ರಾಮನಗರ(ಅ. 03): ಬಿಜೆಪಿಯ ಅನೇಕ ಆಪರೇಷನ್ ಕಮಲ ಕಾರ್ಯಾಚರಣೆಗಳಲ್ಲಿ ಹಾಗೂ ಬಿಎಸ್ವೈ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಿ.ಪಿ. ಯೋಗೇಶ್ವರ್ ಅವರು ಪಕ್ಷ ತೊರೆಯುವ ಸನ್ನಾಹದಲ್ಲಿದ್ಧಾರೆ. ಚನ್ನಪಟ್ಟಣದ ಮಾಜಿ ಶಾಸಕ ಸಿ.ಪಿ. ಯೋಗೇಶ್ವರ್ ಅವರು ಮರಳಿ ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ ಎಂಬ ಸುದ್ದಿ ಕೇಳಿಬರುತ್ತಿದೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಅವರು ಕಾಂಗ್ರೆಸ್ ಸೇರಬಹುದು ಎಂದು ಮೂಲಗಳು ಹೇಳುತ್ತಿವೆ.
ಯಡಿಯೂರಪ್ಪ ಅವರ ಬಲಗೈನಂತಿದ್ದ ತಾನು ಸರ್ಕಾರ ಅಸ್ತಿತ್ವಕ್ಕೆ ಬರಲು ಸಕ್ರಿಯ ಪಾತ್ರ ವಹಿಸಿದರೂ ಸೂಕ್ತ ಸ್ಥಾನಮಾನ ಸಿಗಲಿಲ್ಲ ಎಂದು ಯೋಗೇಶ್ವರ್ ಬೇಸರಗೊಂಡಿರುವುದು ನಿಜ. ಸರ್ಕಾರ ರಚನೆಯಾದರೆ ಪ್ರಮುಖ ಖಾತೆ ನೀಡುವುದಾಗಿ ಸಿಪಿವೈಗೆ ಯಡಿಯೂರಪ್ಪ ವಾಗ್ದಾನ ನೀಡಿದ್ದರಂತೆ. ಆದರೆ, ಯೋಗೇಶ್ವರ್ಗೆ ಪ್ರಮುಖ ಖಾತೆ ಸಿಗುವುದಿರಲಿ, ಸಚಿವ ಸಂಪುಟದಲ್ಲೇ ಸ್ಥಾನ ಸಿಕ್ಕಿಲ್ಲ. ಇದರಿಂದ ಸಿ.ಪಿ. ಯೋಗೇಶ್ವರ್ ಅತೀವ ನೋವಿನಲ್ಲಿದ್ದಾರೆ ಎಂದು ಅವರ ಆಪ್ತ ವಲಯಗಳು ಹೇಳುತ್ತಿವೆ.
ಇದನ್ನೂ ಓದಿ: ಡಿಕೆಶಿ ಕನಸಿಗೆ ಕಲ್ಲು, ಅನರ್ಹ ಶಾಸಕ ಸುಧಾಕರ್ಗೆ ಬಿಎಸ್ವೈ ಕೊಡುಗೆ; ಚಿಕ್ಕಬಳ್ಳಾಪುರಕ್ಕೆ ಮೆಡಿಕಲ್ ಕಾಲೇಜು ಶಿಫ್ಟ್
ಹೆಚ್.ಡಿ. ಕುಮಾರಸ್ವಾಮಿ ಮತ್ತು ಡಿಕೆ ಶಿವಕುಮಾರ್ ಇಬ್ಬರ ಪ್ರಾಬಲ್ಯವನ್ನು ಎದುರಿಸಿ ಸಿ.ಪಿ. ಯೋಗೇಶ್ವರ್ ಅವರು ಚನ್ನಪಟ್ಟಣದಲ್ಲಿ ತಮ್ಮದೇ ನೆಲೆ ಕಂಡುಕೊಂಡಿದ್ದಾರೆ. ವೈಯಕ್ತಿಕ ವರ್ಚಸ್ಸಿನಿಂದಲೇ ಇಲ್ಲಿ ಜನಬೆಂಬಲ ಪಡೆದುಕೊಂಡಿದ್ದಾರೆ. ಕಳೆದ ಚುನಾವಣೆಯಲ್ಲಿ ಡಿಕೆಶಿ ಮತ್ತು ಕುಮಾರಸ್ವಾಮಿ ಇಬ್ಬರ ಶಕ್ತಿ ಸೇರಿದ್ದರಿಂದ ವಿಧಾನಸಭಾ ಚುನಾವಣೆಯಲ್ಲಿ ಇವರು ಸೋಲುಂಡಿದ್ದರು. ಬಿಜೆಪಿಗೆ ಬರುವ ಮುನ್ನ ಅವರು ಕಾಂಗ್ರೆಸ್ನಲ್ಲೇ ಇದ್ದರು. ಪಕ್ಷೇತರರಾಗಿ ರಾಜಕಾರಣ ಆರಂಭಿಸಿದ ಅವರು ಸಮಾಜವಾದಿ ಪಕ್ಷದಲ್ಲೂಇದ್ದರು. 2008ರ ಬಿಎಸ್ವೈ ಸರ್ಕಾರದಲ್ಲಿ ಅವರು ಸಚಿವರಾಗಿಯೂ ಕೆಲಸ ನಿರ್ವಹಿಸಿದ್ದರು. 2013ರಲ್ಲಿ ಎರಡನೇ ಬಾರಿ ಕಾಂಗ್ರೆಸ್ಗೆ ಮರಳಿದ್ದರು. 2017ರಲ್ಲಿ ಕೈ ಪಾಳಯ ಬಿಟ್ಟು ಕಮಲದ ಕೈ ಹಿಡಿದುಕೊಂಡಿದ್ದರು. ಡಿಕೆ ಸಹೋದರರಿಂದ ತಮಗೆ ಉಪದ್ರವವಾಗುತ್ತಿದೆ ಎಂದು ಆರೋಪಿಸಿಯೇ ಅವರು ಕಾಂಗ್ರೆಸ್ ತೊರೆದಿದ್ದರು.
ಇದೀಗ ಡಿಕೆ ಶಿವಕುಮಾರ್ ಅವರು ಜೈಲಿನಲ್ಲಿದ್ದಾರೆ. ಡಿಕೆ ಸುರೇಶ್ ಇಡಿ ವಿಚಾರಣೆಯ ಧಾವಂತದಲ್ಲಿದ್ದಾರೆ. ಈ ಸಂದರ್ಭದಲ್ಲಿ ರಾಮನಗರ ಜಿಲ್ಲೆಯಲ್ಲಿ ರಾಜಕೀಯ ಶೂನ್ಯತೆ ಸೃಷ್ಟಿಯಾಗಿದೆ. ಜಿಲ್ಲೆಯಲ್ಲಿ ಹಿಡಿತ ಸಾಧಿಸಲು ಸಿಪಿವೈಗೆ ಇದು ಸಕಾಲವಾಗಿದೆ. ಹೀಗಾಗಿ, ಅವರು ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸೇರಲು ಯೋಜಿಸಿದ್ದಾರೆಂಬ ಸುದ್ದಿ ಕೇಳಿಬರುತ್ತಿದೆ. ಯೋಗೇಶ್ವರ್ ಅವರು ತಮ್ಮ ಆಪ್ತರೊಂದಿಗೆ ಈ ವಿಚಾರದ ಬಗ್ಗೆ ಚರ್ಚಿಸಿದ್ದಾರೆಂಬ ಮಾಹಿತಿ ನ್ಯೂಸ್18 ಕನ್ನಡಕ್ಕೆ ಲಭಿಸಿದೆ. ಒಂದು ವೇಳೆ ಈ ಸುದ್ದಿ ನಿಜವೇ ಆಗಿದ್ದರೆ ಬಿಜೆಪಿ ಮತ್ತು ಡಿಕೆ ಬ್ರದರ್ಸ್ಗೆ ದೊಡ್ಡ ಆಘಾತವೆನ್ನುವುದರಲ್ಲಿ ಅನುಮಾನವಿಲ್ಲ.

Comments
Post a Comment