ಈಗ ಬಂದ ಸುದ್ದಿ: ಸಿ ಎಂ ಯಡಿಯೂರಪ್ಪನವರಿಂದ ಬಿಗ್ ಮಾಸ್ಟರ್ ಪ್ಲಾನ್​..! ಯಡಿಯೂರಪ್ಪನವರು ನೀಡಿದರು ಗುಡ್ ನ್ಯೂಸ್!..

ಬೆಂಗಳೂರು: ಬಿಜೆಪಿ ಸರ್ಕಾರ ಕೂಡ ಶಾಸಕರ ಅಸಮಾಧಾನದಿಂದ ಹೊರತಾಗಿಲ್ಲ. ಇಂದು 10 ಜಿಲ್ಲೆಗಳ ಶಾಸಕರ ಸಭೆ ನಡೆಸಿದ ಸಿಎಂ ಯಡಿಯೂರಪ್ಪ, ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಂದಾದರು.

ಸರ್ಕಾರ ರಚನೆಯ ಒಂದೂವರೆ ತಿಂಗಳ ನಂತರ ಸಿಎಂ ಯಡಿಯೂರಪ್ಪ ಪಕ್ಷದ ಶಾಸಕರ ಜೊತೆ ಸರಣಿ ಸಭೆ ನಡೆಸಿದರು. ಶಾಸಕರಲ್ಲಿ ಮನೆ ಮಾಡಿರುವ ಗೊಂದಲ, ಬೇಸರ ನಿವಾರಿಸುವ ಮೂಲಕ ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಂದಾದರು. ಪ್ರವಾಹಪೀಡಿತ 10 ಜಿಲ್ಲೆಗಳ ಬಿಜೆಪಿ ಶಾಸಕರ ಸಭೆ ಕರೆದು, ಅವರ ಸಮಸ್ಯೆ ಆಲಿಸಿದರು.

ಔಪಚಾರಿಕವಾಗಿ ಅಭಿವೃದ್ಧಿ ಮತ್ತು ಪ್ರವಾಹ ಕುರಿತು ಚರ್ಚೆ ನಡೆಸಿದ ಸಿಎಂ, ಸಂತ್ರಸ್ತರಿಗೆ ಮನೆ ನಿರ್ಮಾಣ, ಹಾನಿಗೊಳಗಾದ ಶಾಲಾ ಕಟ್ಟಡಗಳ ದುರಸ್ತಿ, ನೀರಾವರಿ ಯೋಜನೆಗಳಿಗೆ ಹಣ, ಶಾಸಕರ ಕ್ಷೇತ್ರಗಳಲ್ಲಿ ರಸ್ತೆಗಳ ಅಭಿವೃದ್ಧಿಗೆ ತಲಾ 25 ಕೋಟಿ ಅನುದಾನದ ಭರವಸೆ ನೀಡಿದ್ದಾರೆ.

ಸಭೆಗೆ ಕೆಲ ಶಾಸಕರು, ಮಾಜಿ ಸಚಿವರು ಗೈರಾಗಿದ್ದರು. 10 ಜಿಲ್ಲೆಗಳ ಪೈಕಿ ಪ್ರವಾಹದಿಂದ ಹೆಚ್ಚು ತೊಂದರೆಗೆ ಒಳಗಾಗಿದ್ದು ಬೆಳಗಾವಿ ಜಿಲ್ಲೆ. ಹೀಗಾಗಿ, ಮೊದಲಿಗೆ ಆ ಜಿಲ್ಲೆಯ ಶಾಸಕರ ಜೊತೆ ಸಿಎಂ ಚರ್ಚಿಸಿದರು. ಸಚಿವೆ ಶಶಿಕಲಾ ಜೊಲ್ಲೆ, ಕುಡುಚಿ ಶಾಸಕ ಪಿ.ರಾಜೀವ್, ಅನಿಲ್ ಬೆನಕೆ ಮತ್ತು ಯಾದವಾಡ ಮಾತ್ರ ಹಾಜರಾಗಿದರು. ಆದರೆ, ಉಮೇಶ್ ಕತ್ತಿ, ಬಾಲಚಂದ್ರ ಜಾರಕಿಹೊಳಿ ಗೈರಾಗಿದ್ದರು.

ಕೇಂದ್ರದ ಅನುದಾನ ವಿಳಂಬ ಕುರಿತು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಸಂತ್ರಸ್ತರಿಗೆ ಮನೆ ಕಟ್ಟಿಸಿಕೊಡುವುದಾಗಿ ಸರ್ಕಾರ ಹೇಳಿದೆ. ಆದರೆ ಈವರೆಗೂ ಈ ಕೆಲಸ ವೇಗ ಪಡೆದಿಲ್ಲ. ಗೃಹೋಪಯೋಗಿ ವಸ್ತುಗಳಿಗಾಗಿ ಕೊಡ್ತಿರುವ10 ಸಾವಿರ ರೂಪಾಯಿ ಸಾಕಾಗ್ತಿಲ. ಮನೆ ಕಳೆದುಕೊಂಡವರಿಗೆ 5 ಲಕ್ಷ ಸಾಕಾಗಲ್ಲ. ಇನ್ನೂ ಹೆಚ್ಚು ಹಣ ನೀಡಬೇಕು ಎಂದು ಶಾಸಕರು ಬೇಡಿಕೆ ಇಟ್ಟಿದ್ದಾರೆ.

ಅನರ್ಹ ಶಾಸಕ ಶ್ರೀಮಂತ ಪಾಟೀಲ್ ಸಭೆಯಲ್ಲಿ ಭಾಗಿಯಾಗೋ ಮೂಲಕ ಕುತೂಹಲಕ್ಕೆ ಹುಟ್ಟಿಸಿದರು. ನೆರೆಪೀಡಿತ ಪ್ರದೇಶಗಳ ಪ್ರಗತಿ ಪರಿಶೀಲನೆ ಅಂತ ಹೇಳ್ಕೊಂಡು ಸಭೆ ನಡೆಸಿದರು, ಕೂಡ ಹಲವು ಅನುಮಾನಗಳಿಗೂ ಕಾರಣವಾಗಿದೆ. ವಿರೋಧ ಪಕ್ಷಗಳ ಶಾಸಕರ ಬಿಟ್ಟು ಸಭೆ ನಡೆಸಿದ್ದು ಒಂದಾದರೆ, ಬಿಜೆಪಿಯ ಕೆಲ ಶಾಸಕರು ಗೈರಾಗಿದ್ದು ಮತ್ತೊಂದು ಕುತೂಹಲ.

Comments