ವಿಡಿಯೋ ವೈರಲ್: ಯಡಿಯೂರಪ್ಪ ಮತ್ತು ಅಮಿತ್ ಷಾ ರಾಜೀನಾಮೆಗೆ ಸಿದ್ದ!! ಸಿದ್ದುಗೆ ಹೆದರಿದ ನಾಯಕರು!!

ರಾಜ್ಯದ ಸಮ್ಮಿಶ್ರ ಸರಕಾರ ಪತನವಾಗಲು ಬಿಜೆಪಿ ಕಾರಣ ಎನ್ನುವುದು ಇದೀಗ ಸೋರಿಕೆಯಾಗಿರುವ ಆಡಿಯೊ ಹಾಗೂ ವಿಡಿಯೊದಿಂದ ಬಹಿರಂಗವಾಗಿದೆ. ಹೀಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಕೇಂದ್ರ ಗೃಹ ಸಚಿವರಾಗಿರುವ ಅಮಿತ್ ಶಾ ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿದ್ಧರಾಮಯ್ಯ, ಸುಪ್ರೀಂಕೋರ್ಟ್‌ಗೆ ಈ ಸಂಬಂಧ ಅರ್ಜಿ ಸಲ್ಲಿಸಲಾಗುವುದು ಎಂದರು. ಪ್ರಜಾಪ್ರಭುತ್ವದ ಕಗ್ಗೊಲೆ ಆಗಿರುವುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಡ. ಹೀಗಾಗಿ ಈ ಸರಕಾರಕ್ಕೆ ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರಿಯುವ ಹಕ್ಕು ಇಲ್ಲ ಎಂದರು.

ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ನಡೆದ ಪಕ್ಷದ ಪ್ರಮುಖರ ಸಭೆಗೂ ಮೊದಲು ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಯಡಿಯೂರಪ್ಪ ಆಕ್ರೋಶಭರಿತರಾಗಿ ಮಾತನಾಡಿರುವ ಧ್ವನಿಮುದ್ರಣ ಬಹಿರಂಗವಾಗಿತ್ತು. ”ನೀವು ಮಾತನಾಡಿದ ಧಾಟಿ ನೋಡಿದರೆ ಸರಕಾರ ಉಳಿಸುವಂತೆ ಇದೆ ಎಂದು ಅನಿಸುತ್ತಿಲ್ಲ. 17 ಶಾಸಕರ ರಾಜೀನಾಮೆ ತೀರ್ಮಾನ ನಾನು ತೆಗೆದುಕೊಂಡಿದ್ದಲ್ಲ. ರಾಷ್ಟ್ರೀಯ ಅಧ್ಯಕ್ಷರಿಗೆ ಗೊತ್ತಿದ್ದೇ ಎರಡೂವರೆ ತಿಂಗಳು ಶಾಸಕರನ್ನು ಮುಂಬೈನ ಹೊಟೇಲ್‌ನಲ್ಲಿ ಇಟ್ಟಿರುವುದೆಲ್ಲವೂ ನಿಮಗೆ ಗೊತ್ತಿಲ್ಲವೇ? ಎಂದು ಯಡಿಯೂರಪ್ಪ ಪ್ರಶ್ನಿಸುತ್ತಿರುವ ಆಡಿಯೋ ಬಹಿರಂಗವಾಗಿತ್ತು.

Comments