ಮಂಡ್ಯ ಲೋಕಸಭಾ ಕ್ಷೇತ್ರ ದಿನೇ ದಿನೇ ರಂಗೇರ್ತಾ ಇರೋದು ಸುಳ್ಳಲ್ಲ. ಅಂಬರೀಶ್ ಪತ್ನಿ ಸುಮಲತಾ ಹಾಗೂ ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ನಡುವೆ ಭಾರಿ ಪೈಪೋಟಿ ಶುರುವಾಗಿತ್ತು. ಇಷ್ಟು ದಿನ ಮಂಡ್ಯ ಕ್ಷೇತ್ರಕ್ಕೆ ಅಭ್ಯರ್ಥಿ ನಿಲ್ಲಿಸೋ ಬಗ್ಗೆ ಮೀನಾಮೇಷ ತೋರಿದ್ದ ಬಿಜೆಪಿ, ಅಭ್ಯರ್ಥಿಯ ಬದಲು ಸುಮಲತಾಗೆ ಬೆಂಬಲ ನೀಡುವ ಪ್ಲಾನ್ ನಲ್ಲಿತ್ತು. ಆದ್ರೆ ಇದೀಗ ತಮ್ಮ ಪ್ಲಾನ್ ಬದಲಿಸಿ ಸುಮಲತಾಗೆ ಶಾಕ್ ನೀಡಿದ್ದಾರೆ.
ಹೌದು. ಮಂಡ್ಯ ಕ್ಷೇತ್ರಕ್ಕೆ ಬಿಜೆಪಿಯಿಂದ ಅಭ್ಯರ್ಥಿ ಕಣಕ್ಕಿಳಿಸೋ ಬಗ್ಗೆ ಚಿಂತನೆ ನಡೆಸಿದೆ. ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಯಾಗಿರೋ ಸಿ.ಪಿ.ಯೋಗೇಶ್ವರ್ ನ್ನು ಕಣಕ್ಕಿಳಿಸಬೇಕು ಅಂತಿದ್ರೆ, ಅತ್ತ ಮಂಡ್ಯ ಕ್ಷೇತ್ರದ ಸ್ಥಳೀಯ ಅಭ್ಯರ್ಥಿ 5 ರೂಪಾಯಿ ಡಾಕ್ಟರ್ ಎಂದು ಖ್ಯಾತಿ ಪಡೆದಿರುವ ಡಾ.ಶಂಕರೇಗೌಡರನ್ನ ಕಣಕ್ಕಿಳಿಸೋ ನಿರ್ಧಾರ ಮಾಡಲಾಗಿದೆ ಎನ್ನಲಾಗಿದೆ. ಕಳೆದ ಚುನಾವಣೆಯಲ್ಲಿ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಶಂಕರೇಗೌಡ ಟಿಕೆಟ್ ಸಿಗದ ಕಾರಣ ಪಕ್ಷೇತರವಾಗಿ ನಿಂತು ಸೋತಿದ್ದರು. ಮಂಡ್ಯದಲ್ಲಿ ಕೇವಲ 5 ರೂಪಾಯಿ ಪಡೆದು ಚಿಕಿತ್ಸೆ ನೀಡುತ್ತಿರುವ ಇವರನ್ನು ಇದೀಗ ಬಿಜೆಪಿ ಗಾಳ ಹಾಕುತ್ತಿರೋದು ಮೇಲ್ನೋಟಕ್ಕೆ ಬಂಡು ಬರ್ತಿದೆ.

Comments
Post a Comment