ಬಿಜಿಪಿಗೆ ಎದುರಾಯಿತು ಕಂಟಕ!! ಚುನಾವಣೆಗೂ ಮುನ್ನವೇ ಶಿವಸೇನೆಯಿಂದ ಬಿಜಿಪಿಗೆ ಬಿಗ್ ಶಾಕ್!! ಬಿಜೆಪಿಗೆ ಏನೂ ಮಾಡಲಾಗದ ಸ್ಥಿತಿ!!

ಮಹಾರಾಷ್ಟ್ರದಲ್ಲಿ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ, ನಾವು ಮುಂದಿನ ಚುನಾವಣೆಯಲ್ಲಿ ಜಯಗಳಿಸಿ ಶಿವಸೇನೆ ಮುಖ್ಯಮಂತ್ರಿಯನ್ನು ಕಾಣಲು ಬಯಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಈ ಮೂಲಕ ಶಿವಸೇನೆ ಸಂಸ್ಥಾಪಕರಾದ ನಮ್ಮ ತಂದೆ ಬಾಳಾ ಠಾಕ್ರೆಯವರ ಕನಸನ್ನು ನನಸು ಮಾಡಲು ಬಯಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಹಾಗೂ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ಮುಖ್ಯಮಂತ್ರಿ ಸ್ಥಾನದ ಬಗ್ಗೆ ಆಸೆ ಪಡುವುದರಲ್ಲಿ ತಪ್ಪಿಲ್ಲ. ಆದರೆ ಇದನ್ನು ಚುನಾವಣೆ ಫಲಿತಾಂಶದ ನಂತರ ಮಾತ್ರ ನಾವು ಹೇಳಲು ಸಾಧ್ಯ ಎಂದು ಟಾಂಗ್ ಕೊಟ್ಟಿದ್ದಾರೆ. ಉದ್ದವ್ ಠಾಕ್ರೆ‌, ಶಿವಸೇನಾದ ಮುಖವಾಣಿ ‘ ಸಾಮ್ನಾ’ ಪತ್ರಿಕೆಯಲ್ಲಿ ತಮ್ಮ ಆಸೆಯನ್ನು ಹೊರಗೆಡವಿದ್ದಾರೆ.

ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಬಿಜೆಪಿ ಹಾಗೂ ಶಿವಸೇನೆ ಹೊಂದಾಣಿಕೆ ಮಾಡಿಕೊಂಡಿದ್ದು, ಶಿವಸೇನೆ 124 ಹಾಗೂ ಬಿಜೆಪಿ 150 ಸ್ಥಾನಗಳಿಗೆ ಸ್ಪರ್ಧೆ ಮಾಡುತ್ತಿವೆ. ಉಳಿದ ಸ್ಥಾನಗಳನ್ನು ಹೊಂದಾಣಿಕೆ ಮಾಡಿಕೊಂಡಿರುವ ಸಣ್ಣ ಪಕ್ಷಗಳಿಗೆ ಬಿಟ್ಟುಕೊಡಲಾಗಿದೆ.

Comments