ಪಿಎಂಜಿಕೆಎವೈ ಹಾಗೂ ಎನ್‍ಎಫ್‍ಎಸ್‍ಎ ಯೋಜನೆಯಡಿ ಆಗಸ್ಟ್ ಮಾಹೆಗೆ ಬಿಡುಗಡೆಯಾದ ಪಡಿತರ ಧಾನ್ಯವನ್ನು ಅಂತ್ಯೋದಯ ಪಡಿತರ ಚೀಟಿಗೆ ಅಕ್ಕಿ 15 ಕೆ.ಜಿ. ಪ್ರತಿ ಕಾರ್ಡ್‍ಗೆ, ಅಕ್ಕಿ 5 ಕೆ.ಜಿ ಪ್ರತಿ ಸದಸ್ಯರಿಗೆ ಉಚಿತವಾಗಿದೆ. ಬಿಪಿಎಲ್ ಪಡಿತರ ಚೀಟಿಗೆ ಅಕ್ಕಿ- 5 ಕೆ.ಜಿ ಪ್ರತಿ ಸದಸ್ಯರಿಗೆ, ರಾಗಿ- 5 ಕೆ.ಜಿ., ಪ್ರತಿ ಸದಸ್ಯರಿಗೆ ಹಾಗೂ ಗೋಧಿ- 2 ಕೆ.ಜಿ. ಪ್ರತಿ ಕಾರ್ಡ್‍ಗೆ ಉಚಿತವಾಗಿದೆ.
ಎಪಿಎಲ್ ಪಡಿತರ ಚೀಟಿಗೆ ಏಕ ಸದಸ್ಯರಿಗೆ ಅಕ್ಕಿ- 5 ಕೆಜಿ, 2 ಮತ್ತು ಹೆಚ್ಚಿನ ಸದಸ್ಯರಿಗೆ ಅಕ್ಕಿ- 10 ಕೆಜಿಯಾಗಿದ್ದು, ಇದು ಪ್ರತಿ ಕೆ.ಜಿ. ಗೆ 15 ರೂ. ಆಗಿರುತ್ತದೆ. ವಲಸೆ ಕಾರ್ಮಿಕರಿಗೆ ಹಾಗೂ ಪಡಿತರ ಚೀಟಿ ಪಡೆದಿರುವ ಪ್ರತಿ ಫಲಾನುಭವಿಗೆ ಅಗಸ್ಟ್ ಮಾಹೆಗೆ 5 ಕೆ.ಜಿ. ಅಕ್ಕಿ ಉಚಿತವಾಗಿರುತ್ತದೆ. ಅಂತರ್ ರಾಜ್ಯ ಮತ್ತು ಅಂತರ್ ಜಿಲ್ಲೆ ಪೋರ್ಟಿಬಿಲಿಟಿ ಜಾರಿಯಲ್ಲಿರುವುದರಿಂದ ಯಾವುದೇ ಪಡಿತರ ವರ್ಗದ ಪಡಿತರ ಚೀಟಿಗೆ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಕಡ್ಡಾಯವಾಗಿ ಬೆರಳಚ್ಚು ಮೂಲಕ ಹಾಗೂ ಬೆರಳಚ್ಚು ಬಾರದ ಕಾರ್ಡುದಾರರು ಆಧಾರ್ ಓಟಿಪಿ ಮೂಲಕವೇ ಪಡಿತರ ವಿತರಣೆ ಮಾಡಲಾಗುವುದು. ಜೊತೆಗೆ ಪಡಿತರದಾರರು ಸಾಮಾಜಿಕ ಅಂತರದಲ್ಲಿ ನಿಂತು ಪಡಿತರ ಪಡೆದುಕೊಳ್ಳಬೇಕು ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
Comments
Post a Comment