ಯಡಿಯೂರಪ್ಪನ ವಿರುದ್ದ ಪ್ರತಿಕಾರ ತೀರಿಸಿಕೊಂಡ ಸಿದ್ದರಾಮಯ್ಯ!! ಬಿಸ್ ವೈಗೆ ಬಿಗ್ ಶಾಕ್!! ತಲೆಮರೆಸಿಕೊಂಡ ಬಿಸ್ ವೈ!!

ವಿಧಾನಸಭೆಯ ವಿಪಕ್ಷ ನಾಯಕರಾಗಿ ಸಿಎಲ್ಪಿ ನಾಯಕ ಸಿದ್ದರಾಮಯ್ಯ ಮತ್ತೆ ಆಯ್ಕೆಯಾಗಿದ್ದಾರೆ. ಈ ಹಿನ್ನೆಲೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಮತ್ತೆ ಆತಂಕ ಶುರುವಾಯ್ತಾ ಎನ್ನುವ ಗುಸುಗುಸು ರಾಜ್ಯ ರಾಜಕಾರಣದಲ್ಲಿ ಕೇಳಿಬರ್ತಾದೆ. ಇದಕ್ಕೆ ಕಾರಣವೂ ಇದೆ.

2008 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ವಿರೋಧ ಪಕ್ಷ ನಾಯಕರಾಗಿ ಸಿದ್ದರಾಮಯ್ಯ ಕಾರ್ಯನಿರ್ವಹಿಸಿದ್ದರು, ಅಂದು ಯಡಿಯೂರಪ್ಪರನ್ನು ಮುಖ್ಯಮಂತ್ರಿ ಗಾದಿಯಿಂದ ಕೆಳಗಿಳಿಸಲು ಇದೇ ಸಿದ್ದರಾಮಯ್ಯ ತಂತ್ರ ರೂಪಿಸಿದ್ದರು. ಅಕ್ರಮ ಗಣಿಗಾರಿಕೆ, ಡಿನೋಟಿಫಿಕೇಷನ್ ಸೇರಿದಂತೆ ಅನೇಕ ಪ್ರಕರಣಗಳಲ್ಲಿ ಯಡಿಯೂರಪ್ಪನವರ ಹೆಸರು ಉಲ್ಲೇಖವಾಗುತ್ತಿದ್ದಂತೆ ಸದನದಲ್ಲಿ ಸಿಎಂ ರಾಜೀನಾಮೆಗೆ ಸಿದ್ದರಾಮಯ್ಯ ಪಟ್ಟು ಹಿಡಿದಿದ್ದರು.

ಜೊತೆಗೆ 2013 ರ ಚುನಾವಣೆಗೆ ಮುನ್ನ ಬೆಂಗಳೂರಿನಿಂದ ಬಳ್ಳಾರಿಯವರೆಗೂ ಸಿದ್ದರಾಮಯ್ಯ ಪಾದಯಾತ್ರೆ ನಡೆಸಿದ್ದರು, ವಿಪಕ್ಷ ನಾಯಕರಾಗಿ ಸದನದ ಒಳಗೂ, ಹೊರಗೂ ಹೋರಾಟ ನಡೆಸಿದ್ದರು. ಇದೀಗ ಸಿದ್ದರಾಮಯ್ಯ ವಿಪಕ್ಷ ನಾಯಕರಾಗಿ ಪುನಾರಾಯ್ಕೆ ಆಗಿದ್ದಾರೆ. ರಾಜ್ಯದಲ್ಲಿ ಎದುರಾಗಿರುವ ನೆರೆ ಹಾವಳಿಗೆ ಕೇಂದ್ರ ಸರ್ಕಾರ ಪರಿಹಾರ ಬಿಡುಗಡೆಗೊಳಿಸಿಲ್ಲ. ಇದನ್ನೇ ಮುಂದಿಟ್ಟುಕೊಂಡು ಸಿದ್ದರಾಮಯ್ಯ ಸದನದಲ್ಲಿ ಹೋರಾಟ ಆರಂಭಿಸಲು ತಯಾರಿ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ. ಇದಿಷ್ಟೇ ಅಲ್ಲದೇ ಲೇಖಾನುದಾನ ಬಿಡುಗಡೆಗೂ ಸಿದ್ದರಾಮಯ್ಯ ಅಡ್ಡಿಪಡಿಸುವ ಸಾಧ್ಯತೆಗಳಿವೆ.

ರಾಜ್ಯದಲ್ಲಿ ನಡೆದ ಆಪರೇಷನ್ ಕಮಲ ವಿಚಾರ, ನೆರೆ ಪರಿಹಾರಕ್ಕೆ ಒತ್ತಾಯಿಸಿ ಹೋರಾಟ ಆರಂಭ ಮಾಡುವುದರ ಮೂಲಕ ಸರ್ಕಾರವನ್ನು ಕಟ್ಟಿ ಹಾಕಲು ತಯಾರಾಗಿದ್ದಾರೆ, ಈ ಮೂಲಕ ಬಿಜೆಪಿ ಸರ್ಕಾರಕ್ಕೆ ಮತ್ತೆ ಸಿದ್ದರಾಮಯ್ಯ ಕಂಟಕವಾಗಬಹುದು ಎಂಬ ಅತಂಕ ಯಡಿಯೂರಪ್ಪ ಅವರನ್ನ ಕಾಡುತ್ತಿದೆಯಂತೆ. ಒಟ್ಟಿನಲ್ಲಿ ಇಂದಿನಿಂದ ಅಧಿವೇಶನ ಪ್ರಾರಂಭವಾಗಲಿದ್ದು, ಅಧಿವೇಶನದಲ್ಲಿ ಸಿದ್ದರಾಮಯ್ಯ-ಯಡಿಯೂರಪ್ಪ ನಡುವಿನ ಮಾತಿನ ವರಸೆ ಹೇಗಿರುತ್ತೆ ಅನ್ನೋದನ್ನ ನೋಡಲು ರಾಜ್ಯದ ಜನರು ಕಾತುರರಾಗಿದ್ದಾರೆ.

Comments