ಚೀನಾ ಅನುಭವಿಸಲಿದೆ ತಕ್ಕ ಶಿಕ್ಷ! ಪ್ರಧಾನಿ ಮೋದಿ ನಡೆಸಿರುವ ಸಿದ್ಧತೆ ಏನು? ನೋಡಿದರೆ ಶಾಕ್ ಆಗುತ್ತೆ


ನವದೆಹಲಿ: ಲಡಾಖ್‌ನಲ್ಲಿರುವ ಭಾರತೀಯ ಭೂಮಿಯನ್ನು ಗುರಿಯಾಗಿಸುವ ಮೂಲಕ ಚೀನಾ ದೊಡ್ಡ ತಪ್ಪು ಎಸಗಿದೆ. ಆಗಾಗ್ಗೆ ಇತರರ ಭೂಮಿಯನ್ನು ಕಬಳಿಸುವ ಅಭ್ಯಾಸ ಹೊಂದಿರುವ ಚೀನಾಗೆ, ಭಾರತ ಮೇಲೆ ಕಣ್ಣು ಹಾಕಿರುವುದು ತುಂಬಾ ದುಬಾರಿಯಾಗಿ ಪರಿಣಮಿಸಲಿದೆ. ಚೀನಾ ತನ್ನಷ್ಟಕ್ಕೆ ತಾನು ಎಷ್ಟೇ ಬಲಶಾಲಿ ಎಂದು ಹೇಳಿಕೊಳ್ಳುತ್ತಿದ್ದರು ಕೂಡ ಸದ್ಯದ ವಿವಾದ ಮತ್ತು ಪರಿಸ್ಥಿತಿಯಲ್ಲಿ ಅದರ ಎಲ್ಲ ಲೆಕ್ಕಾಚಾರ ಬುಡಮೇಲಾಗಿದ್ದಂತು ನಿಜ. ರಸ್ತೆಗಳಿಂದ ಹಿಡಿದು ಸೇನೆಯವರೆಗೆ ಭಾರತ ಚೀನಾಗೆ ತಕ್ಕ ಉತ್ತರ ನೀಡಿದೆ ಹಾಗೂ 2020ರ ಭಾರತ ಚೀನಾ ಮೇಲೆ 21 ಎಂಬಂತೆ ಸಾಬೀತಾಗಲಿದೆ ಎಂದು ಹೇಳಿದೆ.


ಒಂದೆಡೆ ಅಧಿಕಾರಕ್ಕೆ ಬಂದ ಮೇಲೆ ಚೀನಾ ಜೊತೆಗಿನ ತಮ್ಮ ದೇಶದ ಸಂಬಂಧಗಳನ್ನು ಸುಧಾರಿಸಲು ಹಲವು ಪ್ರಯತ್ನಗಳನ್ನು ಮಾಡಿದ ಪ್ರಧಾನಿ ನರೇಂದ್ರ ಮೋದಿ, ಇನ್ನೊಂದೆಡೆ ಚೀನಾವನ್ನು ಶಾಂತಿ ಮತ್ತು ಸೌಹಾರ್ದತೆಯ ಪಾಠ ಕೂಡ ಹೇಳಿಕೊಟ್ಟರು. ಆದರೆ, ತನ್ನ ಚಾಳಿಯನ್ನು ಮುಂದುವರೆಸಿರುವ ಮೊಂಡು ಚೀನಾ ಗಲ್ವಾನ್ ಕಣಿವೆಯಲ್ಲಿ ಮೊದಲು ಶಾಂತಿಯ ಕುರಿತು ಮಾತನಾಡಿ ಬಳಿಕ ಭಾರತದ ಭೂಪ್ರದೇಶ ಅತಿಕ್ರಮಣಕ್ಕೆ ಸಂಚು ಮಾಡಲು ಪ್ರಯತ್ನಿಸಿದೆ. ಇದಕ್ಕೆ ಭಾರತೀಯ ಸೇನೆ ಕೂಡ ತಕ್ಕ ಉತ್ತರ ನೀಡಿ ಚೀನಾದ ಸುಮಾರು 45-50 ಸೈನಿಕರನ್ನು ಮಟ್ಟಹಾಕಿದೆ. ಹೀಗಾಗಿ ಇನ್ಮುಂದೆ ಏನಾದರು ಮಾಡಲು ಹೋದರೆ ಅದರ ಪರಿಣಾಮ ನೆಟ್ಟಗಿರುವುದಿಲ್ಲ ಎಂಬುದು ಚೀನಾಗೂ ಮನವರಿಕೆಯಾದಂತಾಗಿದೆ.


ಇದೀಗ ಭಾರತದ ವಿರುದ್ಧ ದುಸ್ಸಾಹಸಕ್ಕೆ ಕೈಹಾಕುವುದರ ಪರಿಣಾಮ ಏನಾಗಲಿದೆ ಎಂಬುದನ್ನು ಚೀನಾಗೆ ಮನವರಿಕೆ ಮಾಡಿಕೊಡುವ ಸಮಯ ಬಂದಿದೆ.

ಭಾರತದ ಜೊತೆಗಿನ ಗುದ್ದಾಟದ ಪರಿಣಾಮ ಏನಾಗಲಿದೆ ಎಂಬುದಕ್ಕೆ ಇತಿಹಾಸವೇ ಸಾಕ್ಷಿಯಾಗಿದೆ ಹಾಗೂ ಜಿನ್ ಪಿಂಗ್ ಈಗಾಗಲೇ ಈ ತಪ್ಪು ಎಸಗಿದ್ದಾನೆ. ಭಾರತೀಯ ಗಡಿಯೊಳಗೆ ಒಳನುಸುಳುವ ಪ್ರಯತ್ನಕ್ಕೆ ಚೀನಾ ಕೈಹಾಕಿದೆ. ಗಡಿಭಾಗದಲ್ಲಿ ಚೀನಾ ನಿಯೋಜಿಸಿರುವ ಸೈನಿಕರ ಸಂಖ್ಯೆಯಷ್ಟೇ ಸೈನಿಕರನ್ನು ಭಾರತ ಕೂಡ ನಿಯೋಜಿಸಿದ್ದು, ಅವರೆಲ್ಲರೂ ತಕ್ಕ ಉತ್ತರಕ್ಕೆ ಸನ್ನದ್ಧರಾಗಿದ್ದಾರೆ.


ಪ್ರಧಾನಿ ಮೋದಿ ನಡೆಸಿರುವ ಸಿದ್ಧತೆ ಏನು?
- ಗಲ್ವಾನ್ ಘರ್ಷಣೆಯ ಬಳಿಕ ಭಾರತೀಯ ಸೇನೆಗೆ ಪ್ರಧಾನಿ ನರೇಂದ್ರ ಮೋದಿ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ.
-LAC ಬಳಿ ಚೀನಾದ ಪ್ರತಿಯೊಂದು ಕುತಂತ್ರದ ಮೇಲೆ ನೀರೆರೆಚಲಾಗಿದೆ. ಯುದ್ಧ ಟ್ಯಾಂಕರ್ ಗಳಿಂದ ಹಿಡಿದು ಫೈಟರ್ ಜೆಟ್ ಗಳವರೆಗೆ ಲಡಾಕ್ ನಲ್ಲಿ ಎಲ್ಲವನ್ನು ನಿಯೋಜಿಸಲಾಗಿದೆ.
- ಅಷ್ಟೇ ಅಲ್ಲ ಚೀನಾಗೆ ಆರ್ಥಿಕವಾಗಿ ಪೆಟ್ಟು ನೀಡಲು ಎಲ್ಲ ಸಿದ್ಧತೆಗಳನ್ನು ಕೂಡ ಮಾಡಲಾಗಿದ್ದು, ಇದರ ಅಡಿ ಸರ್ಕಾರ ಒಂದೊಂದು ಹೆಜ್ಜೆಗಳನ್ನು ಇಡುತ್ತಿದೆ.
-ಇವಲ್ಲದೆ ವಿಶ್ವದ ಮಹಾಶಕ್ತಿಗಳ ಜೊತೆಗಿನ ಪ್ರಧಾನಿ ಮೋದಿ ಅವರ ಸಂಬಂಧ ಕೂಡ ಚೀನಾಗೆ ದುಬಾರಿಯಾಗಿ ಪರಿಣಮಿಸಲಿದೆ. ಇದರ ತಾಜಾ ಉದಾಹರಣೆ ಎಂದರೆ ಅಮೆರಿಕಾದ ವಿದೇಶಾಂಗ ಸಚಿವ ಮೈಕ್ ಪಾಂಪಿಯೋ ಅವರ ಇತ್ತೀಚಿನ ಹೇಳಿಕೆ. ತಮ್ಮ ಹೇಳಿಕೆಯಲ್ಲಿ ಪಾಂಪಿಯೋ ಭಾರತದ ಸಹಾಯಕ್ಕೆ ಅಮೆರಿಕಾದ ಸೈನ್ಯವನ್ನೂ ಕೂಡ ಕಳುಹಿಸಲು ಕೂಡ ಸಿದ್ಧರಾಗಿರುದಾಗಿ ಹೇಳಿದ್ದಾರೆ.

ಈ ಮೊದಲೂ ಕೂಡ ಭಾರತ-ಚೀನಾ ಗಡಿವಿವಾದಕ್ಕೆ ಸಂಬಂಧಿಸಿದಂತೆ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ದೂರವಾಣಿ ಮೂಲಕ ಮಾತನಾಡಿರುವ ಪ್ರಧಾನಿ ಮೋದಿ ಅವರಿಗೆ ಮಾಹಿತಿ ನೀಡಿದ್ದಾರೆ. ಭಾರತದ ಜೊತೆಗಿನ ಅಮೆರಿಕಾದ ದೋಸ್ತಿ ತನಗೆ ದುಬಾರಿ ಬೀಳಲಿದೆ ಎಂಬುದು ಜಿನ್ ಪಿಂಗ್ ಗೂ ತಿಳಿದಿದೆ. ಇನ್ನೊಂದೆಡೆ ಚೀನಾದ ಹಳೆ ಸ್ನೇಹಿತ ಎನ್ನಲಾಗುವ ರಷ್ಯಾ ಕೂಡ ಈ ವಿಷಯದಲ್ಲಿ ಭಾರತಕ್ಕೆ ಬೆಂಬಲ ನೀಡುತ್ತಿದ್ದು, ತನ್ನ ಕುತಂತ್ರದಲ್ಲಿ ಇದೀಗ ಚೀನಾ ತಾನೇ ಸಿಕ್ಕಿಬಿದ್ದಂತಾಗಿದೆ.

Comments