ಬಿಗ್ ಬ್ರೇಕಿಂಗ್ : ಯಡಿಯೂರಪ್ಪನವರಿಂದ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ : 'ಬಿಸ್ ವೈ ಈ ಜಿಲ್ಲೆಯನ್ನು ತನ್ನಲಿಯೇ ಇರಿಸಿಕೊಳ್ಳಲು' ಕಾರಣವೇನು? ಹೀಗಿದೆ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ!..

ಬೆಂಗಳೂರು : ಅಂತೂ ಇಂತು, ಸಚಿವರಿಗೆ ಖಾತೆ ಹಂಚಿಕೆಯ ನಂತ್ರ, ಇದೀಗ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿದ್ದಾರೆ. ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನವನ್ನು ತಮ್ಮ ಬಳಿಯಲ್ಲಿಯೇ ಇಟ್ಟುಕೊಂಡಿರುವ ಅವರು, ಇತರೆ ಜಿಲ್ಲೆಗಳ ಉಸ್ತುವಾರಿಯನ್ನು ಸಚಿವರಿಗೆ ನೀಡಿದ್ದಾರೆ.

ಹೀಗಿದೆ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ - ಬೆಂಗಳೂರು ನಗರಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ - ಬಾಗಲಕೋಟೆ, ಕಲಬುರ್ಗಿಉಪ ಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ್ - ರಾಮನಗರ, ಚಿಕ್ಕಬಳ್ಳಾಪುರಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ - ಬಳ್ಳಾರಿ, ಕೊಪ್ಪಳಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆಎಸ್ ಈಶ್ವರಪ್ಪ - ಶಿವಮೊಗ್ಗ, ದಾವಣಗೆರೆಕಂದಾಯ ಸಚಿವ ಆರ್ ಅಶೋಕ್ - ಬೆಂಗಳೂರು ಗ್ರಾಮಾಂತರ, ಮಂಡ್ಯಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ - ಬೆಳಗಾವಿ, ಹುಬ್ಬಳ್ಳಿ-ಧಾರವಾಡಆರೋಗ್ಯ ಸಚಿವ ಬಿ ಶ್ರೀರಾಮುಲು - ರಾಯಚೂರು, ಚಿತ್ರದುರ್ಗಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ - ಚಾಮರಾಜನಗರವಸತಿ ಸಚಿವ ವಿ ಸೋಮಣ್ಣ - ಮೈಸೂರು, ಮಡಿಕೇರಿಪ್ರವಾಸೋದ್ಯಮ ಸಚಿವ ಸಿಟಿ ರವಿ - ಚಿಕ್ಕಮಗಳೂರುಗೃಹ ಸಚಿವ ಬಸವರಾಜ ಬೊಮ್ಮಾಯಿ - ಉಡುಪಿ, ಹಾವೇರಿಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ - ಮಂಗಳೂರುಕಾನೂನು, ಸಂಸದೀಯ ವ್ಯವಹಾರಗಳ ಸಚಿವ ಜೆಸಿ ಮಾಧುಸ್ವಾಮಿ - ತುಮಕೂರು, ಹಾಸನಗಣಿ ಮತ್ತು ಭ-ವಿಜ್ಞಾನ ಸಚಿವ ಚಂದ್ರಕಾಂತಗೌಡ ಚೆನ್ನಪ್ಪಗೌಡ ಪಾಟೀಲ್ - ಗದಗ, ವಿಜಯಪುರಅಬಕಾರಿ ಸಚಿವ ಹೆಚ್ ನಾಗೇಶ್ - ಕೋಲಾರಪಶು ಸಂಗೋಪನೆ ಸಚಿವ - ಪ್ರಭು ಚೌವ್ಹಾಣ್ - ಬೀದರ್, ಯಾದಗಿರಿಮಹಿಳಾ ಮತ್ತು ಮಕ್ಕಳಾಭಿವೃದ್ಧಿ, ವಿಕಲಚೇನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವೆ ಜೊಲ್ಲೆ ಶಶಿಕಲಾ ಅಣ್ಣಾ ಸಹೇಬ್ - ಉತ್ತರಕನ್ನಡ

ಒಟ್ಟಾರೆಯಾಗಿ ಇಷ್ಟು ದಿನ ನೆನೆಗುದಿಗೆ ಬಿದ್ದಿದ್ದ ಜಿಲ್ಲಾ ಉಸ್ತುವಾರಿ ಸಚಿವರನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇಮಕ ಮಾಡಿದ್ದಾರೆ.
ಈ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಲು ಸಚಿವರಿಗೆ ಖಾತೆಯ ಜೊತೆ, ಜೊತೆಗೆ ಮತ್ತೊಂದು ಜವಾಬ್ದಾರಿಯನ್ನು ಹೊರಿಸಿದ್ದಾರೆ.

Comments