ಮಕ್ಕಳಿಗೆ ಗುಡ್ ನ್ಯೂಸ್: 'ದೇಶೀಯ ಪ್ರತಿಭೆ'ಗಳಿಗೆ ಕೇಂದ್ರದಿಂದ ಬಿಗ್ ಗಿಫ್ಟ್





ಭಾರತದ ಸುತ್ತಮುತ್ತಲಿನ ಟೆಕ್ಕಿಗಳಿಗೆ ಮತ್ತು ವಿಶ್ವ ದರ್ಜೆಯ 'ಮೇಡ್ ಇನ್ ಇಂಡಿಯಾ' ಆಯಪ್‌ಗಳನ್ನು ರಚಿಸುವ ಸ್ಟಾರ್ಟ್ ಅಪ್ ಸಮುದಾಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು 'ಆತ್ಮನಿರ್ಭರ್ ಭಾರತ್ ಆಪ್ ಇನ್ನೋವೇಶನ್ ಚಾಲೆಂಜ್' ಘೋಷಿಸಿದ್ದಾರೆ.


ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ಆತ್ಮ ನಿರ್ಭರ್ ಇನ್ನೋವೇಶನ್ ಚಾಲೆಂಜ್ ಗೆ ಚಾಲನೆ ನೀಡಿರುವುದು ಭಾರತದ ತಂತ್ರಜ್ಞಾನ ಮತ್ತು ಸಮುದಾಯವನ್ನು ಆತ್ಮನಿರ್ಭರ್ ಆಪ್ ಪರಿಸರ ವ್ಯವಸ್ಥೆಯನ್ನು ರಚಿಸಲು ಆಹ್ವಾನಿಸಿದ್ದಾರೆ.


ಇನ್ನೂ ಭಾರತ-ಚೀನಾ ಗಡಿಯಲ್ಲಿ ಉದ್ವಿಗ್ನತೆಯಿಂದಾಗಿ ಚೀನಾ ಮೂಲದ ಜನಪ್ರಿಯ ಆಯಪ್‌ಗಳಾದ ಟಿಕ್‌ಟಾಕ್, ಶೇರ್‌ಇಟ್ ಸೇರಿದಂತೆ 59 ಚೀನೀ ಅಪ್ಲಿಕೇಶನ್‌ಗಳನ್ನು ವಾರದ ಆರಂಭದಲ್ಲಿ ಭಾರತ ನಿಷೇಧಿಸಿದ್ದು ಈ ನಡುವೆಯೇ ಭಾರತದಲ್ಲಿ ಪ್ರಧಾನಿ ಮೋದಿಯವರು ನೀಡಿರುವ ಈ ಯೋಜನೆ ದೇಶೀಯ ಪ್ರತಿಭೆಗಳಿಗೆ ಸಹಾಯವಾಗಲಿದೆ ಎನ್ನಲಾಗಿದೆ.


ಅಟಲ್ ಇನ್ನೋವೇಶನ್ ಮಿಷನ್ ಜೊತೆಗೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಈ ಯೋಜನೆ ಕಾರ್ಯ ಮಾಡಲಿದ್ದು ಅಸ್ತಿತ್ವದಲ್ಲಿರುವ ಅಪ್ಲಿಕೇಶನ್‌ಗಳ ಪ್ರಚಾರ ಮತ್ತು ಹೊಸ ಅಪ್ಲಿಕೇಶನ್‌ಗಳ ಅಭಿವೃದ್ಧಿಯನ್ನು ಮಾಡಲಿದೆ

Comments