ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಬೀಳಿಸಿ ಅನರ್ಹರಾಗಿರುವ ಉಭಯ ಪಕ್ಷದ ಶಾಸಕರುಗಳಿಗೆ ಅರ್ಹ ಶಾಸಕರ ಪಟ್ಟ ತಂದುಕೊಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.
ಅನರ್ಹತೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಶಾಸಕರು ಅರ್ಜಿ ಸಲ್ಲಿಸಿದ್ದು, ಈವರೆಗೂ ಯಾವುದೇ ವಿಚಾರಣೆ ನಡೆಯದಿರುವುದು ಅನರ್ಹ ಶಾಸಕರನ್ನು ಚಿಂತೆಗೀಡುಮಾಡಿದೆ.
ಶಾಸಕರ ಪರ ತೀರ್ಪು ಬರುವ ವಿಶ್ವಾಸದ ಹಿನ್ನೆಲೆಯಲ್ಲಿ ಮುಂದೆ ಎದುರಾಗುವ ಉಪಚುನಾವಣೆಯಲ್ಲಿ 17 ಕ್ಷೇತ್ರದಲ್ಲೂ ಅನರ್ಹ ಶಾಸಕರ ಗೆಲುವಿಗೆ ಸಿಎಂ ಬಿಎಸ್ವೈ ರಣತಂತ್ರ ರೂಪಿಸಿದ್ದು, ಅನರ್ಹರಿಗೆ ಗೆಲುವಿನ ಗಿಫ್ಟ್ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.
ಉಪಚುನಾವಣೆ ಅಖಾಡದ ಸಿದ್ಧತೆಗೆ ಸದ್ಯದಲ್ಲೇ ಬಿಎಸ್ವೈ ಪ್ರವೇಶ ನೀಡಲಿದ್ದಾರೆ. ಅನರ್ಹ ಶಾಸಕರ ಬಗ್ಗೆ ಸ್ಥಳೀಯವಾಗಿ ಆಕ್ಷೇಪ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ 17 ಕ್ಷೇತ್ರಗಳ ಮುಖಂಡರ ಜತೆ ಬಿಎಸ್ವೈ ಮಹತ್ವದ ಸಭೆ ನಡೆಸಿ, ಚರ್ಚೆ ಮಾಡಲಿದ್ದಾರೆ ಎಂದು ಮಾತುಗಳು ಕೇಳಿಬರುತ್ತಿವೆ.
ಸಿಎಂ ಬಿಎಸ್ವೈ ದೆಹಲಿಗೆ ಹೋಗಿ ಬಂದ ಬಳಿಕ ಉಪಚುನಾವಣೆ ಸಿದ್ಧತೆ ಸಭೆ ಆರಂಭವಾಗಲಿದೆ. ಅಭ್ಯರ್ಥಿ ಆಯ್ಕೆ ಗೊಂದಲ ಬಗ್ಗೆಯೂ ಮುಖಂಡರ ಜತೆ ಚರ್ಚಿಸಲಿದ್ದಾರೆ.
ಬಹುತೇಕವಾಗಿ ಅನರ್ಹ ಶಾಸಕರಿಗೆ ಟಿಕೆಟ್ ಫಿಕ್ಸ್ ಆಗಿರುವ ಹಿನ್ನೆಲೆಯಲ್ಲಿ ಸ್ಥಳೀಯವಾಗಿರುವ ಆಕ್ಷೇಪಣೆಗಳ ಬಗ್ಗೆ ಬಿಎಸ್ವೈ ಸಮಾಲೋಚನೆ ನಡೆಸಲಿದ್ದಾರೆ. ಉಪಚುನಾವಣೆ ಗೆದ್ದು ಸರ್ಕಾರವನ್ನು ಮತ್ತಷ್ಟು ಸೇಫ್ ಮಾಡಿಕೊಳ್ಳಲು ಬಿಎಸ್ವೈ ಮುಂದಾಗಿದ್ದಾರೆ ಎಂದು ಹೇಳಲಾಗಿದೆ.
ಕೀ ಟ್ಯಾಗ್ಸ್:ನರೇಂದ್ರ ಮೋದಿ ,ಬಿ.ಎಸ್.ಯಡಿಯೂರಪ್ಪ ,ಸಿದ್ದರಾಮಯ್ಯ ,ಮಹೇಂದ್ರ ಸಿಂಗ್ ಧೋನಿ,ರಣವೀರ್ ಸಿಂಗ್ ,,ವಿರಾಟ್ ಕೊಹ್ಲಿ,ಅಕ್ಷಯ್ ಕುಮಾರ್,ರಾಹುಲ್ ಗಾಂಧಿ,ಎಚ್.ಡಿ.ಕುಮಾರಸ್ವಾಮಿ,
Comments
Post a Comment