ಸಂವಿಧಾನ ಬದಲಾವಣೆಗೆ ಕೈ ಹಾಕಿದರೆ ದೇಶದಲ್ಲಿ ರಕ್ತಪಾತವಾಗಲಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತೆ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ಸಂಘ ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಏರ್ಪಡಿಸಿದ್ದ ಧರ್ಮ ದೀಕ್ಷೆ ಅಂಗವಾಗಿ ನಡೆದ ಅಂಬೇಡ್ಕರ್ ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಉದ್ಘಾಟಿಸಿದರು. ದೇಶದ ಸಂವಿಧಾನ ಬದಲಾವಣೆ ಮಾಡಲು ಕಾಣದ ಕೈಗಳು ಯತ್ನಿಸುತ್ತಿವೆ. ಆದರೆ ಅಂತಹ ದುಸ್ಸಾಹಸಕ್ಕೆ ಕೈ ಹಾಕಿದರೆ ರಕ್ತಪಾತವೇ ಆಗಲಿದೆ ಎಂದು ಅವರು ಎರಡನೇ ಬಾರಿ ಗುಡುಗಿದ್ರು.
ಅಂಬೇಡ್ಕರ್ ಅವರು ದಲಿತರಿಗಾಗಿ ಮಾತ್ರ ಹೋರಾಟ ಮಾಡಲಿಲ್ಲ. ಎಲ್ಲ ವರ್ಗ, ಶೋಷಿತ ಸಮುದಾಯಗಳ ಪರವಾಗಿ ಧ್ವನಿ ಎತ್ತಿದ್ರು. ಅವರನ್ನು ಒಂದು ಜಾತಿಯ ದೃಷ್ಟಿಕೋನದಲ್ಲಿ ನೋಡಬಾರದು, ಅವರು ವಿಶ್ವಜ್ಞಾನ ಎಂದು ಬಣ್ಣಿಸಿದರು.
ಬಾಬಾಸಾಹೇಬ ಅಂಬೇಡ್ಕರ್ ಹಿಂದೂವಾಗಿ ಹುಟ್ಟಿದರು. ಹಿಂದೂ ಧರ್ಮ ಬದಲಾವಣೆಯಾಗುತ್ತದೆ ಎಂದು ಕೊನೆಯವರೆಗೂ ಕಾದರು. ಆದರೆ ಬದಲಾವಣೆಯಾಗಲಿಲ್ಲ. ಇದರಿಂದ ಬೌದ್ಧ ಧರ್ಮ ಸ್ವೀಕಾರ ಮಾಡಿದರು ಎಂದರು.
ಅಂಬೇಡ್ಕರ್ ಸಂವಿಧಾನದಿಂದ ಅನೇಕರು ರಾಜಕೀಯವಾಗಿ ಉನ್ನತ ಹುದ್ದೆಗಳಿಗೇರಿದ್ದಾರೆ. ಭಾರತದ ಸಂವಿಧಾನ ಪ್ರಪಂಚದಲ್ಲಿಯೇ ಶ್ರೇಷ್ಠ ಸಂವಿಧಾನ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ರು.

Comments
Post a Comment