ಆರ್ಥಿಕ ಹಿಂಜರಿತ, ನಿರುದ್ಯೋಗ ಸಹಿತ ಹಲವು ಗಂಭೀರ ಸಮಸ್ಯೆಗಳು ಕಾಡುತ್ತಿದ್ದರೂ ಪ್ರಧಾನಿ ಮೋದಿ ಅವರ ಜನಪ್ರಿಯತೆಗೆ ಯಾವುದೇ ಕುಂದು ಉಂಟಾಗಿಲ್ಲ ಎಂಬಂತೆ ಅವರಿಗೆ ಹುಟ್ಟುಹಬ್ಬಕ್ಕೆ ಶುಭ ಹಾರೈಸುವವರ, ಅವರನ್ನು ಹೊಗಳುವವರ ಸಂಖ್ಯೆ ಮಂಗಳವಾರ ಬಹು ದೊಡ್ಡದಿತ್ತು.
ಆದರೆ ಇವೆಲ್ಲವುಗಳ ನಡುವೆ ಒಂದು ಟ್ವೀಟ್ ಮಾತ್ರ ಎಲ್ಲರ ಹುಬ್ಬೇರಿಸಿದೆ ಮಾತ್ರವಲ್ಲ ಹೊಸ ವಿವಾದಕ್ಕೆ ಕಾರಣವಾಗಿದೆ. ಪ್ರಧಾನಿ ಹುಟ್ಟುಹಬ್ಬಕ್ಕೆ ಈ 'ವಿಶ್ವದಾಸ್ಪದ' ಟ್ವೀಟ್ ಮಾಡಿದ್ದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಪತ್ನಿ ಅಮೃತ ಫಡ್ನವಿಸ್ ಅವರು.
ಪ್ರಧಾನಿಯನ್ನು ಹೊಗಳುವ ಭರದಲ್ಲಿ ಅವರು ಪ್ರಧಾನಿ ಮೋದಿ ಅವರನ್ನು 'ರಾಷ್ಟ್ರಪಿತ' ಎಂದು ಬಣ್ಣಿಸಿಬಿಟ್ಟಿದ್ದಾರೆ.
"ರಾಷ್ಟ್ರಪಿತ ನರೇಂದ್ರ ಮೋದಿಜಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಅವರು ಸಮಾಜಕ್ಕೆ ನಿರಂತರ ದುಡಿಯಲು ನಮಗೆ ಪ್ರೇರಣೆ" ಎಂದು ಅಮೃತ ಟ್ವೀಟ್ ಮಾಡಿಬಿಟ್ಟಿದ್ದಾರೆ. ಈವರೆಗೆ ಮಹಾತ್ಮಾ ಗಾಂಧೀಜಿ ಅವರಿಗೆ ಮಾತ್ರ ಮೀಸಲಾಗಿದ್ದ 'ರಾಷ್ಟ್ರಪಿತ' ಬಿರುದನ್ನು ಈಗ ಮೋದಿಯವರಿಗೆ ನೀಡಿರುವ ಅಮೃತ ಅವರ ಟ್ವೀಟ್ ಗೆ ಬಂದಿರುವ ಹಲವು ಪ್ರತಿಕ್ರಿಯೆಗಳು ಇಲ್ಲಿವೆ :
ಏನೇ ಆಗಲಿ, ಪ್ರಧಾನಿ ಮೋದಿ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.
Comments
Post a Comment