ನವದೆಹಲಿ : ಕೇಂದ್ರ ಸರಕಾರ ರೈಲ್ವೆ ಇಲಾಖೆಯ ನೌಕರರಿಗೆ ಸಿಹಿ ಸುದ್ದಿ ನೀಡಿದ್ದು, 78 ದಿನಗಳ ವೇತನವನ್ನು ಬೋನಸ್ ರೂಪದಲ್ಲಿ ನೀಡುವುದಕ್ಕೆ ಮುಂದಾಗಿದ್ದು, ಇದರ ಲಾಭವನ್ನು ಸರಿ ಸುಮಾರು 11 ಲಕ್ಷ ನೌಕರರು ಪಡೆದುಕೊಳ್ಳಲಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಇಂದು ನವದೆಹಲಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದ ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದ ಬಗ್ಗೆ ಮಾಹಿತಿ ನೀಡಿದರು, ಇದೇ ವೇಳೆ ಅವರು ಇ-ಸಿಗರೇಟ್ ನಿಷೇಧವನ್ನು ಮಾಡುವುದರ ಬಗ್ಗೆ ಕೂಡ ಕೇಂದ್ರ ಸರಕಾರ ಮುಂದಾಗಿದ್ದು, ಇನ್ಮುಂದೆ ಇ-ಸಿಗರೆಟ್‌ಗೆ ಸಂಬಂಧಿಸಿದ ಉತ್ಪಾದನೆ, ಆಮದು / ರಫ್ತು, ಸಾರಿಗೆ, ಮಾರಾಟ, ವಿತರಣೆ, ಸಂಗ್ರಹಣೆ ಮತ್ತು ಜಾಹೀರಾತುಗಳನ್ನು ನಿಷೇಧಿಸಲಾಗಿದೆ ಅಂತ ಹೇಳಿದರು.
ಇನ್ನು ಇದೇ ವೇಳೆ 11 ಲಕ್ಷ ರೈಲ್ವೆ ಉದ್ಯೋಗಿಗಳಿಗೆ, ಕೇಂದ್ರ ಸರಕಾರವು ಕಳೆದ 6 ವರ್ಷಗಳಿಂದ ಸತತವಾಗಿ, ಬೋನಸ್ ನೀಡುತ್ತಿದ್ದು ಅದರಂತೆ ಈ ಬಾರಿ ಕೂಡ 78 ದಿನಗಳ ವೇತನವನ್ನು ಬೋನಸ್ ರೂಪದಲ್ಲಿ ನೀಡಲಾಗುತ್ತಿದೆ ಅಂತ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಮಾಹಿತಿ ನೀಡಿದ್ದಾರೆ.
Comments
Post a Comment