ಉಪ ಚುನಾವಣೆ: ಬಿಜೆಪಿಗೆ ನಾವು ಬೆಂಬಲ ನೀಡುತ್ತೇವೆ- ಕುಮಾರಸ್ವಾಮಿ!! ಸಿದ್ದುಗೆ ಶಾಕ್!


ಬಿಜೆಪಿ ಜತೆ ಕೈ ಜೋಡಿಸಲು ಜೆಡಿಎಸ್‌ ಶಾಸಕರು ಸಿದ್ಧರಾಗಿದ್ದೆವು. ನಾವೇ ಅವರಿಗೆ ಬಾಹ್ಯ ಬೆಂಬಲ ನೀಡಿದರೂ ಆಪರೇಷನ್ ಕಮಲ ಏಕೆ ಮಾಡಿದರು ಎಂಬುದು ತಿಳಿದಿಲ್ಲ. ಉಪ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ನೀಡುವ ಚಿಂತನೆಯೂ ನಡೆದಿತ್ತು ಎಂದು ನಾಗಮಂಗಲ ಶಾಸಕ ಸುರೇಶ್‌ ಗೌಡ ಬಹಿರಂಗಗೊಳಿಸಿದ್ದಾರೆ ಎನ್ನಲಾಗಿದೆ. ನಾಗಮಂಗಲದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಂದರ್ಭದಲ್ಲಿ ಈ ಸ್ಫೋಟಕ ಮಾಹಿತಿ ಬಹಿರಂಗಗೊಳಿಸಿದರು ಎನ್ನಲಾಗಿದೆ. ಉಪ ಚುನಾವಣೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಬಿಜೆಪಿ ಗೆಲ್ಲೋದಿಲ್ಲ. ಅದಕ್ಕಾಗಿ ಎರಡನೇ ಹಂತದ ಆಪರೇಷನ್ ಕಮಲ ಮಾಡಬಹುದು.

ಗೌರವವಾಗಿ ನಮ್ಮನ್ನು ನಡೆಸಿಕೊಂಡ್ರೆ ಸಪೋರ್ಟ್ ಮಾಡೋಣ ಎಂದು ತೀರ್ಮಾನ ಮಾಡಿದ್ದು ಉಂಟು ಎಂದರು. ನಾಗಮಂಗಲದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು,ಉಪ ಚುನಾವಣೆ ಯಲ್ಲಿ ಬಿಜೆಪಿ ನಿರೀಕ್ಷಿತ ಮಟ್ಟದಲ್ಲಿ ಸ್ಥಾನಗಳನ್ನು ಗೆಲ್ಲುವುದಿಲ್ಲ. ಅದಕ್ಕಾಗಿ ಬಿಜೆಪಿ ಎರಡನೇ ಹಂತದ ಆಪರೇಷನ್ ಕಮಲ ಮಾಡಬಹುದು. ಜೆಡಿಎಸ್ ಶಾಸಕರನ್ನು ಗೌರವಯುತವಾಗಿ ನಡೆಸಿಕೊಂಡರೆ ಬಿಜೆಪಿಗೆ ಬಾಹ್ಯ ಬೆಂಬಲ ನೀಡುವುದಾಗಿ ತೀರ್ಮಾನ ಮಾಡಿದ್ದೆವು. ಬಿಜೆಪಿ ಬೆಂಬಲಿಸುವ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ಶಾಸಕರು ಚರ್ಚೆ ಮಾಡಿದ್ದೇವೆ.

ಬಿಜೆಪಿ ನಾಯಕರು ನಡೆಸಿಕೊಳ್ಳುತ್ತಿರುವ ರೀತಿ ನೋಡಿದರೆ ಬೆಂಬಲ ನೀಡುವುದು ಅನುಮಾನ. ಏಕೆಂದರೆ 2017-18ರಲ್ಲಿ ಬಿಡುಗಡೆ ಮಾಡಿದ್ದ ಅನುದಾನ ಕಿತ್ತುಕೊಂಡರು.ಯಾವ ರೀತಿ ರಾಜಕಾರಣ ಮಾಡುತ್ತಿದ್ದಾರೆ ಎಂಬುದು ಅರ್ಥವಾಗು ತ್ತಿಲ್ಲ.ಇದನ್ನೆಲ್ಲಾ ನೋಡಿದರೆ ಅಧಿಕಾರ ಬೇರೆಯದಕ್ಕೆ ಬೇಕು, ಜನಗಳ ಕಷ್ಟ ಸುಖಕ್ಕೆ ಸ್ಪಂದಿಸೋದಕ್ಕಲ್ಲ ಅನ್ನಿಸುತ್ತಿದೆ. ನೋಡೋಣ ಇವೆಲ್ಲಾ ಎಷ್ಟು ದಿನ ನಡೆಯುತ್ತೆ ಎಂದು ನಾಗಮಂಗಲ ಶಾಸಕರು ತಿಳಿಸಿದರು. ನಾವೇ ಓಪನ್ ಆಗಿ ಆಫರ್ ನೀಡಿದಾಗ ಈ ಆಪರೇಷನ್ ಏತಕ್ಕೆ ಬೇಕಿತ್ತು? ಈ ಬಗ್ಗೆ ಕುಮಾರಸ್ವಾಮಿ ಅವ್ರು ಸೇರಿದಂತೆ ಜೆಡಿಎಸ್ ಶಾಸಕರ ಜತೆ ಚರ್ಚೆ ಮಾಡಿದ್ದರು.

Comments