ಮೈಸೂರು :ಕೊರೊನಾ ಚಿಕಿತ್ಸೆ ವಿಚಾರದಲ್ಲಿ ರಾಜ್ಯ ಸರ್ಕಾರ ಅವ್ಯವಹಾರ ಮಾಡಿದೆ ಎಂಬ ಸಿದ್ದರಾಮಯ್ಯ ಆರೋಪಕ್ಕೆ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯೆ ನೀಡಿದ್ದು, ಸಿದ್ದರಾಮಯ್ಯ ಅವರೇ ಖುದ್ದಾಗಿ ಸಿಎಂ ಅವರೇ ದಾಖಲೆ ಕೊಡ್ತಿದ್ದಾರೆ ಹೋಗಿ ಪರಿಶೀಲಿಸಿ. ಖುದ್ದಾಗಿ ಸ್ವತಃ ಸಿಎಂ ದಾಖಲೆ ಕೊಡುವುದಕ್ಕಿಂತ ಒಳ್ಳೆಯ ಅವಕಾಶ ಇದ್ಯಾ. ಈ ಅವಕಾಶ ಬಳಸಿಕೊಳ್ಳಿ ಎಂದು ಟಾಂಗ್ ಕೊಟ್ಟಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಪಿಎಂ ಕೇರ್ಸ್ ಲೆಕ್ಕ ಕೊಡಿ ಅಂತ ಕೇಳಿದ್ದ ಸಿದ್ದರಾಮಯ್ಯಗೆ ತಿರುಗೇಟು ನೀಡಿದರು. 'ಸಿದ್ದರಾಮಯ್ಯನವರೇ ನಿಮ್ಮ ಮಟ್ಟವನ್ನ ಪ್ರಧಾನಿಗೆ ಹೋಲಿಕೆ ಮಾಡಿಕೊಳ್ಳಬೇಡಿ. ಪ್ರತಿ ಬಾರಿ ನಿಮ್ಮನ್ನ ಪ್ರಶ್ನಿಸಿದಾಗ ನೀವು ಪ್ರಧಾನಿ ಹೆಸರು ತರಬೇಡಿ. ನಮ್ಮನ್ನ ಕೇಳಿ ನಾವು ಉತ್ತರಿಸುತ್ತೇವೆ' ಎಂದು ಕುಟುಕಿದರು.
ಕೋವಿಡ್ ನಿಯಂತ್ರಣದಲ್ಲಿ ಅಕ್ರಮ ಆಗಿದೆ ಅಂತ ಹೇಳುತ್ತೀರಿ. ಆದರೆ ದಾಖಲೆ ಪರಿಶೀಲನೆ ವಿಧಾನಸೌಧಕ್ಕೆ ಬನ್ನಿ ಅಂದ್ರೆ ಬರೋಲ್ಲ. ಆದ್ರೆ ಪಿಎಂ ಕೇರ್ಸ್ ಲೆಕ್ಕವನ್ನ ಮಾತ್ರ ನೀವು ಕೇಳ್ತೀರಾ. ಇದು ಹೇಗೆ ಆಗುತ್ತೆ ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದ ಪ್ರತಾಪ್ ಸಿಂಹ, ನನಗೆ
ಅದಕ್ಕಿಂತ ಖುಷಿಯಾಗಿದ್ದು ನಮ್ಮ ಸಂತೋಷ್ ಅವರ ಭಾಷಣವನ್ನ ನೀವು ಕೇಳಿದ್ದು. ಅವರು ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವಿಸ್ ರೀತಿಯಲ್ಲಿ ನಮ್ಮ ರಾಜ್ಯದ ವಿರೋಧ ಪಕ್ಷಗಳಿಂದ ನಿರೀಕ್ಷೆ ಮಾಡಿದ್ದಾರೆ. ಅದನ್ನ ಸಕಾರಾತ್ಮಕವಾಗಿ ತೆಗೆದುಕೊಳ್ಳದೆ ಅದ್ಯಾಕೆ ಮೋದಿ ಫಿಎಂ ಕೇರ್ಸ್ ಫಂಡ್ ಮಧ್ಯ ತರುತ್ತೀರಿ. ನಿಮ್ಮ ಮಟ್ಟವನ್ನ ಪ್ರತಿಬಾರಿ ಪ್ರಧಾನಿಗೆ ಹೋಲಿಕೆ ಮಾಡಿಕೊಳ್ಳಬೇಡಿ. ರಾಜ್ಯದಲ್ಲಿರುವ ನಮ್ಮನ್ನ ಕೇಳಿ ನಾವೇ ಉತ್ತರ ಕೋಡ್ತಿವಿ ಎಂದು ವಾಗ್ದಾಳಿ ನಡೆಸಿದರು.. ಸಿದ್ದರಾಮಯ್ಯನವರೇ ನಿಮ್ಮ ಮಟ್ಟವನ್ನು ಪ್ರಧಾನಿಗೆ ಹೋಲಿಕೆ ಮಾಡಿಕೊಳ್ಳಬೇಡಿ: ಪ್ರತಾಪ್ ಸಿಂಹ ಟಾಂಗ್
Comments
Post a Comment