ಕಾಂಗ್ರೆಸ್ ಗೆ ಶಾಕ್: ಮುರಿದು ಬಿತ್ತು ಕಾಂಗ್ರೆಸ್ ನ ಉಪಚುಣಾವನೆಯ ಲಿಸ್ಟ್!! ಕಾಂಗ್ರೆಸ್ ನ ಬಲಿಷ್ಠ ನಾಯಕನಿಗೆ ಬಿಜೆಪಿಯಿಂದ ಟಿಕೆಟ್!!

ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಅಲ್ಪೇಶ್ ಠಾಕೂರ್ ಅವರನ್ನು ಗುಜರಾತ್ ಪುಚುನಾವಣೆಯಲ್ಲಿ ಬಿಜೆಪಿ ತನ್ನ ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಅಲ್ಪೇಶ್ ಠಾಕೂರ್ 2017 ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ತಾವೇ ಸ್ಪರ್ಧಿಸಿ ಗೆದ್ದಿದ್ದ ರಾಧಾನ್ಪುರ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸಲಿದ್ದಾರೆ. ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ! ಕಾಂಗ್ರೆಸ್ ವಿರುದ್ಧ ಬಂಡಾಯವೆದ್ದಿದ್ದ ಗುಜರಾತ್‌ನ ಹಿಂದುಳಿದ ಸಮುದಾಯದ ಪ್ರಭಾವಿ ನಾಯಕ ಠಾಕೂರ್ ಇದೇ ಜುಲೈ ತಿಂಗಳಿನಲ್ಲಿ ಅಧಿಕೃತವಾಗಿ ಬಿಜೆಪಿ ಸೇರಿದ್ದರು.

ಜುಲೈ 5ರಂದು ನಡೆದ ಗುಜರಾತ್ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಮತ ಚಲಾಯಿಸಿದ್ದ ಅಲ್ಪೇಶ್ ಠಾಕೂರ್, ನಂತರ ಕಾಂಗ್ರೆಸ್ ಶಾಸಕ ಸ್ಥಾನವನ್ನು ತ್ಯಜಿಸಿದ್ದರು. ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಏಪ್ರಿಲ್ 10ರಂದು ಕಾಂಗ್ರೆಸ್ ಪಕ್ಷಕ್ಕೆ ಇಬ್ಬರೂ ರಾಜೀನಾಮೆ ಸಲ್ಲಿಸಿದ್ದರು.

ಪಕ್ಷದ ನಾಯಕರಿಂದ ಅವಮಾನವಾಗಿದೆ ಎಂದು ಆರೋಪಿಸಿದ್ದರು. ಗುಲಾಬ್ಸಿಂಹ್ ಪಿರಾಭಾಯ್ ರಜಪೂತ್ ಅವರು ತಾರಾದ್ ವಿಧಾನಸಭಾ ಕ್ಷೇತ್ರದಿಂದ, ಪಟೇಲ್ ಜಸುಭಾಯ್ ಶಿವಭಾಯ್ ಅವರು ಬಯಾದ್ ವಿಧಾನಸಭಾಕ್ಷೇತ್ರದಿಂದ,

ಧರ್ಮೇಂದ್ರಭಾಯಿ ಶಾಂತಿಲಾಲ್ ಪಟೇಲ್ ಅವರು ಅಮ್ರೈವಾಡಿ ವಿಧಾನಸಭಾ ಕ್ಷೇತ್ರದಿಂದ ಮತ್ತು ಚೌಹಾನ್ ಗುಲನ್ಸಿಂಹ್ ಸೋಮಸಿಂಹ್ ಅವರು ಲುನಾವಾಡಾ ವಿಧಾನಸಭಾಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಎಐಸಿಸಿ ಪತ್ರಿಕಾ ಪ್ರಕಟಣೆ ತಿಳಿಸಿದೆ.

Comments