಡಿಯಾ ಹೆಡ್ ಆಗಿ ಕಾಂಗ್ರೆಸ್ ನಲ್ಲಿ ಇದ್ದರು‌.

Comments