ಲೋಕಸಭಾ ಚುನಾವಣಾ ಕಾವು ದಿನದಿಂದ ದಿನಕ್ಕೆ ರಂಗೇರೋಕೆ ಶುರುವಾಗಿದೆ. ಇದರ ಹಿಂದೆಯೇ ಅತೃಪ್ತ ಶಾಸಕರ ನಡೆ ಇನ್ನೂ ನಿಗೂಡವಾಗಿಯೇ ಇದೆ. ಆಪರೇಷನ್ ಕಮಲ ಮೂಲಕ ಅತೃಪ್ತ ಕೈ ಶಾಸಕರನ್ನ ತನ್ನತ್ತ ಸೆಳೆಯಬೇಕೆಂಬ ಬಿಜೆಪಿ ಪ್ಲಾನ್ ಠುಸ್ ಅನ್ನೋವಾಗ್ಲೇ ಚಿಂಚೋಳಿ ಶಾಸಕ ಬಿಜೆಪಿಗೆ ಸೇರ್ಪಡೆ ಬಗ್ಗೆ ಮಾತುಗಳು ಕೇಳಿ ಬರ್ತಿದೆ.
ಈ ಬಾರಿಯ ಲೋಕಸಭಾ ಚುನಾಚಣೆಯಲ್ಲಿ ಕೈ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪೈಪೋಟಿ ನೀಡಲು ಸಜ್ಜಾಗಿರೋ ಚಿಂಚೋಳಿ ಶಾಸಕ ಉಮೇಶ್ ಜಾಧವ್ ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಮಾತು ಕೇಳಿ ಬರ್ತಿದೆ. ನಾಳೆ ಕಲಬುರಗಿಯಲ್ಲಿ ನಡೆಯುವ ಬಿಜೆಪಿ ಸಮಾವೇಶಕ್ಕೆ ಪ್ರಧಾನಿ ಮೋದಿ ಆಗಮಿಸಲಿದ್ದು, ಅವರ ಸಮ್ಮುಖದಲ್ಲೇ ಕೇಸರಿ ಶಾಲು ಹೊದಿಸಿಕೊಳ್ಳಲಿದ್ದಾರೆ. ಉಮೇಶ್ ಜಾಧವ್ ಬಿಜೆಪಿ ಸೇರ್ಪಡೆ ವಿಚಾರವಾಗಿ ಈಗಾಗಲೇ ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಗಳು ಹರಿದಾಡ್ತಿದ್ದು, ಬಿಜೆಪಿಗೆ ಜಾಧವ್ ಗೆ ಆತ್ಮೀಯ ಸ್ವಾಗತ ಎನ್ನುವ ಪೋಸ್ಟ್ ಗಳು ಹೆಚ್ಚಾಗಿದೆ. ಕಲಬುರಗಿಯ ಬಿಜೆಪಿ ಮುಖಂಡರು ಫೇಸ್ ಬುಕ್, ವಾಟ್ಸಾಪ್ ಗಳಲ್ಲಿ ಸ್ವಾಗತ ಎಂಬ ಪೋಸ್ಟ್ ಹಾಕಲು ಶುರು ಮಾಡಿದ್ದಾರೆ. ಅಲ್ಲದೇ ಕಲಬುರಗಿಯಲ್ಲಿ ಲೋಕ ಯುದ್ಧವೇ ಈ ಬಾರಿ ನಡೆಯಲಿದೆ ಅನ್ನೋ ಪೋಸ್ಟ್ ಗಳೂ ಹೆಚ್ಚಾಗಿದೆ.

Comments
Post a Comment