ಮೂಲ ಕಾಂಗ್ರೆಸಿಗ ಹಾಗೂ ಪಕ್ಷದ ನಿಷ್ಠಾವಂತ ನಾಯಕರಲ್ಲಿ ಒಬ್ಬರು ಮಾಜಿ ಉಪಮುಖ್ಯಮಂತ್ರಿಗಳಾದ ಡಾ.ಜಿ. ಪರಮೇಶ್ವರ್. ಆದರೆ ಈಗ ಪರಮೇಶ್ವರ್ ಕಾಂಗ್ರೆಸ್ ಗೆ ಕೈಕೊಟ್ಟು ಕಮಲ ಹಿಡಿಯುತ್ತಾರಾ? ಅನ್ನೋ ಚರ್ಚೆ ಸದ್ಯ ರಾಜ್ಯ ರಾಜಕೀಯದಲ್ಲಿ ಹುಟ್ಟಿರುವ ಹೊಸ ಚರ್ಚೆ.
ತಮ್ಮ ತಂದೆ ಕಾಲದಿಂದಲೂ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಡಾ. ಜಿ ಪರಮೇಶ್ವರ್, ದಲಿತ ಸಮುದಾಯದ ನಾಯಕನಾಗಿ ಬೆಳೆದಿದ್ದಾರೆ. ಸತತ ಎಂಟು ವರ್ಷಗಳ ಕಾಲ ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ ಹೆಗ್ಗಳಿಕೆ ಡಾ. ಜಿ ಪರಮೇಶ್ವರ್ ಅವರದ್ದು. ಕಳೆದ ವಾರ ಸಿದ್ಧಾರ್ಥ ಕಾಲೇಜು, ಪರಮೇಶ್ವರ್ ನಿವಾಸ ಹಾಗು ಆಪ್ತರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಮಹತ್ವದ ದಾಖಲೆ ಪತ್ರಗಳನ್ನು ವಶಕ್ಕೆ ಪಡೆದಿದ್ದಾರೆ. ಈಗಾಗಲೇ ಒಮ್ಮೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಿಚಾರಣೆಯನ್ನು ನಡೆಸಿದ್ದಾರೆ.
ಆದಾಯ ತೆರಿಗೆ ಇಲಾಖೆ ದಾಳಿ ನಡೆದಿರುವ ಸಂದರ್ಭದಲ್ಲಿ ಈ ಚರ್ಚೆ ಆರಂಭವಾಗಿರೋದು ವಿಶೇಷ. ಐಟಿ ಅಧಿಕಾರಿಗಳ ದಾಳಿಗೂ ಮುನ್ನ ಬಿಜೆಪಿ ಸೇರ್ಪಡೆ ಆಗಿದ್ದರೆ, ಐಟಿ ದಾಳಿಯಿಂದ ಪಾರಾಗಲು ಈ ರೀತಿ ರಾಜಕೀಯ ನಡೆ ಅನುಸರಿಸಿದ್ದಾರೆ ಎಂದು ಹೇಳಬಹುದಿತ್ತು. ಆದರೆ ಈಗಾಗಲೇ ಐಟಿ ದಾಳಿ ನಡೆದಿದ್ದು, ಇನ್ನೇನಿದ್ದರು ತನಿಖೆ ಮಾತ್ರ ಬಾಕಿ ಇದೆ. ಈಗಿರುವಾಗ ಬಿಜೆಪಿ ಸೇರ್ಪಡೆಯಿಂದ ಆಗುವ ಲಾಭ ಏನು ಎನ್ನುವ ಯಕ್ಷ ಪ್ರಶ್ನೆ ಎಲ್ಲರನ್ನೂ ಕಾಡಲು ಶುರುವಾಗಿದೆ. ಈ ಪ್ರಶ್ನೆಗೆ ಉತ್ತರ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸಿಗುತ್ತಿದೆ. ಪರಮೇಶ್ವರ್ ಮೇಲೆ ಐಟಿ ದಾಳಿ ನಡೆದ ಬಳಿಕ ಡಾ ಜೀ ಪರಮೇಶ್ವರ್ ಅವರಿಗೆ ಬಿಜೆಪಿ ನಾಯಕರಿಂದ ಆಫರ್ ಒಂದು ಎದುರಾಗಿದ್ದು, ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರೆ ಜಾರಿ ನಿರ್ದೇಶನಾಲಯ ಕೈಗೆ ಸಿಲುಕಿಕೊಳ್ಳುವುದು ತಪ್ಪಲಿದೆ ಪಕ್ಷ ಪಕ್ಷ ಎಂದುಕೊಂಡು ಡಿಕೆ ಶಿವಕುಮಾರ್ ಅವರು ಕಷ್ಟ ಅನುಭವಿಸುತ್ತಿದ್ದಾರೆ. ನೀವು ಕೂಡ ಅದೇ ರೀತಿ ಇಕ್ಕಟ್ಟಿಗೆ ಸಿಲುಕುವ ಬದಲು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ರಾಜಕೀಯದ ದಿಕ್ಕು ಬದಲಿಸಿ ಎಂಬ ಆಫರ್ ಗಳು ಸಲಹೆಗಳ ರೂಪದಲ್ಲಿ ಬಂದಿವೆ ಎನ್ನಲಾಗ್ತಿದೆ. ಸದ್ಯಕ್ಕೆ ಯಾವುದೇ ನಿರ್ಧಾರ ಕೈಗೊಳ್ಳಲಾಗದ ಪರಮೇಶ್ವರ್, ಬಿಜೆಪಿ ಸೇರುವ ಮನಸ್ಸು ಮಾಡಿದ್ದಾರೆ ಎನ್ನುವ ಸಂದೇಶ ರವಾನಿಸಿದ್ದಾರೆ.

Comments
Post a Comment