ನವದೆಹಲಿ: ದೇಶವನ್ನೇ ಒಂದು ಮಾಡುವ ಶಕ್ತಿ ಹಿಂದಿ ಭಾಷೆಗೆ ಇದೆ ಎಂದು ಗೃಹ ಸಚಿವ ಅಮಿತ್ ಷಾ ಹೇಳಿದ್ದಾರೆ.
ನವದೆಹಲಿಯಲ್ಲಿ ನಡೆದ ಹಿಂದಿ ದಿವಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಷಾ, ಹಿಂದಿಯ ಪ್ರಚಾರಕ್ಕೆ ದೇಶವೇ ಒಂದಾಗಬೇಕಿದೆ. ಬೇರೆ ಬೇರೆ ಭಾಷೆಗಳನ್ನು ಹೊಂದಿರುವ ದೇಶ ನಮ್ಮದು. ಇಲ್ಲಿ ಎಲ್ಲ ಭಾಷೆಗಳಿಗೂ ತನ್ನದೆ ಆದ ಪ್ರಾಮುಖ್ಯತೆಯಿದೆ. ಆದರೆ ಜಾಗತಿಕವಾಗಿ ಭಾರತದ ಪ್ರತಿನಿಧಿತ್ವಕ್ಕೆ ಒಂದು ಭಾಷೆಯ ಅಗತ್ಯವಿದೆ. ಇಂದು ದೇಶವನ್ನು ಒಂದುಗೂಡಿಸುವ ಕಾರ್ಯ ಮಾಡುವ ಭಾಷೆಯೆಂದರೆ ಹಿಂದಿ. ಹೀಗಾಗಿ ಭಾರತೀಯರೆಲ್ಲರೂ ಅವರ ಮಾತೃಭಾಷೆಯ ಜತೆಗೆ ಹಿಂದಿಯನ್ನೂ ಬಳಕೆ ಮಾಡಬೇಕು. ಈ ಮೂಲಕ ಗಾಂಧಿ ಮತ್ತು ಸರ್ದಾರ್ ಪಟೇಲ್ರ ‘ಒಂದು ದೇಶ, ಒಂದು ಭಾಷೆ’ ಎನ್ನುವ ಕನಸು ಸಾಕಾರಗೊಳ್ಳಲಿದೆ ಎಂದರು. ಇದಕ್ಕೂ ಮೊದಲು ‘ಒಂದು ಭಾಷೆ, ಒಂದು ದೇಶ’ ಎಂದು ಟ್ವೀಟ್ ಮಾಡಿದ್ದರು.
ತಂತ್ರಜ್ಞಾನ ಕ್ಷೇತ್ರದಲ್ಲಿ ಹಿಂದಿ ಬಳಕೆ: ಇಂದಿನ ಮಕ್ಕಳು ಹಿಂದಿ ಮಾಧ್ಯದಲ್ಲಿ ಓದುತ್ತಿದ್ದರೂ ಅವರಿಗೆ 30 ನಿಮಿಷಗಳ ಕಾಲ ಸುಲಲಿತವಾಗಿ ಹಿಂದಿ ಮಾತನಾಡಲು ಸಾಧ್ಯವಾಗುವುದಿಲ್ಲ. ಇಂಗ್ಲಿಷ್ನ ಪ್ರಭಾವ ಆ ಮಟ್ಟಕ್ಕಿದೆ. ಕಾನೂನು, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹಿಂದಿ ಬಳಕೆ ಮಾಡಿದರೆ ಯುದ್ಧವನ್ನು ಅರ್ಧ ಗೆದ್ದಂತೆಯೇ ಎಂದು ಷಾ ಹೇಳಿದ್ದಾರೆ.
ಮಮತಾ, ಸ್ಟಾಲಿನ್ ವಿರೋಧ
ಷಾ ಹೇಳಿಕೆಗೆ ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್ ವಿರೋಧ ವ್ಯಕ್ತಪಡಿಸಿದ್ದು, ನಾವು ಇಂಡಿಯಾದಲ್ಲಿದ್ದೇವೆ. ಹಿಂದಿಯಾದಲ್ಲಿಲ್ಲ. ಹಿಂದಿಯನ್ನು ಒತ್ತಾಯಪೂರ್ವಕವಾಗಿ ಹೇರಿಕೆ ಮಾಡಲು ಯತ್ನಿಸಿದಲ್ಲಿ ಭಾರಿ ಪ್ರತಿಭಟನೆ ನಡೆಸಲಾಗುವುದು. ಇದು ಭಾರತದ ಏಕತೆ ಮೇಲೆ ಋಣಾತ್ಮಕ ಪ್ರಭಾವ ಬೀರಲಿದೆ. ಅಮಿತ್ ಷಾ ಹೇಳಿಕೆಯನ್ನು ಹಿಂಪಡೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಕಾಂಗ್ರೆಸ್ ಸಂಸದ ಶಶಿ ತರೂರ್ ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ. ನಾವು ಎಲ್ಲ ಭಾಷೆಗಳನ್ನೂ ಗೌರವಿಸುತ್ತೇವೆ. ಎಲ್ಲ ಸಂಸ್ಕೃತಿಗಳನ್ನು ಒಂದೇ ರೀತಿಯಲ್ಲಿ ಕಾಣುತ್ತೇವೆ. ಭಾರತದ ಬೇರೆ ಪ್ರದೇಶಗಳಿಗೆ ತೆರಳಿದಾಗ ಅಲ್ಲಿನ ಭಾಷೆ ಮಾತನಾಡುತ್ತೇವೆ. ಆದರೆ ನಮ್ಮ ಮಾತೃಭಾಷೆಯನ್ನು ಮರೆಯಲು ಸಾಧ್ಯವಿಲ್ಲ. ಮಾತೃಭಾಷೆ ಎಲ್ಲಕ್ಕಿಂತ ಮಿಗಿಲಾದುದು ಎಂದು ಬ್ಯಾನರ್ಜಿ ಹೇಳಿದ್ದಾರೆ.
ಹಿಂದಿ ಹೇರಿಕೆ ಬೇಡ
ಬೆಂಗಳೂರು: ರಾಷ್ಟ್ರೀಯ ಭಾಷೆಯಾಗಿ ಹಿಂದಿಯನ್ನು ಪರಿಗಣಿಸುವ ಅಗತ್ಯವಿದೆ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿಕೆಗೆ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ರಾಷ್ಟ್ರದ 22 ಭಾಷೆಗಳೂ ರಾಷ್ಟ್ರೀಯ ಭಾಷೆಗಳೇ ಆಗಿವೆ. ಕೇವಲ ಹಿಂದಿಗೆ ಏಕೆ ಪ್ರಾಮುಖ್ಯತೆ ಎಂದು ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.
ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಹಿಂದಿ ರಾಷ್ಟ್ರಭಾಷೆ ಎಂಬ ಸುಳ್ಳು ಪ್ರಚಾರ ನಿಲ್ಲಲಿ. ಅದು ಕನ್ನಡದಂತೆಯೇ 22 ಅಧಿಕೃತ ಭಾಷೆಗಳಲ್ಲಿ ಒಂದು ಎನ್ನುವುದು ತಿಳಿದಿರಲಿ. ಸುಳ್ಳು-ತಪು್ಪ ಮಾಹಿತಿ ಮೂಲಕ ಭಾಷೆಯನ್ನು ಬೆಳೆಸಲಾಗದು. ಭಾಷೆ ಪರಸ್ಪರ ಪ್ರೀತಿ ಮತ್ತು ಕೊಡುಕೊಳ್ಳುವಿಕೆಯಿಂದ ಬೆಳೆಯುತ್ತದೆ. ಭಾಷೆಗಳು ಜ್ಞಾನದ ಕಿಂಡಿಗಳು. ಅದನ್ನು ಪ್ರೀತಿಯಿಂದ ಬೆಳೆಸಬೇಕೇ ಹೊರತು ಒತ್ತಡದ ಮೂಲಕ ಅಲ್ಲ. ನಮ್ಮ ವಿರೋಧ ಹಿಂದಿ ಭಾಷೆಯ ಬಗ್ಗೆ ಅಲ್ಲ, ಅದನ್ನು ಬಲವಂತವಾಗಿ ಹೇರುವುದರ ಬಗ್ಗೆ ಎಂದಿದ್ದಾರೆ.
ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಟ್ವೀಟ್ ಮಾಡಿ, ಸಂವಿಧಾನದಲ್ಲಿ ಹಿಂದಿಯೊಂದೆ ಅಧಿಕೃತ ಭಾಷೆಯಲ್ಲ. ಹಿಂದಿಯೊಂದಿಗೆ ಕನ್ನಡವೂ ಅಧಿಕೃತ ಭಾಷೆ. ಕನ್ನಡ ದಿವಸವನ್ನು ದೇಶಾದ್ಯಂತ ಯಾವಾಗ ಆಚರಿಸುತ್ತೀರಿ ನರೇಂದ್ರ ಮೋದಿ ಅವರೇ? ಕನ್ನಡಿಗರು ಈ ಒಕ್ಕೂಟದ ಭಾಗವಾಗಿದ್ದಾರೆ ನೆನಪಿರಲಿ ಎಂದಿದ್ದಾರೆ.
ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಸಚಿವ ಸಿ.ಟಿ. ರವಿ, ಅಮಿತ್ ಷಾ ಹಾಗೂ ನಡ್ಡಾ ಅವರು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಬಿಜೆಪಿ ದೇಶದ ಎಲ್ಲ ಭಾಷೆಗಳಿಗೂ ಗೌರವ ನೀಡುತ್ತದೆ. ಆರ್ಎಸ್ಎಸ್ ಸಹ ಮಾತೃಭಾಷೆಗೆ ಒತ್ತು ನೀಡಿದೆ. ಕುಮಾರಸ್ವಾಮಿಗೆ ಈಗ ಕೆಲಸವಿಲ್ಲ. ಅವರ ಸರ್ಕಾರ ಇದ್ದಾಗ ಇಂಗ್ಲಿಷ್ ಮಾಧ್ಯಮ ಶಾಲೆಗೆ ಒತ್ತು ನೀಡಿದ್ದರು ಎಂದು ಹರಿಹಾಯ್ದರು.

Comments
Post a Comment