ಬೆಂಗಳೂರು: ರಾಜ್ಯ ಸರ್ಕಾರದ ಮೇಲೆ ಮಾಜಿ ಸಿಎಂ ಸಿದ್ದರಾಮಯ್ಯ ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಎನ್.ಆರ್. ರಮೇಶ್ ಪ್ರತಿಕ್ರಿಯಿಸಿ ಒಂದಷ್ಟು ಆರೋಪಗಳನ್ನು ಹೊರಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಇಂದು ಪ್ರತ್ಯುತ್ತರ ನೀಡಿರುವ ಸಿದ್ದರಾಮಯ್ಯ.. ಈ ರೀತಿ ನಮ್ಮ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು.. ರಮೇಶ್ ಆರೋಪಿಸಿರುವ ಪ್ರಕರಣಗಳೆಲ್ಲ ಲೋಕಾಯುಕ್ತ ಹಾಗೂ ಎಸಿಬಿ ತನಿಖೆ ನಡೆಸಿ ತಿರಸ್ಕರಿಸಿವೆ. ಕೊರೊನಾ ಸಂಬಂಧಿತ ಭ್ರಷ್ಟಾಚಾರದ ಆರೋಪಗಳಿಗೆ ಬಿಜೆಪಿ ಸರ್ಕಾರ ದಾಖಲೆ ಸಹಿತ ಉತ್ತರಿಸಲಾಗದೇ ಸುಳ್ಳು ಆರೋಪ ಮಾಡಿಸ್ತಿದೆ. ಈ ರೀತಿ ನಮ್ಮ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ ಎಂದು ಪ್ರತ್ಯುತ್ತರ ನೀಡಿದ್ದಾರೆ.
