ಸಿದ್ದರಾಮಯ್ಯನಿಗೆ ಬಿಗ್ ಶಾಕ್ ಕೊಟ್ಟ ಯಡಿಯೂರಪ್ಪ !! ಜೈಲಿಗೆ ಹೋಗ್ತಾನ ಸಿದ್ದು!

ಬೆಂಗಳೂರು: ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿನ ಐದು ಹಗರಣಗಳ ಬಗ್ಗೆ ತನಿಖೆ ನಡೆಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶಿಸಿದ್ದಾರೆ. ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಅವರು ಆರೋಪಿಸಿದ್ದ 9014 ಕೋಟಿ ಮೊತ್ತದ ಕೃಷಿಭಾಗ್ಯ, 1066 ಕೋಟಿ ಮೊತ್ತದ ತ್ಯಾಜ್ಯ ವಿಲೇವಾರಿ ಹಗರಣ, 4010 ಕೋಟಿ ಮೊತ್ತದ ವೈಜ್ಞಾನಿಕ ತ್ಯಾಜ್ಯ ಸಂಸ್ಕರಣಾ ಘಟಕಗಳ ನಿರ್ಮಾಣ ಹಗರಣ,

96 ಕೋಟಿ ಮೊತ್ತದ ತ್ಯಾಜ್ಯ ವಿಲೇವಾರಿ ವಾಹನಗಳ ಖರೀದಿ ನಿರ್ವಹಣಾ ಗುತ್ತಿಗೆ (ಟಿಪಿಎಸ್) ಹಗರಣ ಹಾಗೂ ಬೆಳ್ಳಳ್ಳಿ, ಬಾಗಲೂರು, ಮಿಟ್ಟಗಾನಹಳ್ಳಿ ಕ್ವಾರಿಗಳಿಗೆ ಲೈನರ್‍ಗಳ ಅಳವಡಿಕೆ ಹೆಸರಿನಲ್ಲಿ ನಡೆದಿರುವ 109 ಕೋಟಿ ಹಗರಣಗಳ ಬಗ್ಗೆ ತನಿಖೆ ನಡೆಸಿ ಎರಡು ತಿಂಗಳೊಳಗೆ ಸಮಗ್ರ ವರದಿ ನೀಡುವಂತೆ ಆದೇಶಿಸಲಾಗಿದೆ.

ಈ ಹಗರಣಗಳ ಬಗ್ಗೆ ಹಲವಾರು ದೂರುಗಳು ಬಂದಿರುವುದು ಮತ್ತು ಮಾಧ್ಯಮಗಳಲ್ಲಿ ವರದಿ ಬಂದಿರುವ ಹಿನ್ನೆಲೆಯಲ್ಲಿ ತನಿಖೆ ನಡೆಸಿ ವರದಿ ನೀಡುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ.
ಕೃಷಿ ಭಾಗ್ಯ ಯೋಜನೆಗೆ ಸಂಬಂಧಿಸಿದಂತೆ 131 ತಾಲ್ಲೂಕುಗಳಲ್ಲಿ ಆಯಾ ಜಿಲ್ಲಾ ಕೃಷಿ ನಿರ್ದೇಶಕರುಗಳು ಖುದ್ದು ತಪಾಸಣೆ ನಡೆಸಿ ಪರಿಶೀಲನಾ ವರದಿ ಸಲ್ಲಿಸುವಂತೆ ಮುಖ್ಯ ಕಾರ್ಯದರ್ಶಿಯವರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಆದೇಶಿಸಿದ್ದಾರೆ.

ಮಾಜಿ ಸಚಿವರಾದ ಕೃಷ್ಣಭೈರೇಗೌಡ, ಕೃಷಿ ಇಲಾಖೆ ಕಾರ್ಯದರ್ಶಿಗಳು, 26 ಜಿಲ್ಲೆಗಳ ಕೃಷಿ ಇಲಾಖೆ ಕೃಷಿ ನಿರ್ದೇಶಕರು, 131 ತಾಲ್ಲೂಕುಗಳ ಉಪನಿರ್ದೇಶಕರುಗಳು ಹಾಗೂ ತ್ಯಾಜ್ಯ ವಿಲೇವಾರಿ ಕಾರ್ಯಗಳಲ್ಲಿ ನಡೆದಿರುವ ಹಗರಣಗಳಿಗೆ ಸಂಬಂಧಿಸಿದಂತೆ ಕೆ.ಜೆ.ಜಾರ್ಜ್, 41 ಮಂದಿ ಕಸ ವಿಲೇವಾರಿ ಗುತ್ತಿಗೆದಾರರು, ಟಿಪಿಎಸ್ ಸಂಸ್ಥೆ ಮುಖ್ಯಸ್ಥರು, ರಾಣಾಜಾರ್ಜ್ ಪಾಲುದಾರ ಸಂದೀಪ್‍ರೆಡ್ಡಿ ಸೇರಿದಂತೆ ಹಲವು ಮಂದಿ ರಾಜಕಾರಣಿಗಳು, ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಸಂಕಷ್ಟ ಎದುರಾಗಲಿದೆ.
ವರ್ಷವೊಂದಕ್ಕೆ ತ್ಯಾಜ್ಯ ವಿಲೇವಾರಿಗೆ 1067 ಕೋಟಿ ರೂ.ಗಳನ್ನು ಬಿಬಿಎಂಪಿ ವೆಚ್ಚ ಮಾಡುತ್ತಿದೆ. ಇದರಲ್ಲಿ ಭಾರೀ ಹಗರಣವೇ ನಡೆದಿದೆ ಎಂದು ಎನ್.ಆರ್.ರಮೇಶ್ ಆರೋಪಿಸಿ ತನಿಖೆಗೆ ಆಗ್ರಹಿಸಿದ್ದಾರೆ. ಸುಮಾರು 4010 ಕೋಟಿ ರೂ.ನಷ್ಟು ಹಣ ವೆಚ್ಚ ಮಾಡಿ ಏಳು ತ್ಯಾಜ್ಯ ವೈಜ್ಞಾನಿಕ ಸಂಸ್ಕರಣಾ ಘಟಕಗಳನ್ನು ನಿರ್ಮಾಣ ಮಾಡಿದ್ದು, ಈ ಪೈಕಿ ಬಹುತೇಕ ಘಟಕಗಳು ಕಾರ್ಯನಿರ್ವಹಿಸದೆ ಸ್ಥಗಿತಗೊಂಡಿವೆ. ಮೆಕ್ಯಾನಿಕಲ್, ಸ್ವೀಪರ್‍ಗಳು ಮತ್ತು ಕಾಂಪ್ಯಾಕ್ಟರ್‍ಗಳ ಖರೀದಿ ಮತ್ತು ನಿರ್ವಹಣೆಗೆ ನೂರಾರು ಕೋಟಿ ರೂ. ಅನುಗತ್ಯ ವೆಚ್ಚ ಮಾಡಲಾಗಿದೆ.
ಬಾಗಲೂರು, ಮಿಟ್ಟಗಾನಹಳ್ಳಿ, ಬೆಳ್ಳಳ್ಳಿ ಕ್ವಾರಿಗಳಿಗೆ ನೂರಾರು ಕೋಟಿ ರೂ. ವೆಚ್ಚ ಮಾಡಿ ಅಂತಾರಾಷ್ಟ್ರೀಯ ಗುಣಮಟ್ಟದ ಲೈನರ್‍ಗಳನ್ನು ಅಳವಡಿಸುವುದರಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ ಎಂದು ಹಲವು ದಾಖಲೆಗಳ ಸಮೇತ ಆರೋಪಿಸಿದ್ದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ತನಿಖೆಗೆ ಆದೇಶಿಸಿದ್ದಾರೆ.

ಕೀ ಟ್ಯಾಗ್ಸ್: ನರೇಂದ್ರ ಮೋದಿ, ಯಶ್, ಯಡಿಯೂರಪ್ಪ, ಸಿದ್ದರಾಮಯ್ಯ, ಭಾರತ, ಕರ್ನಾಟಕ ರಾಜಕೀಯ, ನಮ್ಮ ಭಾರತ, ಕುಮಾರಸ್ವಾಮಿ, ದೇವೇಗೌಡ, ದರ್ಶನ್, ರಚಿತಾ ರಾಮ್, ವಿಜಯ್ ದೇವರಕೊಂಡ, ಖುಷ್ಬೂ, ಅಕ್ಷಯ್ ಕುಮಾರ್


Comments