ಬೆಂಗಳೂರು: ಶರತ್ ಬಚ್ಚೇಗೌಡಗೆ ಹೊಸಕೋಟೆ ಉಪ-ಚುನಾವಣೆ ಬಿಜೆಪಿ ಟಿಕೆಟ್ ನೀಡುವಂತೆ ಕಾರ್ಯಕರ್ತರು ಇಂದು ಡಾಲರ್ಸ್ ಕಾಲೋನಿಯ ಸಿಎಂ ನಿವಾಸದೆದುರು ಜಮಾಯಿಸಿ ಒತ್ತಾಯಿಸಿದ ಹಿನ್ನೆಲೆ ಸಿಎಂ ಯಡಿಯೂರಪ್ಪ ಸ್ವತಃ ಶರತ್ ಬಚ್ಚೇಗೌಡಗೆ ಫೋನ್ ಮಾಡಿ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಈ ಶರತ್ ಮೊದಿಯ ಆಪ್ತ. ಈವನಿಗೆ ಮೊದಿಯೆಂದರೆ ಇಷ್ಟ. ಈವನಿಗೆ ಮೊದಿಯ ನಿಯೋಗದಲ್ಲಿ ಉಪಚುಣಾವನೆಗೆ ಟಿಕೆಟ್ ನಿದಿಲಿದ್ದಾರೆ.
ಶರತ್ ಬಚ್ಚೇಗೌಡ ಜೊತೆ ಫೋನ್ ಮೂಲಕ ಮಾತನಾಡಿದ ಯಡಿಯೂರಪ್ಪ, ನೋಡಪ್ಪಾ, ನೀನು ಇನ್ನೂ ಚಿಕ್ಕ ವಯಸ್ಸಿನವನು, ನಿನಗೆ ರಾಜಕೀಯವಾಗಿ ಮೇಲೆ ಬರಲು ಸಾಕಷ್ಟು ಅವಕಾಶಗಳಿವೆ. ನಿನ್ನ ಕ್ಷೇತ್ರದ ಕಾರ್ಯಕರ್ತರು ಬೆಳಿಗ್ಗೆ ಮನೆಯ ಬಳಿ ಬಂದಿದ್ರು, ಘೋಷಣೆಗಳನ್ನ ಕೂಗಿದ್ರು, ನಿನಗೆ ಹೊಸಕೋಟೆ ಉಪ-ಚುನಾವಣೆಯ ಬಿಜೆಪಿ ಟಿಕೆಟ್ ನೀಡುವಂತೆ ಒತ್ತಾಯಿಸಿದ್ರು. ಎಂ.ಟಿ.ಬಿ.ನಾಗರಾಜ್ ನಮ್ಮನ್ನು ಕಷ್ಟ ಕಾಲದಲ್ಲಿ ಕೈ ಹಿಡಿದಿದ್ದಾರೆ. ಈಗ ಅವರಿಗೆ ಅಥವಾ ಅವರ ಮಗನಿಗೆ ಟಿಕೆಟ್ ನೀಡಬೇಕು ಅಲ್ವಾ?
ಇದು ನಿನಗೆ ಗೊತ್ತಿದೆ ಅಲ್ವಾ? ನೀನು ಮೊದಲು ಮನೆಗೆ ಬಾ ಮಾತನಾಡೋಣ ಅಂತ ಹೇಳಿದ್ದಾರಂತೆ.
ಜೊತೆಗೆ ನನ್ನನ್ನು ನಂಬು. ನೀನು ಬೇರೆ ಯಾರ ಬಳಿಯೂ ಹೋಗಬೇಡ, ಮೊದಲು ನನ್ನನ್ನು ಬಂದು ಭೇಟಿಯಾಗು. ನಿನ್ನ ಸಮಸ್ಯೆಗೆ ಖಂಡಿತಾ ನಾನು ಪರಿಹಾರ ಮಾಡಿಕೊಡುತ್ತೇನೆ. ಈ ರೀತಿ ನಮ್ಮವರೇ ಮಾಡಿದ್ರೆ ಹೇಗೆ? ನನ್ನ ಮೇಲೆ ನಿನಗೆ ಗೌರವವಿದ್ರೆ, ನನ್ನ ಮಾತು ಕೇಳು. ನಿಮ್ಮ ತಂದೆ ರಾಜಕೀಯದ ಏಳು ಬೀಳುಗಳನ್ನು ನೋಡಿದ್ದಾರೆ.
ಇಂದು ವೀರಪ್ಪ ಮೊಯ್ಲಿ ಅವರ ವಿರುದ್ಧ ಗೆದ್ದು ಸಂಸತ್ ಪ್ರವೇಶಿಸಿದ್ದಾರೆ. ನಾನು ಅವರನ್ನು ಇಲ್ಲಿ ಮಂತ್ರಿ ಮಾಡಿದ್ದೆ. ನನ್ನನ್ನು ನಂಬಿ ಅವರು ನಮ್ಮ ಪಕ್ಷಕ್ಕೆ ಬಂದ್ರು. ನಾನು ಅವರ ಕೈ ಬಿಟ್ಟಿಲ್ಲ. ಹಾಗೇ ನಿನ್ನನ್ನು ಕೂಡ ಕೈ ಬಿಡುವುದಿಲ್ಲ. ನೀನು ಮನೆಗೆ ಬಾ ಮಾತನಾಡೋಣ ಎಂದು ಹೇಳಿರುವ ಯಡಿಯೂರಪ್ಪನವರ ಮಾತಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಶರತ್ ಬಚ್ಚೇಗೌಡ ಇಂದು ಅಥವಾ ನಾಳೆ ನಿಮ್ಮನ್ನು ಭೇಟಿಯಾಗುತ್ತೇನೆ ಎಂದಿದ್ದಾರಂತೆ.

Comments
Post a Comment