ನಾನು ಯಾಕಾದರೂ ಶಾಸಕನಾದೆ ಎಂಬ ನೋವು ನನ್ನನ್ನು ಕಾಡುತ್ತಿದೆ ಎಂದು ಹೇಳಿದ ಕಾಂಗ್ರೆಸ್ ನಾಯಕ!!!

ಗ್ರಾಮಕ್ಕೆ ಒಂದು ಆರ್‌.ಒ. ಪ್ಲಾಂಟ್‌, ಒಂದು ಹೈಮಾಸ್ಟ್‌ ದೀಪ ಆಳವಡಿಕೆಗೆ ಹಣ ನೀಡಲಾಗದ ಇಂದಿನ ಬಿಜೆಪಿ ಸರ್ಕಾರದ ಅಡಳಿತ ಕಾಲದಲ್ಲಿ ನಾನು ಯಾಕಾದರೂ ಶಾಸಕನಾದೆ ಎಂಬ ನೋವು ನನ್ನನ್ನು ಕಾಡುತ್ತಿದೆ ಎಂದು ಶಾಸಕ ನಂಜೇಗೌಡ ಹೇಳಿದರು.

ಅವರು ಇಲ್ಲಿನ ಕೋಚಿಮುಲ್‌ ಶಿಬಿರ ಕಚೇರಿಯ ಸಭಾಂಗಣದಲ್ಲಿ ಡಿಸಿಸಿ ಬ್ಯಾಂಕ್‌ ಸಹಯೋಗದಲ್ಲಿ ಕೆಸಿಸಿ ಯೋಜನೆಯಡಿ ಹಾಲು ಉತ್ಪಾದಕರು ಮತ್ತು ಮಹಿಳಾ ಸಂಘಗಳಿಗೆ ಸಾಲ ವಿತರಣೆ ಮಾಡಿ ಮಾತನಾಡಿದ ಅವರು, ನೀವು ನನ್ನನ್ನು ಶಾಸಕನನ್ನಾಗಿ ಆಯ್ಕೆ ಮಾಡಿಕೊಂಡಿದ್ದೀರಿ. ನಾನು ಸಹ 15 ತಿಂಗಳಲ್ಲಿ ತಾಲೂಕಿನ ವಿವಿಧ ಕಾಮಗಾರಿಗಳಿಗೆ ದಾಖಲೆಯ 220 ಕೋಟಿ ಮಂಜೂರು ಮಾಡಿಸಿದ್ದೆ. ಆದರೆ ಅಧಿಕಾರದ ಆಸೆಯಿಂದ ಅಧಿಕಾರಕ್ಕೆ ಬಂದ ಇಂದಿನ ಬಿಜೆಪಿ ಸರ್ಕಾರವು ಹಣ ಇಲ್ಲದೆ ಅಭಿವೃದ್ಧಿ ಕಾಮಗಾರಿಗಳು ಮರೀಚಿಕೆಯಾಗುತ್ತಿವೆ ಎಂದು ಆರೋಪಿಸಿದರು.

ಡಿಸಿಸಿ ಬ್ಯಾಂಕ್‌ ನೆರವು: 

ನಮ್ಮ ತಾಲೂಕಿಗೆ ಮಂಜೂರಾಗಿದ್ದ ಹಣವನ್ನು ರಾಜ್ಯ ಸರ್ಕಾರ ತಡೆ ಹಿಡಿದಿದ್ದರೂ ರೈತರ ಹಾಗೂ ಮಹಿಳೆಯರ ಪರವಾಗಿ ಡಿಸಿಸಿ ಬ್ಯಾಂಕ್‌ ಮುಂದೆ ಬಂದಿರುವುದು ಸಾಮಾಧಾನದ ವಿಷಯ. ರೈತರಿಗೆ ಹಾಗೂ ಮಹಿಳೆಯರಿಗೆ ಬಡ್ಡಿ ರಹಿತ ಸಾಲ ನೀಡುತ್ತಿರುವ ಬ್ಯಾಂಕ್‌ ಈಗ ಹಾಲು ಉತ್ಪಾದಕರಿಗೂ ಬಡ್ಡಿ ರಹಿತ ಸಾಲ ನೀಡುತ್ತಿದೆ. ರೈತರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಅಲ್ಲದೆ ಸಕಾಲದಲ್ಲಿ ಸಾಲ ಮರುಪಾವತಿ ಮಾಡಿದರೆ ಇನ್ನಷ್ಟುಹೆಚ್ಚಿನ ಸಾಲ ನೀಡಿಸುವುದಾಗಿ ತಿಳಿಸಿದರು.

ರೈತರು ಮತ್ತು ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗಾಗಿ ನೆರವು ನೀಡುತ್ತಿರುವ ಡಿ.ಸಿ.ಸಿ.ಬ್ಯಾಂಕ್‌ನಲ್ಲಿ ಕರ್ಮಷಿಯಲ್‌ ಬ್ಯಾಂಕ್‌ ನಲ್ಲಿ ಇಟ್ಟಿರುವ ನಿಮ್ಮ ಸಂಘಗಳ 13 ಕೋಟಿ ರು.ಗಳನ್ನು ಡಿಸಿಸಿ ಬ್ಯಾಂಕ್‌ ನಲ್ಲಿ ಠೇವಣಿ ಇಡುವಂತೆ ಮನವಿ ಮಾಡಿದರು.

ಬಡ್ಡಿ ಮಾಫಿಯಾದಿಂದ ರಕ್ಷಿಸುವ ಉದ್ದೇಶ

 ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇ ಗೌಡ ಮಾತನಾಡಿ, ಜಿಲ್ಲೆಯಲ್ಲಿ ರೈತರ, ಮಹಿಳೆಯರನ್ನು ಬಡ್ಡಿ ಮಾಫಿಯಾದಿಂದ ಹೊರ ತರುವ ಸಲುವಾಗಿ ಡಿ.ಸಿ.ಸಿ.ಬ್ಯಾಂಕ್‌ ಬಡ್ಡಿ ರಹಿತ ಸಾಲ ನೀಡಲಾಗುತ್ತಿದೆ. ಬಡವರ, ಶ್ರಮಿಕರ, ರೈತರ, ಮಹಿಳಾ ಗುಂಪುನವರು ನಮ್ಮಲ್ಲಿ ಖಾತೆ ತೆರೆದು ವ್ಯವಹಾರ ನಡೆಸಿ ಎಂದ ಬ್ಯಾಲಹಳ್ಳಿ ಅವರು ಕಷ್ಟಗಳಿಗೆ ಸ್ಪಂದಿಸುತ್ತಿರುವ ಡಿ.ಸಿ.ಸಿ ಬ್ಯಾಂಕ್‌ ನಿಮ್ಮೆಲ್ಲರಿಗೂ ತವರು ಮನೆ ಇದ್ದಂತೆ. ಅದಕ್ಕೆ ಮೋಸ ಮಾಡಲಾಲಿರಿ ಎಂಬ ಭರವಸೆ ನಮ್ಮಗಿದೆ ಎಂದರು.



Comments