ಮಂಗಳೂರು: ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯಿದೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಭಾರತೀಯ ಜನತಾಪಾರ್ಟಿ ವತಿಯಿಂದ ಮಂಗಳೂರಿನಲ್ಲಿ ಸೋಮವಾರ ಆಯೋಜಿಸಿದ ಜನಜಾಗೃತಿ ಸಮಾವೇಶಕ್ಕೆ ಲಕ್ಷಕ್ಕೂ ಅಧಿಕ ಮಂದಿ ಆಗಮಿಸಿದ್ದು, ಕಾರ್ಯಕ್ರಮ ಆಯೋಜನೆಗೊಂಡ ಗೋಲ್ಡ್‌ಫಿಂಚ್ ಸಿಟಿ ಮೈದಾನ ಸಂಪೂರ್ಣ ಕೇಸರಿಮಯವಾಗಿತ್ತು. ದೇಶದಲ್ಲಿಪೌರತ್ವ ಕಾಯಿದೆ ಬಗ್ಗೆ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಮುಸ್ಲಿಂ ಅಲ್ಪಸಂಖ್ಯಾತರ ಮನಸ್ಸಿನಲ್ಲಿ ತಪ್ಪು ಅಭಿಪ್ರಾಯ ಮೂಡುವ ಕೆಲಸ ಮಾಡಿದೆ ಎಂದು ಆರೋಪಿಸಿರುವ ಬಿಜೆಪಿ, ಪ್ರತಿಪಕ್ಷಗಳ ಈ ಹುನ್ನಾರವನ್ನು ಖಂಡಿಸಿ ಮತ್ತು ಸಾರ್ವಜನಿಕರಿಗೆ ಕಾಯಿದೆ ಬಗ್ಗೆ ಸಂಪೂರ್ಣ ಮಾಹಿತಿ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಿತ್ತು. ಮಧ್ಯಾಹ್ನ 3 ಗಂಟೆಗೆ ಬಂಗ್ರ ಕೂಳೂರಿನ ಗೋಲ್ಡ್‌ಫಿಂಚ್ ಸಿಟಿ ಮೈದಾನದಲ್ಲಿ ಜನಜಾಗೃತಿ ಸಮಾವೇಶ ನಿಗದಿಯಾಗಿತ್ತು. ಸುಮಾರು 2.30ರಿಂದಲೇ ಜನರು ಮೈದಾನದತ್ತ ಆಗಮಿಸಲು ಆರಂಭಿಸಿದರು. 3.45ರ ಸುಮಾರಿಗೆ ಸಭಾ ಕಾರ್ಯಕ್ರಮ ಆರಂಭಗೊಂಡಿತ್ತು. ಇಷ್ಟು ಹೊತ್ತಿಗೆ ಮೈದಾನ ಭರ್ತಿಯಾಗಿತ್ತು.
ಹರಿದು ಬಂದ ಜನಸಾಗರ
ಬಿಜೆಪಿ ಜನಜಾಗೃತಿ ಸಮಾವೇಶಕ್ಕೆ ಬಿಜೆಪಿ ಕಳೆದ ಎರಡು ವಾರಗಳಿಂದ ಭಾರಿ ಸಿದ್ಧತೆ ಮಾಡಿಕೊಂಡಿದ್ದು, ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಮೂಲಕ ಮನೆ ಮನೆ ಸಂಪರ್ಕಿಸಿ ಸಾರ್ವಜನಿಕರನ್ನು ಕಾರ್ಯಕ್ರಮಕ್ಕೆ ಬರುವಂತೆ ಪ್ರೇರೇಪಿಸಲಾಗಿತ್ತು. ಅದರಂತೆ ವಾರದ ಆರಂಭದ ದಿನವಾದರೂ ಸಾರ್ವಜನಿಕರು ತಂಡೋಪ ತಂಡವಾಗಿ ಜಾಗೃತಿ ಸಮಾವೇಶಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಸುಳ್ಯ, ಬಂಟ್ವಾಳ, ಬೆಳ್ತಂಗಡಿ, ಉಳ್ಳಾಲ, ನೆರೆಯ ಕಾಸರಗೋಡು, ಉಡುಪಿ ಜಿಲ್ಲೆಗಳಿಂದ ಲಕ್ಷಕ್ಕೂ ಅಧಿಕ ಮಂದಿ ಸಾರ್ವಜನಿಕರು ಸಮಾವೇಶಕ್ಕೆ ಸಾಕ್ಷಿಯಾದರು.
ಸಮಾವೇಶದ ಮೈದಾನಕ್ಕೆ ಆಗಮಿಸಲು ಒಂದು ದ್ವಾರದ ಮೂಲಕ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಇನ್ನೊಂದು ದ್ವಾರವನ್ನು ಕೇವಲ ವಿವಿಐಪಿ ಪ್ರವೇಶಕ್ಕೆ ಮಾತ್ರ ಮೀಸಲಿರಿಸಲಾಗಿತ್ತು. ಸಾರ್ವಜನಿಕರಿಗೆ ಮೀಸಲಿಟ್ಟಿದ್ದ ದ್ವಾರದಲ್ಲಿಸಂಜೆ ನಾಲ್ಕು ಗಂಟೆ ಬಳಿಕ ನೂಕು ನುಗ್ಗಲು ಕಂಡು ಬಂದಿದ್ದು, ಮೈದಾನದ ಒಳಗಡೆ ಬರಲು ಸಾರ್ವಜನಿಕರು ತೀವ್ರ ಪರದಾಡಿದರು.
ಜಾಗೃತಿ ಸಮಾವೇಶ ನಡೆದ ಬಂಗ್ರಕೂಳೂರಿನ ಗೋಲ್ಡ್‌ಫಿಂಚ್ ಸಿಟಿ ಮೈದಾನ ಸಂಪೂರ್ಣ ಕೇಸರಿಮಯವಾಗಿತ್ತು. ಎಲ್ಲೆಲ್ಲೂಬಿಜೆಪಿ ಬಾವುಟ ಹಾರಾಡುತ್ತಿತ್ತು. ಸಮಾವೇಶದ ಮೈದಾನದ ಸುತ್ತ ಭಾರತೀಯ ಜನತಾ ಪಾರ್ಟಿಯ ಬೃಹತ್ ಧ್ವಜ ಹಾಕಲಾಗಿತ್ತು.
ಬಿಜೆಪಿ ಕಾರ್ಯಕರ್ತರು 'ವಿ ಸಪೋರ್ಟ್ ಸಿಎಎ' ಎಂದು ಬರೆದ ಕೇಸರಿ ಟೋಪಿಯನ್ನು ಧರಿಸಿರುವುದು ಗಮನ ಸೆಳೆಯಿತು. ಅಲ್ಲದೆ ಕಾರ್ಯಕರ್ತರು ಕೈಯಲ್ಲಿಪಕ್ಷದ ಧ್ವಜ ಹಿಡಿದು ಸಮಾವೇಶಕ್ಕೆ ಕಳೆ ತಂದರು. ಇದಲ್ಲದೆ ಕೊಟ್ಟಾರಚೌಕಿಯಿಂದ ಕೂಳೂರಿನ ವರೆಗೂ ರಾಷ್ಟ್ರೀಯ ಹೆದ್ದಾರಿ 66ರ ಇಕ್ಕೆಲೆಗಳಲ್ಲಿಕೇಸರ ಬಾವುಟ ರಾರಾಜಿಸುತ್ತಿತ್ತು.
ನೂರಾರು ಖಾಸಗಿ ಬಸ್‌ಗಳು
ಸಮಾವೇಶಕ್ಕೆ ಸಾರ್ವಜನಿಕರನ್ನು ಕರೆತರಲು ನೂರಾರು ಖಾಸಗಿ ಬಸ್‌ಗಳನ್ನು ಬುಕ್ ಮಾಡಿಸಲಾಗಿದ್ದು, ಸಾವಿರಕ್ಕೂ ಅಧಿಕ ವಾಹನಗಳು ಪಾರ್ಕಿಂಗ್ ಜಾಗದಲ್ಲಿಕಂಡು ಬಂದವು. ಜಿಲ್ಲೆಯ ವಿವಿಧ ಭಾಗಗಳಿಂದ ಬಹುತೇಕರು ಬಸ್ ಮೂಲಕವೇ ಸಮಾವೇಶಕ್ಕೆ ಆಗಮಿಸಿರುವುದು ವಿಶೇಷವಾಗಿತ್ತು. ಬಹುತೇಕ ಸರ್ವಿಸ್ ಹಾಗೂ ಸಿಟಿಬಸ್‌ಗಳನ್ನು ಜಾಗೃತಿ ಸಮಾವೇಶಕ್ಕೆ ಬಳಕೆ ಮಾಡಲಾಗಿದ್ದು, ಸಾರ್ವಜನಿಕರ ಸಂಚಾರಕ್ಕೆ ಅನನುಕೂಲವಾಗಿತ್ತು. ಟೆಂಪೋ ಟ್ರಾವೆಲ್ಲರ್, ಮಿನಿ ಬಸ್, ಮ್ಯಾಕ್ಸಿಕ್ಯಾಬ್ ಸೇರಿದಂತೆ ಬಹುತೇಕ ಸಾರ್ವಜನಿಕ ಬಳಕೆ ವಾಹನಗಳ ಮೂಲಕ ಸಾರ್ವಜನಿಕರು ಸಮಾವೇಶಕ್ಕೆ ಆಗಮಿಸಿದರು.
ಹೆದ್ದಾರಿ ಸಂಚಾರ ಅಸ್ತವ್ಯಸ್ತ
ಸಮಾವೇಶ ನಿಗದಿಯಾದ ಮೈದಾನ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲೇ ಇರುವುದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಸಮಾವೇಶಕ್ಕೆ ಆಗಮಿಸುವ ವಾಹನ ಹೊರತುಪಡಿಸಿ ಉಳಿದ ವಾಹನಗಳನ್ನು ಬದಲೀ ರಸ್ತೆಯಲ್ಲಿ ಸಂಚರಿಸುವಂತೆ ಸೂಚಿಸಲಾಗಿತ್ತು. ಆದರೆ ಹೆಚ್ಚಿನ ವಾಹನಗಳು ಕೂಳೂರು ಮೂಲಕವೇ ಸಂಚರಿಸಲು ಯತ್ನಿಸಿದ್ದರಿಂದ, ಮತ್ತು ಸಮಾವೇಶಕ್ಕೆ ಭಾರಿ ಸಂಖ್ಯೆಯ ವಾಗನಗಳು ಆಗಮಿಸಿದ್ದರಿಂದ ರಾಷ್ಟ್ರೀಯ ಹೆದ್ದಾರಿ ಸಂಚಾರ ಸಂಪೂರ್ಣ ಅಸ್ತವ್ಯವಸ್ಥವಾಗಿತ್ತು. ಮಧ್ಯಾಹ್ನ 3 ಗಂಟೆಯಿಮದಲೇ ಹೆದ್ದಾರಿಯಲ್ಲಿವಾಹನ ದಟ್ಟಣೆ ಕಂಡು ಬಂದಿದ್ದು, ಸಂಚಾರಕ್ಕೆ ಕಷ್ಟವಾಗಿತ್ತು. ಆ ಬಳಿಕ ವಾಹನ ಸಂಚಾರಕ್ಕೆ ತೀವ್ರ ಸಮಸ್ಯೆಯಾಗಿತ್ತು. ಸಮಾವೇಶಕ್ಕೆ ಆಗಮಿಸುವ ನೂರಾರು ವಾಹನಗಳು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡು ಸಮಾವೇಶ ಮುಗಿದರೂ ಕೆಲವರು ಮಯದಾನಕ್ಕೆ ತಲುಪಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿತ್ತು.
As stated by Stanford Medical, It is in fact the one and ONLY reason women in this country live 10 years more and weigh on average 19 KG less than we do.
ReplyDelete(And by the way, it has totally NOTHING to do with genetics or some secret exercise and EVERYTHING related to "HOW" they are eating.)
P.S, I said "HOW", and not "WHAT"...
TAP this link to see if this brief questionnaire can help you find out your true weight loss possibilities