ಇದೀಗ ಬಂದ ಸುದ್ದಿ!! ಸುಪ್ರೀಂ ಕೋರ್ಟ್ ಗೆ ಈ ರೀತಿ ಬರೆದು ಅರ್ಜಿ ಸಲ್ಲಿಸಿದ ಡಿ.ಕೆ. ಶಿವಕುಮಾರ್! ಇದಕ್ಕೆ ಸುಪ್ರೀಂ ಕೋರ್ಟ್ ನಿಂದ ಬಂದ ಉತ್ತರವಾದರೂ ಏನು?

ನವ ದೆಹಲಿ (ಆಗಸ್ಟ್‌ 27) ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಿವಾಸದ ಮೇಲೆ ಐಟಿ ದಾಳಿ ಸೇರಿದಂತೆ ಇತರೆ ಪ್ರಕರಣಗಳಿಂದ ತಮ್ಮನ್ನು ಕೈಬಿಡುವಂತೆ ಕೋರಿ ಡಿಕೆಶಿ ಸಲ್ಲಿಸಿದ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ನಾಲ್ಕು ವಾರಗಳ ಕಾಲ ಮುಂದೂಡಿ ಆದೇಶಿಸಿದೆ.

ಡಿ.ಕೆ. ಶಿವಕುಮಾರ್‌ವಿರುದ್ಧ ಐಟಿ ಇಲಾಖೆ ಸಲ್ಲಿಸಿರುವ ಪ್ರಕರಣಗಳನ್ನು ರದ್ದುಗೊಳಿಸುವಂತೆ ಕೋರಿ ಡಿ.ಕೆ. ಶಿವಕುಮಾರ್‌ ಪರ ವಕೀಲರು ಕೋರ್ಟ್‌ ಮೊರೆ ಹೋಗಿದ್ದರು. ಆದರೆ, ಪ್ರತಿವಾದ ಸಲ್ಲಿಕೆಗೆ ಕೇಂದ್ರ ಸರ್ಕಾರ ಎರಡು ವಾರಗಳ ಕಾಲಾವಕಾಶ ಕೇಳಿತ್ತು. ಹೀಗಾಗಿ ಕೇಂದ್ರದ ಮನವಿ ಹಿನ್ನಲೆ ಸಮಯಾವಕಾಶ ನೀಡಿರುವ ಕೋರ್ಟ್ ನಾಲ್ಕು ವಾರಗಳ ಕಾಲ ಪ್ರಕರಣದ ವಿಚಾರಣೆಯನ್ನು ಮುಂದೂಡಿದೆ. ಕಳೆದ ವರ್ಷ ಮಾರ್ಚ್​​ ತಿಂಗಳಿನಲ್ಲಿ ಸಚಿವ ಡಿ.ಕೆ ಶಿವಕುಮಾರ್​​ ದೆಹಲಿಯ ಫ್ಲ್ಯಾಟ್‌ಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಲೆಕ್ಕಕ್ಕೆ ಬರದ ಹಣ ಮತ್ತು ಆಸ್ತಿಲೆಕ್ಕ ಪತ್ರಗಳನ್ನು ಪತ್ತೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ, ಶಿವಕುಮಾರ್ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಕಲಂ 120-'ಬಿ' (ಅಪರಾಧಿಕ ಒಳಸಂಚು) ಅನುಸಾರ ಪ್ರಕರಣ ದಾಖಲಿಸಿದೆ. ಅಂತೆಯೇ ಆದಾಯ ತೆರಿಗೆ ಕಾಯ್ದೆ-1961ರ ಕಲಂ 276 ಸಿ (1) ಮತ್ತು 277ರ ಪ್ರಕಾರ ದಂಡನೀಯ ಅಪರಾಧ ಎಸಗಿದ್ದಾರೆ' ಎಂದೂ ಆರೋಪಿಸಲಾಗಿದೆ.

ಹೀಗಾಗಿ ಐಟಿ ದಾಳಿಗೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣದಲ್ಲಿ ನನ್ನನ್ನು ಕೈಬಿಡಬೇಕು ಎಂದು ಕೋರಿ ಡಿ.ಕೆ.ಶಿವಕುಮಾರ್ ವಿಶೇಷ ಕೋರ್ಟ್‌ ಮೆಟ್ಟಿಲೇರಿದ್ದರು. ಆದರೆ, ಅಲ್ಲಿ ತಮಗೆ ಸೂಕ್ತ ನ್ಯಾಯ ದೊರಕಿಲ್ಲ ಎಂದು ಇದೀಗ ಸುಪ್ರೀಂ ಕೋರ್ಟ್‌ ಮೊರೆಹೋಗಿದ್ದಾರೆ. 


Comments