ಪಕ್ಷ ಸೀರ್ಪಡೆಗೆ ಖಚಿತ ಪಡಿಸಿದ ಸುಮಾಲತಾ!! ಪಕ್ಷದಲ್ಲಿ ಮಹತ್ವದ ಹುದ್ದೆ ಪಡೆದ ಸುಮಾಲತ! ಯಾವ ಪಕ್ಷ ಗೊತ್ತಾ!

ಮಂಡ್ಯ: ಸ್ವಾಭಿಮಾನದ ರಣಕಹಳೆ ಊದಿ ಸಂಸತ್ ಪ್ರವೇಶಿಸಿರುವ ಲೋಕಸಭಾ ಸದಸ್ಯೆ ಸುಮಲತಾ ಅಂಬರೀಶ್ ಬಿಜೆಪಿ ಸೇರುತ್ತಾರಾ ಎಂಬ ಪ್ರಶ್ನೆ ಮಂಡ್ಯ ಜನರಲ್ಲಿ ಮತ್ತೆ ಮನೆ ಮಾಡಿದೆ‌. ಮಂಡ್ಯದಲ್ಲಿಂದು ಪ್ರವಾಸ ಕೈಗೊಂಡಿರುವ ಸುಮಲತಾ, ಜಿಲ್ಲಾ ಬಿಜೆಪಿ ಕೋರ್‌‌ಕಮಿಟಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸುಮಲತಾ ಅಂಬರೀಶ್‌ರವರ ಈ ನಿರ್ಧಾರಕ್ಕೆ ಅವರ ಆಪ್ತರು ಸೇರಿದಂತೆ ಅಂಬಿ ಬೆಂಬಲಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಸ್ವಾಭಿಮಾನದ ಕೂಗಿನ ಮೂಲಕ ಕಳೆದ ಲೋಕಸಭಾ ಚುನಾವಣೆಯಲ್ಲಿ ಅಖಾಡಕ್ಕೆ ಧುಮುಕಿದ್ದ ಸುಮಲತಾ ಅಂಬರೀಶ್‌ಗೆ ಬೆನ್ನೆಲುಬಾಗಿ ನಿಂತಿದ್ದು ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು. ಈ ವಿಚಾರ ಗುಟ್ಟಾಗಿಯೇನು ಉಳಿದಿಲ್ಲ, ಖುದ್ದು ಜೆಡಿಎಸ್ ವರಿಷ್ಠರೇ ಸುಮಲತಾ ಗೆಲುವಿಗೆ ರಾಜ್ಯ ಕಾಂಗ್ರೆಸ್ ನಾಯಕರೇ ಕಾರಣ ಎಂದು ಬಹಿರಂಗವಾಗಿಯೇ ಆರೋಪಿಸಿದ್ರು.

ಅದಾದ ನಂತ್ರ ಮೈತ್ರಿ ಕಳಚಿಬಿದ್ದ ಬಳಿಕ ಕಾಂಗ್ರೆಸ್ನ ಕೆಲ ನಾಯಕರು ಕೂಡ ಸುಮಲತಾರ ಗೆಲುವಿಗೆ ಕಾರಣವಾಗಿದ್ದರ ಬಗ್ಗೆ ಪಸ್ತಾಪಿಸಿದ್ರು . ಮೇಲಾಗಿ ಸುಮಲತಾರನ್ನ ಬೆಂಬಲಿಸಿದರು ಎನ್ನುವ ಕಾರಣಕ್ಕೆ ಅಮಾನತ್ತುಗೊಂಡಿದ್ದ ಬ್ಲಾಕ್ ಕಾಂಗ್ರೆಸ್, ಯೂತ್ ಕಾಂಗ್ರೆಸ್ ಮುಖಂಡರನ್ನ ಮತ್ತೆ ಮರುನೇಮಕ ಕೂಡ ಆಗಿದ್ದಾರೆ. ಹೀಗಾಗಿಯೇ ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಯಾವೊಬ್ಬ ಶಾಸಕರು ಆಯ್ಕೆಯಾಗದಿದ್ದರೂ ಸಂಸದೆ ಸುಮಲತಾ ನಮ್ಮ ಬೆಂಬಲಿತ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ ಎಂಬ ಆಶಾ ಭಾವನೆಯನ್ನ ಕಾಂಗ್ರೆಸ್ ಕಾರ್ಯಕರ್ತರು ಹೊಂದಿದ್ದಾರೆ.

ಆದರೆ ಸುಮಲತಾ ಕಾಂಗ್ರೆಸ್ ಕಾರ್ಯಕರ್ತರಿಗೆ ಶಾಕ್‌ ನೀಡುವಂತೆ ನಿರ್ಧಾರವೊಂದನ್ನ ಕೈಗೊಂಡಿದ್ದಾರೆ. ಕಾಂಗ್ರೆಸ್‌ನ ಸಾಂಪ್ರದಾಯಿಕ ಎದುರಾಳಿ ಬಿಜೆಪಿ ಪಕ್ಷದ ಕೋರ್‌ ಕಮಿಟಿ ಸಭೆಗೆ ಹೋಗಲು ಡಿಸೈಡ್ ಮಾಡಿದ್ದಾರೆ. ಇವತ್ತು ತಮ್ಮ ಕ್ಷೇತ್ರ ಪ್ರವಾಸ ಕೈಗೊಂಡಿರುವ ಸುಮಲತಾ ಮೊದಲು 11 ಗಂಟೆಗೆ ಮಂಡ್ಯ ಬಿಜೆಪಿ ಕಚೇರಿಯಲ್ಲಿ ನಡೆಯುವ ಜಿಲ್ಲಾ ಕೋರ್ ಕಮಿಟಿ ಸಭೆಯಲ್ಲಿ ಪಾಲ್ಗೊಳ್ಳುವುದಾಗಿ ಅವರ ಆಪ್ತ ಸಹಾಯಕರು ಸಾಮಾಜಿಕ ಜಾಲತಾಣದಲ್ಲಿ ಅವರ ಪ್ರವಾಸ ಕಾರ್ಯಕ್ರಮದ ಪಟ್ಟಿಯ‌ನ್ನ ಹಾಕಿದ್ದಾರೆ.

ಇಂದು ಬೆಳಿಗ್ಗೆ 11 ಗಂಟೆಗೆ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಪಾಲ್ಗೊಂಡು ಬಳಿಕ ಮದ್ಯಾಹ್ನ 2.30 ರವರೆಗೆ ಗೃಹ ಕಛೇರಿಯಲ್ಲಿ ಸಾರ್ವಜನಿಕ ಅಹವಾಲು ಸ್ವೀಕರಿಸಲಿದ್ದಾರೆ. ನಂತರ ಶ್ರೀರಂಗಪಟ್ಟಣ ಚಂದ್ರವನ ಆಶ್ರಮಕ್ಕೆ ಭೇಟಿ ಕೊಟ್ಟು ಬಳಿಕ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಕ್ಕರೆ ಕಾರ್ಖಾನೆ ವ್ಯವಸ್ಥಾಪಕರು, ನಿರ್ದೇಶಕರ ಸಭೆ ನಡೆಸಲಿದ್ದಾರೆ.

ಸುಮಲತಾರ ಈ ಪ್ರವಾಸದ ಪಟ್ಟಿಯನ್ನ ನೋಡಿದ ಅವರ ಆಪ್ತರು ಮತ್ತು ಬೆಂಬಲಿಗರು ಸಾಮಾಜಿಕ‌ ಜಾಲತಾಣಗಳಲ್ಲಿಯೇ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.

‘‘ಸಂಸದರ ಇಂದಿನ ಬಿಜೆಪಿ ಕಚೇರಿ ಭೇಟಿ‌ ನನಗೆ ಅತ್ಯಂತ ಆಘಾತವನ್ನುಂಟು ಮಾಡಿದ್ದು ಸುಮಲತಾರ ನಡೆಗೆ ನನ್ನ ತೀವ್ರ ಅಸಮಾಧಾನವಿದೆ. ಸಂಸದರು ಪ್ರವಾಸ ಪಟ್ಟಿಯನ್ನ ಪುನರ್ ಪರಿಶೀಲಿಸಬೇಕು’’ ಎಂದು ಸ್ವಾಭಿಮಾನಿ ಕೂಗು ಹೋರಾಟಗಾರ ಡಾ.ರವೀಂದ್ರ ಹೇಳಿದ್ದಾರೆ.

ಒಟ್ಟಾರೆ ಸುಮಲತಾ ಅಂಬರೀಶ್‌ರವರ ಇವತ್ತಿನ ಮಂಡ್ಯ ಪ್ರವಾಸ ಸಾಕಷ್ಟು ಕುತೂಹಲ ಮೂಡಿಸಿದ್ದು, ಸುಮಲತಾ ತಮ್ಮ ಅಭಿಮಾನಿಗಳು ಹಾಗೂ ಕಾರ್ಯಕರ್ತರಿಗೆ ಈ ನಿಟ್ಟಿನಲ್ಲಿ ಯಾವ ಪ್ರತಿಕ್ರಿಯೆ ನೀಡುತ್ತಾರೆ ಎನ್ನುವುದನ್ನು ಇನ್ನಷ್ಟೇ ತಿಳಿಯಬೇಕಿದೆ.


Comments