'ಡಿ.ಕೆ.ಶಿವಕುಮಾರ್‌ ಅವರೇ ಕಳ್ಳ'!! ಎಂದು ಹೇಳಿದ ಬಿಜೆಪಿ ನಾಯಕ !!!

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಫೋನ್ ಕದ್ದಾಲಿಕೆ ಆರೋಪ ರಾಜ್ಯದಲ್ಲಿ ನಾಯಕರ ವಾಕ್ಸಮರಕ್ಕೆ ಕಾರಣವಾಗಿದೆ. ಕಾಂಗ್ರೆಸ್‌ ಹಾಗೂ ಬಿಜೆಪಿ ನಾಯಕರು ಪರಸ್ಪರ ಆರೋಪ ಪ್ರತ್ಯಾರೋಪಕ್ಕೆ ಮುಂದಾಗಿದ್ದಾರೆ. ಈಗ ವಿಧಾನ ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ಡಿ.ಕೆ.ಶಿವಕುಮಾರ್ ಅವರನ್ನೇ ಕಳ್ಳ ಎಂದು ಹೇಳಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.


ಚನ್ನಪಟ್ಟಣದಲ್ಲಿ ಮಾತನಾಡಿದ ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌, ಡಿ.ಕೆ.ಶಿವಕುಮಾರ್‌ ಅವರೇ ಕಳ್ಳ ಅವರು ಇನ್ನೊಬ್ಬರ ಮೇಲೆ ಆರೋಪ ಮಾಡೋದು ಏನಿದೆ? ಅವರ ಫೋನ್ ಕದ್ದಾಲಿಕೆ ಮಾಡಿ ಯಾವ ರಾಜ್ಯ ಗೆಲ್ಲಬೇಕು. ಹಿಂದೊಮ್ಮೆ ಅವರೇ ಕಾಲ್‌ ಟ್ಯಾಪಿಂಗ್ ಮಾಡಿಸಿ, ನನ್ನ ಮೇಲೆ ಫೋನ್ ಕದ್ದಾಲಿಕೆ ಆರೋಪ ಮಾಡಿದ್ದರು ಎಂದು ಟೀಕಿಸಿದರು.

ಜನರ ಗಮನವನ್ನು ಬೇರೆ ಕಡೆ ಸೆಳೆಯುವ ಪ್ರಯತ್ನವನ್ನು ಡಿ.ಕೆ.ಶಿವಕುಮಾರ್‌ ಮಾಡುತ್ತಿದ್ದಾರೆ. ಯಾವ ಉದ್ದೇಶಕ್ಕಾಗಿ ಅವರ ಫೋನ್ ಟ್ಯಾಪ್ ಮಾಡಬೇಕು. ಅದೊಂದು ಸುಳ್ಳು ಆರೋಪ ಎಂದು ಸಿ.ಪಿ.ಯೋಗೇಶ್ವರ್ ಕಿಡಿಕಾರಿದರು. ಇದೇ ಸಂದರ್ಭದಲ್ಲಿ ಜನರಿಗೆ ಟಾಂಗ್‌ ನೀಡಿದ ಸಿ.ಪಿ.ಯೋಗೇಶ್ವರ್‌ ಜನ ನನ್ನ ಕೈಬಿಟ್ಟರು ಪಕ್ಷ ನನ್ನ ಕೈ ಹಿಡಿಯಿತು ಎಂದು ಹೇಳಿದರು.

ಕುಮಾರಸ್ವಾಮಿ ಶಕ್ತಿಯುಳ್ಳವರು..!
ಇನ್ನು, ಚನ್ನಪಟ್ಟಣ ಅಭಿವೃದ್ಧಿಗೆ ಬಿಜೆಪಿ ಸರಕಾರದಲ್ಲಿ ಅನುದಾನಗಳನ್ನು ತಡೆ ಹಿಡಿಯಲಾಗುತ್ತಿದೆ ಎಂದ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ಯೋಗೇಶ್ವರ್‌, ಆ ರೀತಿ ಯಾವುದೇ ಅನುದಾನ ತಡೆಯಾಗಿದ್ದರೆ ನಾನು ಗಮನಹರಿಸುತ್ತೇನೆ. ಕುಮಾರಸ್ವಾಮಿಯವರು ಶಕ್ತಿಯುಳ್ಳವರು, ಬಿಜೆಪಿ ಸರಕಾರದ ಜತೆಗೆ ಉತ್ತಮ ಬಾಂಧವ್ಯ ಇದೆ ಎಂದು ಅವರೇ ಹೇಳುತ್ತಾರೆ. ಮುಂದೆ ಚನ್ನಪಟ್ಟಣಕ್ಕೆ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಮಾಡುತ್ತಾರೆ ಎಂದು ಮಾಜಿ ಸಿಎಂಗೆ ಟಾಂಗ್‌ ನೀಡಿದರು.

ಡಿ.ಕೆ.ಸುರೇಶ್‌ಗೆ ಸಿಪಿವೈ ಟಾಂಗ್‌
ಚನ್ನಪಟ್ಟಣ ಕ್ಷೇತ್ರದ ನರೇಗಾ ಬಿಲ್‌ನಲ್ಲಿ ವ್ಯತ್ಯಾಸವಾಗಿರುವ ಬಗ್ಗೆ ಸಂಸದ ಡಿ.ಕೆ.ಸುರೇಶ್ ಹೆಸರನ್ನು ಹೇಳದೇ ಸಿಪಿವೈ ಟಾಂಗ್ ನೀಡಿದರು. ಅವರು ಕನಕಪುರಕ್ಕೆ ಹೆಚ್ಚಿನ ಹಣ ತೆಗೆದುಕೊಂಡು ಹೋಗುತ್ತಾರೆ. ಉಳಿದ ರಾಮನಗರ, ಚನ್ನಪಟ್ಟಣ, ಮಾಗಡಿಗೆ ನರೇಗಾ ಹಣವೇ ಸಿಗಲ್ಲ. ಕೇಂದ್ರದಿಂದ ಹಣ ಬಿಡುಗಡೆಯಾಗುತ್ತಿದ್ದಂತೆ ಎಲ್ಲವೂ ಕನಕಪುರಕ್ಕೆ ಶಿಫ್ಟ್ ಆಗುತ್ತಿತ್ತು. ಆದರೆ, ಈಗ ಅದೆಲ್ಲವೂ ಸರಿಯಾಗಬೇಕಿದೆ. ಎಲ್ಲ ತಾಲೂಕಿಗೂ ಅನುದಾನ ಹಂಚಿಕೆ ಅನುಪಾತ ಸರಿಯಾಗಬೇಕು ಎಂದು ಹೇಳಿದರು.

Comments