ಯಡಿಯೂರಪ್ಪನನ್ನು ಹಾಡಿ ಹೊಗಳಿದ ಕೈ ಶಾಸಕ!! ಯಡಿಯುರಪ್ಪನವರನ್ನು ಹಿಂದಿಕ್ಕಲು ಯಾವ ಬಲಿಷ್ಠ ನಾಯಕರಿಂದ ಸಾದ್ಯವಿಲ್ಲ!

ತುಮಕೂರು: ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪರ ಹೋರಾಟ ನಾನು ಚಿಕ್ಕವನಿಂದ ನೋಡಿಕೊಂಡು ಬಂದಿದ್ದೇನೆ. ಅವರು ನಾಡಿಗೆ ಕೊಟ್ಟ ಕೊಡುಗೆ ಅಪಾರ ಎಂದು ಕುಣಿಗಲ್​​ನ ಕಾಂಗ್ರೆಸ್​ ಶಾಸಕ ರಂಗನಾಥ್ ಅವರು  ಹಾಡಿ ಹೊಗಳಿದ್ದಾರೆ.

ತುಮಕೂರಿನಲ್ಲಿ ಶುಕ್ರವಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪನವರು ನೇರ, ನಿಷ್ಠುರವಾದಿ. ಆದರೆ ಸ್ವಲ್ಪ ಮುಂಗೋಪಿ ಅವರ ರೈತ ಪರ ಹೋರಾಟ ನೋಡಿದ್ದೇನೆ ಎಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್​ ಅವರ ಸಂಬಂಧಿ ಹಾಗೂ ಕಾಂಗ್ರೆಸ್​​ ಶಾಸಕ ರಂಗನಾಥ್  ತಿಳಿಸಿದ್ದಾರೆ.

ಕುಣಿಗಲ್ ತಾಲೂಕಿನ ಮೇಲೆ ಅವರ ಆಶೀರ್ವಾದ ಇರಲಿ,  ರಾಜಕೀಯ ಅನ್ನೋದು ಚುನಾವಣೆಗೆ ಮಾತ್ರ ಇರಲಿ, ಅಭಿವೃದ್ಧಿ ಯಲ್ಲಿ ರಾಜಕೀಯ ಬೇಡ ಎಂದರು.

ಕುಮಾರಸ್ವಾಮಿ ಅವರು 617 ಕೋಟಿ ರೂ ಲಿಂಕಿಂಗ್ ಕೆನಾಲ್ ಗೆ ಬಿಡುಗಡೆ ಮಾಡಿದರು. ಅವರು ಬಿಡುಗಡೆ ಮಾಡಿದ ಲಿಂಕಿಂಗ್ ಕೆನಾಲ್  ಅನುದಾನವನ್ನು ತುಮಕೂರಿನ ನಾಯಕರು ತಡೆಹಿಡಿದಿದ್ದಾರೆ. ಮುಖ್ಯಮಂತ್ರಿ ಗಳು ಇದನ್ನು ಗಮನಿಸಬೇಕು ಎಂದು ಪರೋಕ್ಷವಾಗಿ ಸಂಸದ ಜಿ. ಬಸವರಾಜುಗೆ ಟಾಂಗ್ ಕೊಟ್ಟರು. ಇನ್ನೂ ಇದೇ ವೇದಿಕೆಯಲ್ಲಿ ಸಂಸದ ಜಿ.ಎಸ್.ಬಸವರಾಜು ಕೂಡ ಕುಳಿತಿದ್ದರು.

Comments