ಮದ್ದೂರು (ಸೆ.30): ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ನೂತನ ನಿರ್ದೆಶಕರಾಗಿ ಆಯ್ಕೆಯಾಗಿರುವ ರೂಪಾ ಅವರಿಗೆ ಕರ್ನಾಟಕ ಹಾಲು ಮಹಾ ಮಂಡಳಿಯ ನಿರ್ದೆಶಕರಾಗಿ ಶೀಘ್ರ ನೇಮಕ ಮಾಡಲಾಗುವುದು ಎಂದು ಜಿಲ್ಲಾ ಮಂತ್ರಿ ಆರ್ .ಅಶೋಕ್ ಭರವಸೆ ನೀಡಿದರು.
ಮನ್ಮುಲ್ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ರೂಪಾ ಅವರಿಗೆ ಅಧ್ಯಕ್ಷ ಸ್ಥಾನ ಕೈ ತಪ್ಪಿದ ಹಿನ್ನಲೆಯಲ್ಲಿಮಾದಾಪುರದೊಡ್ಡಿ ಗ್ರಾಮದ ರೂಪ ನಿವಾಸಕ್ಕೆ ಸಚಿವರು ಆಗಮಿಸಿ ಮಾತುಕತೆ ನಡೆಸಿದರು. ಇದೇ ವೇಳೆ ಕೋಲಾರ ಸಂಸದ ಮುನಿರಾಜು, ಚಿತ್ರನಟ ಜಗ್ಗೇಶ್ ಅವರೊಂದಿಗೆ ಸಚಿವ ಆರ್ . ಅಶೋಕ್ ಭೋಜನ ಸ್ವೀಕರಿಸಿದರು. ರೂಪಾ ಜಯಗಳಿಸಿರುವುದು ಒಕ್ಕೂಟದಲ್ಲಿ ಬಿಜೆಪಿ ಮೊದಲ ಬಾರಿಗೆ ಖಾತೆ ತೆರೆದಂತಾಗಿದೆ. ಅಧ್ಯಕ್ಷ ಸ್ಥಾನ ಅವಕಾಶದಿಂದ ರೂಪ ವಂಚಿತರಾಗಿದ್ದರೂ ಸಹ ಪಕ್ಷ ನಿಷ್ಠೆ ಮೆರೆದು ವರಿಷ್ಠರ ಮಾತಿಗೆ ಮನ್ನಣೆ ನೀಡಿ ಆದೇಶ ಪಾಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಇವರ ಪಕ್ಷ ನಿಷ್ಠೆಗೆ ಒಳ್ಳೆಯ ಅವಕಾಶ ಸಿಗಲಿವೆ. ಹಾಲು ಮಹಾ ಮಂಡಲದ ನಿರ್ದೇಶಕ ಸ್ಥಾನಕ್ಕೆ ಅವರನ್ನು ನೇಮಕ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಆಶ್ವಾಸನೆ ನೀಡಿದರು.
ಪರಿಣಾಮ ಎದುರಿಸಬೇಕಾದಿತು: ಮನ್ಮುಲ್ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಎಸ್.ಪಿ. ಸ್ವಾಮಿ ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯದಿದ್ದಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಇದೇ ವೇಳೆ ಎಚ್ಚರಿಕೆ ನೀಡಿದರು. ಕೆಲವು ರಾಜಕೀಯ ಕಾರಣಗಳಿಂದಾಗಿ ಪಕ್ಷ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಪಕ್ಷ ಅವಕಾಶ ಮಾಡಿಕೊಟ್ಟಿದೆ. ಅವರು ಚುನಾವಣೆಯಲ್ಲಿ ಗೆದ್ದ ಬಳಿಕ ಹಾಲು ಒಕ್ಕೂಟದ ಬಿಜೆಪಿ ನಿರ್ದೆಶಕರು ಹಾಗೂ ಬೆಂಬಲಿತರು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮನ್ವತೆಯಿಂದ ಮುನ್ನಡೆಯಬೇಕು. ಈ ಬಗ್ಗೆ ಯಾವುದೇ ದೂರುಗಳು ಬಂದಲ್ಲಿ ಎಸ….ಪಿ. ಸ್ವಾಮಿ ವಿರುದ್ಧ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ ಎಂದು ಹೇಳಿದರು. ಈ ವೇಳೆ ಪಕ್ಷದ ಜಿಲ್ಲಾಧ್ಯಕ್ಷ ನಾಗಣ್ಣಗೌಡ, ಉಪಾಧ್ಯಕ್ಷ ಸತೀಶ್ ಇದ್ದರು.

Comments
Post a Comment