ಈದೀಗ ಬಂದ ಸುದ್ದಿ: ಅನರ್ಹ ಶಾಸಕರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದ ಅಮಿತ್ ಶಾ !!

ಅನರ್ಹ ಶಾಸಕರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಭಯ ನೀಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಭೇಟಿಯ ಬಳಿಕ ಪ್ಲಾನ್ ಬಿ ಜಾರಿಗೆ ಅಭಯ ನೀಡಿದ್ದಾರೆ.

ನಾಳೆ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದ್ದು, ಅನರ್ಹರ ಮನವಿಗೆ ಮನ್ನಣೆ ಸಿಗುವ ವಿಶ್ವಾಸದಲ್ಲಿ ಸಿಎಂ ಇದ್ದಾರೆ.

ಸುಪ್ರೀಂಕೋರ್ಟ್ ವ್ಯತಿರಿಕ್ತ ಆದೇಶ ನೀಡಿದರೆ ಪ್ಲಾನ್-ಬಿ ಜಾರಿಗೆ ಅಮಿತ್ ಶಾ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಉಪ ಚುನಾವಣೆಯಲ್ಲಿ ಅನರ್ಹ ಶಾಸಕರ ಸಂಬಂಧಿಕರ ಸ್ಪರ್ಧೆಗೆ ಅಮಿತ್ ಶಾ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

Comments