ಕಾಂಗ್ರೆಸ್ ಗೆ ಸಂತಸದ ಸುದ್ದಿ: ಡಿಕೆ ಶಿವಕುಮಾರಗೆ ಬಿಡುಗಡೆ ಭಾಗ್ಯ ಲಭ್ಯ! ಇಂದು ಡಿಕೆಶಿಗೆ ಬಿಗ್ ರಿಲೀಫ್!!

ನವದೆಹಲಿ: 14 ದಿನಗಳ ನ್ಯಾಯಾಂಗ ಬಂಧನದಲ್ಲಿ ಕಳೆದಿರುವ ಡಿಕೆಶಿಯನ್ನು ಹೆಚ್ಚಿನ ವಿಚಾರಣೆಗೆ ತಮ್ಮ ವಶಕ್ಕೊಪ್ಪಿಸಬೇಕು ಎಂದು ಇಡಿ ಅಧಿಕಾರಿಗಳು ನ್ಯಾಯಾಲಯದ ಮುಂದೆ ಬೇಡಿಕೆಯಿಟ್ಟಿದ್ದಾರೆ. ಡಿಕೆಶಿ ಅಕ್ರಮವಾಗಿ 800 ಕೋಟಿ ರೂ. ಆಸ್ತಿ ಹೊಂದಿದ್ದಾರೆ ಎಂಬುದು ಇಡಿ ಅಧಿಕಾರಿಗಳ ವಾದವಾಗಿದೆ. ಆದರೆ,ಇಂದು ಜಾಮೀನು ಅರ್ಜಿ ವಿಚಾರಣೆಗೆ ಬರಲಿದೆ.

ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಇಡಿಯಿಂದ ಬಂಧನಕ್ಕೊಳಗಾಗಿ ಜೈಲು ಸೇರಿರುವ ಶಾಸಕ ಡಿಕೆ ಶಿವಕುಮಾರ್ ಜಾಮೀನು ಅರ್ಜಿಯ ತೀರ್ಪು ಇಂದು ಹೊರಬೀಳಲಿದೆ.

ಆದರೆ ಇದು ತಮ್ಮ ಪಿತ್ರಾರ್ಜಿತವಾಗಿ ಬಂದ ಆಸ್ತಿ. ಇದರಿಂದ ಬಂದ ಆದಾಯದಿಂದ ಆಸ್ತಿಯಲ್ಲಿ ಹೆಚ್ಚಳವಾಗಿದೆಯಷ್ಟೇ ಎಂಬುದು ಡಿಕೆಶಿ ವಾದವಾಗಿದೆ. ಅಷ್ಟೇ ಅಲ್ಲದೆ, ಡಿಕೆಶಿ ಆರೋಗ್ಯವೂ ಸರಿ ಇಲ್ಲದ ಕಾರಣ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಎಂಬುದು ಡಿಕೆಶಿ ಪರ ವಕೀಲರ ವಾದವಾಗಿದೆ.

Comments