ಉಪ ಚುನಾವಣೆ: ಕಾಂಗ್ರೆಸ್ ಹಾಕಿದ ತಂತ್ರಕ್ಕೆ ಬಿಎಸ್ ವೈ ತಿರುಗೇಟು! ಬೆಚ್ಚಿ ಬಿದ್ದ ಕಾಂಗ್ರೆಸ್!!

ಬೆಂಗಳೂರು: ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಇಡೀ ರಾಷ್ಟ್ರದ ಗಮನ ಸೆಳೆದಿದ್ದ ಕರ್ನಾಟಕದ ರಾಜಕೀಯ ಮತ್ತೆ ಸುದ್ದಿಯಲ್ಲಿದೆ. ಕರ್ನಾಟಕದ ಒಟ್ಟು 15 ಕ್ಷೇತ್ರಗಳಿಗೆ ಚುನಾವಣಾ ಆಯೋಗ ಉಪಚುನಾವಣೆ ಘೋಷಿಸಿದೆ. ಉಪಚುನಾವಣೆ ಬಿಜೆಪಿ ಮಟ್ಟಿಗೆ ಸರ್ಕಾರದ ಅಳಿವು, ಉಳಿವಿನ ಪ್ರಶ್ನೆಯಾಗಿದ್ದು, ಬಿಜೆಪಿ 7 ಕ್ಷೇತ್ರಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲೇ ಬೇಕಾದ ಅನಿವಾರ್ಯತೆ ಎದುರಿಸುತ್ತಿದೆ.

ಚುನಾವಣಾ ದಿನಾಂಕ ಘೋಷಣೆಯ ಬಗ್ಗೆ ಇದುವರೆಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಯಾವುದೇ ಪ್ರತಿಕ್ರಿಯೆ ನೀಡದೆ ಜಾಣ ನಡೆ ಇಟ್ಟಿದ್ದಾರೆ. ಆದರೆ ಅನರ್ಹ ಶಾಸಕರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿರುವುದರಿಂದ ಈ ಬೆಳವಣಿಗೆ ಭಾರೀ ಕುತೂಹಲ ಕೆರಳಿಸಿದೆ.

ಎಷ್ಟು ಕ್ಷೇತ್ರಗಳಲ್ಲಿ ಗೆಲ್ಲಬೇಕು? ಕರ್ನಾಟಕದಲ್ಲಿ ಒಟ್ಟು 224 ವಿಧಾನಸಭೆ ಕ್ಷೇತ್ರಗಳಿದ್ದು, ಇವುಗಳಲ್ಲಿ 17 ಕ್ಷೇತ್ರದ ಶಾಸಕರನ್ನು ಆಗಿನ ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿದ್ದರು. ಅನರ್ಹತೆಯ ನಂತರ ವಿಧಾನಸಭೆಯ ಒಟ್ಟು ಬಲ 208 ಕ್ಕೆ ಕುಸಿದಿತ್ತು. ಆದ್ದರಿಂದ ಬಿಜೆಪಿ ಸರ್ಕಾರಕ್ಕೆ ಬೇಕಿದ್ದಿದ್ದ ಮ್ಯಾಜಿಕ್ ಸಂಖ್ಯೆ 105 . ಪ್ರಸ್ತುತ ಬಿಜೆಪಿ 106 ಶಾಸಕರನ್ನು ಹೊಂದಿದ್ದು, ಉಪಚುನಾವಣೆಯ ನಂತರ ಬಹುಮತಕ್ಕೆ ಅಗತ್ಯವಿರುವ ಮ್ಯಾಜಿಕ್ ಸಂಖ್ಯೆ 113 ಕ್ಕೆ ಏರಿಕೆಯಾಗುವುದರಿಂದ ಬಿಜೆಪಿ ಕನಿಷ್ಠ ಏಳು ಕ್ಷೇತ್ರಗಳಲ್ಲಿ ಗೆಲ್ಲಲೇಬೇಕಾಗುತ್ತದೆ.

ಅನರ್ಹ ಶಾಸಕರೊಂದಿಗೆ ಯಡಿಯೂರಪ್ಪ ಮೀಟಿಂಗ್ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಬೀಳಿಸಿ, ನಂತರ ಬಿಜೆಪಿ ಜೊತೆ ಕೈಜೋಡಿಸಿ, ಚುನಾವಣೆಗೆ ನಿಂತು ಗೆಲ್ಲಬಹುದು ಎಂಬ ಯೋಚನೆಯಲ್ಲಿ ಅನರ್ಹ ಶಾಸಕರಿದ್ದರು. ಆದರೆ ಅವರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂದು ಚುನಾವಣಾ ಆಯೋಗವೇ ಹೇಳಿರುವುದು ಮತ್ತು ಅನರ್ಹತೆಗೆ ಸಂಬಂಧಿಸಿದಂತೆ ಆದೇಶ ನೀಡಲು ಕೋರ್ಟು ವಿಳಂಬ ಮಾಡುತ್ತಿರುವುದು ಶಾಸಕರಿಗೆ ಭಾರೀ ತಲೆನೋವನ್ನುಂಟು ಮಾಡಿದೆ.

ಎಲ್ಲೆಲ್ಲಿ ಉಪಚುನಾವಣೆ? ಕರ್ನಾಟಕದ ಒಟ್ಟು ಹದಿನೇಳು ಕ್ಷೇತ್ರಗಳಾದ ಚಿಕ್ಕಬಳ್ಳಾಪುರ, ಮಹಾಲಕ್ಷ್ಮಿ ಲೇಔಟ್, ಹೊಸಕೋಟೆ , ಹುಣಸೂರು, ಗೋಕಾಕ, ಯಶವಂತಪುರ, ಅಥಣಿ, ಕಾಗವಾಡ, ಶಿವಾಜಿನಗರ, ಕೆ.ಆರ್.ಪೇಟೆ, ಕೆ.ಆರ್.ಪುರಂ, ಹಿರೇಕೆರೂರು, ರಾಣೆಬೆನ್ನೂರು, ವಿಜಯನಗರ, ಯಲ್ಲಾಪುರಗಳಲ್ಲಿ ಉಪಚುನಾವಣೆ ನಡೆಯಲಿದೆ. ಕರ್ನಾಟಕ ಉಪಚುನಾವಣೆಯಲ್ಲಿ ಜೆಡಿಎಸ್ ಸ್ವತಂತ್ರ ಸ್ಪರ್ಧೆ ಉಪಚುನಾವಣೆ ದಿನಾಂಕ ಅಕ್ಟೋಬರ್ 21 ರಂದು ಮತದಾನ ನಡೆಯಲಿದ್ದು, ಫಲಿತಾಂಶ ಅಕ್ಟೋಬರ್ 24 ಕ್ಕೆ ಪ್ರಕಟವಾಗಲಿದೆ. ಸೆಪ್ಟೆಂಬರ್ 23 ಕ್ಕೆ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಸೆಪ್ಟೆಂಬರ್ 30 ನಾಮಪತ್ರ ಸಲ್ಲಿಕೆ ಕೊನೆಯ ದಿನ ಆಗಿದೆ

ಕೀ ಟ್ಯಾಗ್ಸ್:ನರೇಂದ್ರ ಮೋದಿ ,ಬಿ.ಎಸ್.ಯಡಿಯೂರಪ್ಪ ,ಸಿದ್ದರಾಮಯ್ಯ ,ರಣವೀರ್ ಸಿಂಗ್ ,ಮಹೇಂದ್ರ ಸಿಂಗ್ ಧೋನಿ,ವಿರಾಟ್ ಕೊಹ್ಲಿ, ಶಾರುಖ್ ಖಾನ್,ದೀಪಿಕಾಪಡುಕೋಣೆ,ಅಕ್ಷಯ್ ಕುಮಾರ್

Comments