ಬಿಜೆಪಿಯ ಪ್ರಶ್ನೆಗಳಿಗೆ ಸಿದ್ದರಾಮಯ್ಯ ಮೌನವೇಕೆ? ಏನನ್ನು ಮುಚ್ಚಿಡುತ್ತಿದ್ದಾರೆ ಗೊತ್ತಾ?

 

ಬೆಂಗಳೂರು: ಅನಗತ್ಯ ವಿಚಾರಗಳನ್ನು ಪ್ರಸ್ತಾಪಿಸುತ್ತಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬಿಜೆಪಿ ಎತ್ತಿರುವ ಗಂಭೀರ ಪ್ರಶ್ನೆಗಳಿಗೆ ಮೌನ ವಹಿಸುತ್ತಿರುವುದು, ಅವರು ಏನನ್ನೋ ಮುಚ್ಚಿಡುತ್ತಿರುವುದನ್ನು ಖಾತರಿಪಡಿಸುತ್ತದೆ ಎಂದು ಬಿಜೆಪಿ ವಕ್ತಾರ ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್‌ ಹೇಳಿದ್ದಾರೆ.


''ಅಧಿಕಾರಾವಧಿಯಲ್ಲಿ ಪಿಎಫ್‌‍ಐ, ಎಸ್‌‍ಡಿಪಿಐನ ನೂರಾರು ಕಾರ್ಯಕರ್ತರ ವಿರುದ್ಧದ ಪ್ರಕರಣವನ್ನು ಮುಕ್ತಾಯಗೊಳಿಸಿ ಬಿಡುಗಡೆಗೊಳಿಸಿದ್ದು ಏಕೆ? ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾದ ಎಸ್‌‍ಡಿಪಿಐ, ಪಿಎಫ್‌‍ಐ ಕಾರ್ಯಕರ್ತರನ್ನು 2013ರಿಂದ 2018ರ ಅವಧಿಯಲ್ಲಿ ಮುಕ್ತವಾಗಿ ಕಾನೂನು ಕ್ರಮದಿಂದ ಹೊರ ಹೋಗಲು ಅವಕಾಶ ನೀಡಿದ್ದು ಏಕೆ? ಸಿದ್ದರಾಮಯ್ಯ ಹಾಗೂ ಅವರ ಪಕ್ಷದ ನೈತಿಕ, ಕಾನೂನಾತ್ಮಕ ಹಾಗೂ ಆಡಳಿತಾತ್ಮಕ ಬೆಂಬಲದಿಂದ ಎಸ್‌‍ಡಿಪಿಐ, ಪಿಎಫ್‌‍ಐ ಕಾರ್ಯಕರ್ತರೆಲ್ಲಾ ರಾಜ್ಯದ ನಾನಾ ಭಾಗಗಳಲ್ಲಿ ಗಲಭೆ ಸೃಷ್ಟಿಸಲು ಮುಂದಾಗುವಂತಾಯಿತು. ಇದಕ್ಕೆ ವಿಶ್ವಾಸಾರ್ಹ ವಿವರಣೆಯನ್ನು ಬಿಜೆಪಿ ಬಯಸಿತ್ತು,'' ಎಂದು ಹೇಳಿದ್ದಾರೆ.

Comments