ಬಿಗ್ ನ್ಯೂಸ್: ಬಿಜೆಪಿ ಕೊಟ್ಟ ಏಟಿಗೆ ಕಕ್ಕಾಬಿಕ್ಕಿಯಾದ ಕಾಂಗ್ರೆಸ್! .. ಕಾಂಗ್ರೆಸ್ ಪಕ್ಷ ನಾಶಕ್ಕೆ  ಮೂಲವಾದ ಬಿಜೆಪಿ!

ಮೈತ್ರಿ ಸರ್ಕಾರ ಹಾಗೂ ಅದರ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೈಗೊಂಡಿದ್ದ ತೀರ್ವನಗಳನ್ನು ಒಂದೊಂದಾಗಿ ಸೋಸುತ್ತಿರುವ ಬಿಜೆಪಿ ಸರ್ಕಾರದ ನಡೆಗೆ ಕೈ ಪಾಳಯ ಸಿಟ್ಟಿಗೆದ್ದಿದ್ದು, ಅಸಮಾಧಾನ ಹೊರಹಾಕಿದೆ.

ಬಿ.ಎಸ್.ಯಡಿಯೂರಪ್ಪ ವಿಶ್ವಾಸಮತ ಯಾಚನೆ ವೇಳೆ ದ್ವೇಷದ ರಾಜಕಾರಣ ಮಾಡಲ್ಲ ಎಂದಿದ್ದರು, ಆದರೆ ಈಗ ಅವರು ಪ್ರತಿಪಕ್ಷಗಳ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ ಎಂದು ಕಾಂಗ್ರೆಸ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಸರ್ಕಾರದ ನಡೆ ನೋಡಿಕೊಂಡು ನಾವು ಸುಮ್ಮನೆ ಕೂರಲ್ಲ, ಮುಂದಿನ ದಿನಗಳಲ್ಲಿ ಸಹಕಾರ ಕೊಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದಾರೆ. ಜುಲೈ 26ರಿಂದ ಈವರೆಗೆ ಹೊಸ ಸರ್ಕಾರ ಕೈಗೊಳ್ಳುತ್ತಿರುವ ತೀರ್ವನಗಳು ಕಾಂಗ್ರೆಸ್ಗೆ ಇರಿಸುಮುರಿಸು ಉಂಟುಮಾಡುತ್ತಿರುವುದು ಸ್ಪಷ್ಟವಾಗಿದೆ.

ಸರ್ಕಾರ ರಚನೆಯಾದ ಆರಂಭದಲ್ಲಿ ಜುಲೈ ನಿಂದ ಮೈತ್ರಿ ಸರ್ಕಾರ ಕೈಗೊಂಡ ಆದೇಶಗಳನ್ನು ತಡೆ ಹಿಡಿಯುವಂತೆ ಸಿಎಂ ಸೂಚನೆ ನೀಡಿದ್ದರು. ಹೀಗಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ಕ್ಷೇತ್ರಗಳಿಗೆ ತರಾತುರಿಯಲ್ಲಿ ಮಂಜೂರಾತಿ ಮಾಡಿಸಿಕೊಂಡಿದ್ದ ಅನುದಾನಕ್ಕೆ ಕೊಕ್ಕೆ ಬಿತ್ತು. ಮುಂದಿನ ಹಂತದಲ್ಲಿ ಬಿಬಿಎಂಪಿ ಬಜೆಟ್ ತಡೆ ಹಿಡಿಯಲಾಗಿತ್ತು. ಹಾಗೂ-ಹೀಗೂ ಅದಕ್ಕೆ ಒಪ್ಪಿಗೆ ನೀಡಲಾಯಿತು. ಬಳಿಕ 2018-19 ಮತ್ತು 2019-20ನೇ ಸಾಲಿನಲ್ಲಿ ರಾಜ್ಯದ ವಿವಿಧ ವಿಧಾನಸಭಾ ಕ್ಷೆತ್ರಗಳಲ್ಲಿ ಕೈಗೆತ್ತಿಕೊಳ್ಳಲು ಆಡಳಿತಾತ್ಮಕ ಒಪ್ಪಿಗೆ ನೀಡಿದ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ತಕ್ಷಣದಿಂದ ಸ್ಥಗಿತಗೊಳಿಸಲಾಯಿತು.

ರಸ್ತೆ ಕಾಮಗಾರಿ ಸ್ಥಗಿತಗೊಳಿಸಿ, ಯಥಾಸ್ಥಿತಿ ಕಾಪಾಡುವಂತೆ ಸೂಚಿಸಿದ ಬಹುತೇಕ ರಸ್ತೆಗಳು ಜನವರಿಯಿಂದ ಜೂನ್ ಅವಧಿಯಲ್ಲಿ ವಿಶೇಷ ಮಂಜೂರಾತಿ ನೀಡಿ ಆಡಳಿತಾತ್ಮಕ ಆದೇಶ ನೀಡಿದ ರಸ್ತೆಗಳಾಗಿವೆ. ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದ ಆಡಳಿತದ ಕೊನೆಯ ಆರು ತಿಂಗಳ ಅವಧಿಯಲ್ಲಿ ಮಂಜೂರಾತಿ ನೀಡಿದ ಕಾಮಗಾರಿಗಳಿಗೆ ಮಾತ್ರ ಈ ಆದೇಶ ಅನ್ವಯವಾಗುತ್ತದೆ. ಮಂಜೂರಾತಿ ಪಡೆದ ಹೆಚ್ಚಿನ ರಸ್ತೆಗಳು ಮೈತ್ರಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಪ್ರತಿನಿಧಿಸುವ ಕ್ಷೇತ್ರ ವ್ಯಾಪ್ತಿಗೆ ಸೇರಿರುವುದು ವಿಶೇಷ. ಕನಕಪುರಕ್ಕೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ವರ್ಗಾಯಿಸಲು ಹೊಸ ಸರ್ಕಾರದ ಸಂಪುಟ ತೀರ್ವನಿಸಿತು, ಇದೂ ಸಹ ಕಾಂಗ್ರೆಸ್ ನಾಯಕರನ್ನು ಕೆರಳಿಸಿತು. ಈ ಆದೇಶ ವಾಪಸ್ ಪಡೆಯುವವರೆಗೆ ಗಾಂಧಿ ಪ್ರತಿಮೆ ಮುಂದೆ ಧರಣಿ ನಡೆಸುವುದಾಗಿ ಡಿ.ಕೆ.ಶಿವಕುಮಾರ್ ಗುಡುಗಿದ್ದರು.

ಮೂರು ದಿನಗಳ ಹಿಂದಷ್ಟೇ ಯೋಗೇಶ್ ಗೌಡ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸುವ ತೀರ್ಮಾನ ಸಹ ಕೈ ನಾಯಕರಿಗೆ ಬಿಸಿ ಮುಟ್ಟಿಸಿದೆ. ಈ ಪ್ರಕರಣ ತನಿಖೆ ನಡೆದರೆ ಕೆಲವು ನಾಯಕರಿಗೆ ಖಡಾಖಂಡಿತವಾಗಿ ಸಮಸ್ಯೆ ತಂದೊಡ್ಡಲಿದೆ ಎಂಬುದನ್ನು ಕಾಂಗ್ರೆಸ್ನ ಪ್ರಮುಖ ನಾಯಕರು ಅರಿತಿದ್ದಾರೆ. ಇದೀಗ ಕೃಷಿ ಹೊಂಡ ತನಿಖೆಗೆ ತೀರ್ವನಿಸಿರುವುದು ಕೈ ನಾಯಕರಲ್ಲಿ ತಳಮಳ ಹುಟ್ಟುಹಾಕಿದೆ. ಸರ್ಕಾರಿ ಯೋಜನೆ ಎಂದ ಮೇಲೆ ಸಣ್ಣಪುಟ್ಟ ದೋಷ ಸಹಜ. ಇದನ್ನು ಮುಂದಿಟ್ಟುಕೊಂಡು ಎಲ್ಲಿ ನಮ್ಮ ಪ್ರಮುಖ ನಾಯಕರನ್ನು ಬಿಜೆಪಿ ಹಣಿಯುತ್ತದೆ ಎಂಬ ಆತಂಕ ಎದುರಾಗಿದೆ. ಬಿಬಿಎಂಪಿ ತ್ಯಾಜ್ಯ ನಿರ್ವಹಣೆ ಹಗರಣದ ಕೂಪ ಎಂದು ಎಲ್ಲರಿಗೂ ಗೊತ್ತಿದ್ದ ವಿಷಯವೇ. ಕಳೆದ ಏಳು ವರ್ಷದಿಂದ ಅದರ ಬಗ್ಗೆ ಪ್ರಸ್ತಾಪವಾದರೂ ತನಿಖೆ ನಡೆಸುವ ಗೋಜಿಗೆ ಸರ್ಕಾರ ಹೋಗಿರಲಿಲ್ಲ. ಇದೀಗ ಹೊಸ ಸರ್ಕಾರ ಅತ್ತ ಗಮನ ಹರಿಸಿರುವುದು ಕಾಂಗ್ರೆಸ್ನ ಬೆಂಗಳೂರು ಶಾಸಕರ ನಿದ್ರೆಗೆಡಿಸಿದೆ.

ಸರ್ಕಾರದ ಈ ಎಲ್ಲ ತೀರ್ವನಕ್ಕೆ ಯಡಿಯೂರಪ್ಪ ಕಾರಣರಲ್ಲ ಎಂದು ಕಾಂಗ್ರೆಸ್ ನಾಯಕರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಪ್ರತಿ ತೀರ್ವನಕ್ಕೆ ಬೇರೆ ಬೇರೆಯವರ ಒತ್ತಡ ಕಾರಣ. ಸರ್ಕಾರ ಉಳಿಸಿಕೊಳ್ಳುವ ಅನಿವಾರ್ಯತೆಯಲ್ಲಿರುವ ಯಡಿಯೂರಪ್ಪ ಎಲ್ಲದಕ್ಕೂ ಒಪ್ಪಿಗೆ ಸೂಚಿಸುತ್ತಿದ್ದಾರೆ ಎಂದು ಹಿರಿಯ ನಾಯಕರೊಬ್ಬರು ಅಭಿಪ್ರಾಯಪಟ್ಟರು.

ಆತಂಕವೇಕೆ? ಸರ್ಕಾರದ ನಡೆ ಕಾಂಗ್ರೆಸ್ಗೆ ಸಣ್ಣದೊಂದು ಆತಂಕವನ್ನೂ ತಂದೊಡ್ಡಿದೆ. ಮುಂದಿನ ದಿನಗಳಲ್ಲಿ, ಅಧಿವೇಶನ, ಉಪ ಚುನಾವಣೆ ಅಥವಾ ಸಾರ್ವತ್ರಿಕ ಚುನಾವಣೆ ವೇಳೆ ಈ ತನಿಖೆ ಸ್ವರೂಪದ ಪ್ರಕರಣಗಳನ್ನು ಮುಂದಿಟ್ಟುಕೊಂಡು ನಮ್ಮ ನಾಯಕರನ್ನು ಕಟ್ಟಿಹಾಕಲು ಬಿಜೆಪಿ ಪ್ರಯತ್ನಿಸಲಿದೆ ಎಂಬ ಅಳುಕಿದೆ.

ತೀರ್ಮಾನಕ್ಕೆ ಕಾರಣ:

ಮೈತ್ರಿ ಸರ್ಕಾರದ ಕೊನೇ ಅವಧಿಯ ಆದೇಶಗಳಿಗೆ ತಡೆ – ಬಿಎಸ್ವೈ ಸ್ವಯಂ ನಿರ್ಧಾರಬಿಬಿಎಂಪಿ ಬಜೆಟ್ಗೆ ತಡೆ ಮತ್ತು ತ್ಯಾಜ್ಯ ಅವ್ಯವಹಾರ ತನಿಖೆ – ಅನರ್ಹ ಶಾಸಕರ ಒತ್ತಡಕನಕಪುರ ಮೆಡಿಕಲ್ ಕಾಲೇಜು ವರ್ಗಾವಣೆ- ಚನ್ನಪಟ್ಟಣ ಬಿಜೆಪಿ ನಾಯಕರ ಒತ್ತಾಯಯೋಗೇಶ್ ಗೌಡ ಪ್ರಕರಣ ಸಿಬಿಐಗೆ- ಹುಬ್ಬಳ್ಳಿ ಭಾಗದ ಬಿಜೆಪಿ ನಾಯಕರ ಆಗ್ರಹಕೃಷಿ ಹೊಂಡ ಅವ್ಯವಹಾರ ತನಿಖೆ- ಎನ್.ಆರ್.ರಮೇಶ್ ಮನವಿ ಮೇರೆಗೆ

Comments