ಚುನಾವಣಾ ಪ್ರಚಾರದ ಅಖಾಡಕ್ಕಿಲಿದ ಕಾಂಗ್ರೆಸ್ ನ ಬಲಿಷ್ಠ ನಾಯಕ!! ಬಿಜೆಪಿ ಗಡಗಡ !! ಬೆಂಬಲಿತರ ಸಂಖ್ಯೆಯಲ್ಲಿ ಹೆಚ್ಚಳ!

ಕಾಂಗ್ರೆಸ್ ಪಕ್ಷವು ಈಗ ಬಹು ಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಸದ್ಯದಲ್ಲಿಯೇ ಮಹಾರಾಷ್ಟ್ರ ಹಾಗೂ ಹರಿಯಾಣದಲ್ಲಿ ವಿಧಾನಸಭೆಗೆ ಚುನಾವಣೆ ನಡೆಯಲಿದೆ.

ಅಲ್ಲಿ ಘಟಾನುಘಟಿ ಬಿಜೆಪಿ ನಾಯಕರು ತಮ್ಮ ಪಕ್ಷದ ಪರವಾಗಿ ಪ್ರಚಾರವನ್ನು ನಡೆಸುತ್ತಿದ್ದರೆ, ಈ ಸಮಯದಲ್ಲಿಯೇ ಬ್ಯಾಂಕಾಕಿಗೆ ರಾಹುಲ್ ಗಾಂಧಿಯವರು ತೆರಳಿದ್ದು, ಕಾಂಗ್ರೆಸ್ಸಿಗರಲ್ಲಿ ಕಳವಳವನ್ನು ಉಂಟು ಮಾಡಿತ್ತು.

ಇದರ ಬಗ್ಗೆ ಕಾಂಗ್ರೆಸ್ಸಿನ ಹಿರಿಯ ನಾಯಕರಾದ ಸಲ್ಮಾನ್ ಖುರ್ಷಿದ್ ಹಾಗೂ ಜ್ಯೋತಿರಾದಿತ್ಯ ಸಿಂಧ್ಯಾ ಧ್ವನಿ ಎತ್ತಿದ್ದರು.

ಈಗ ರಾಹುಲ್ ಗಾಂಧಿ, ಅಕ್ಟೋಬರ್ 13ರಂದು ಮಹಾರಾಷ್ಟ್ರದ ಮುಂಬೈನಲ್ಲಿ ಹಾಗೂ ಅಕ್ಟೋಬರ್ 14ರಂದು ಹರಿಯಾಣದಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆಂದು ತಿಳಿದುಬಂದಿದೆ. ಇದರಿಂದ ಕಾಂಗ್ರೆಸ್ಸಿಗರು ನಿಟ್ಟುಸಿರುಬಿಟ್ಟಿದ್ದಾರೆ.

ನಿನ್ನೆ ಹರಿಯಾಣದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಗೃಹಮಂತ್ರಿ ಅಮಿತ್ ಶಾ, ರಾಹುಲ್ ಗಾಂಧಿಯವರ ವಿದೇಶ ಯಾತ್ರೆಯನ್ನು ಲೇವಡಿ ಮಾಡಿದ್ದರು.

Comments