ಮತ್ತೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ!! ಅತೀ ಶೀಘ್ರದಲ್ಲಿ ಬಿಜೆಪಿ ಸರ್ಕಾರ ಪತನ- ಬಿಜೆಪಿ ನಾಯಕನಿಂದಲೆ ಸ್ಪೊಟಕ ಹೇಳಿಕೆ

ಕಾರವಾರ [ಅ.19]: ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಉಮಾಶ್ರೀ ಅವರೇ ಸಚಿವರು. ಸರ್ಕಾರಕ್ಕೆ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ! ಇದು ಕನ್ನಡ ಮತ್ತು ಸಂಸ್ಕೃತಿ ವೆಬ್‌ಸೈಟ್‌ನಲ್ಲಿ ಇರುವ ಮಾಹಿತಿ.

ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವಧಿ ಮುಗಿದು 2 ವರ್ಷ ಉರುಳಿದರೂ ಕನ್ನಡ ಸಂಸ್ಕೃತಿ ಇಲಾಖೆಗೆ ಮಾತ್ರ ಇನ್ನೂ ಅವರೇ ಮುಖ್ಯಮಂತ್ರಿಯಾಗಿದ್ದಾರೆ. ಉಮಾಶ್ರೀ ಇಲಾಖಾ ಸಚಿವರಾಗಿದ್ದಾರೆ.

ಕನ್ನಡ ಸಂಸ್ಕೃತಿ ಇಲಾಖೆ ತನ್ನ ವ್ಯಾಪ್ತಿಗೆ ಬರುವ ರಂಗಮಂದಿರಗಳ ಬುಕ್‌ ಮಾಡಲು ಇಲಾಖೆಯ ವೆಬ್‌ಸೈಟ್‌ ತೆರೆದು ಆನ್‌ಲೈನ್‌ ವ್ಯವಸ್ಥೆ ಮಾಡಿದ್ದು, ಇದರಲ್ಲಿ ಹೇಗೆ ರಂಗ ಮಂದಿರವನ್ನು ಬುಕ್‌ ಮಾಡುಬೇಕು ಎನ್ನುವ ವಿಡಿಯೋ ಚಿತ್ರಣವಿದೆ. ಇದರಲ್ಲಿ ಇದುವರೆಗೂ ಸಿದ್ದರಾಮಯ್ಯ ಮುಖ್ಯಮಂತ್ರಿ ಹಾಗೂ ಉಮಾಶ್ರೀ ಇಲಾಖೆಯ ಸಚಿವರೆಂದೇ ತೋರಿಸಲಾಗುತ್ತಿದೆ.

ಇಲಾಖೆ ಮಾಡಿದ ಎಡವಟ್ಟಿನಿಂದ ವೆಬ್‌ಸೈಟ್‌ಗೆ ತೆರಳಿದವರು ಕಕ್ಕಾಬಿಕ್ಕಿ ಆಗುವಂತಾಗಿದೆ. ಸಿದ್ದರಾಮಯ್ಯನವರ ಅವಧಿ ಮುಗಿದು ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಅವರ ನಂತರ ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿ ಆದರೂ ಇಲಾಖೆ ಜನರ ಮಾಹಿತಿಗೆಂದು ವೈಬ್‌ಸೈಟ್‌ನಲ್ಲಿ ಹಾಕಿದ ವಿಡಿಯೋ ತುಣುಕಿನಲ್ಲಿ ಮಾತ್ರ ಬದಲಾವಣೆ ಆಗಿಲ್ಲ.

Comments