"ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ವಜಾಗೊಳಿಸಬೇಕೆಂದು ಸಿದ್ದರಾಮಯ್ಯನವರು ಆಗ್ರಹಿಸಿದ್ದಾರೆ. ರಾಹುಲ್ ಗಾಂಧಿ ಒಂದು ವೇಳೆ ಪ್ರಧಾನಿಯಾದರೆ, ಸಿದ್ದರಾಮಯ್ಯನವರು ಬೇಕಾದನ್ನು ಡಿಮಾಂಡ್ ಮಾಡಿ, ಪಡೆದುಕೊಂಡು ಬರಲಿ"ಎಂದು ಸುಧಾಕರ್ ಕಿಡಿಕಾರಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ, "ಜಿಎಸ್ಟಿ ವಿಚಾರದಲ್ಲಿ ರಾಜ್ಯದ ಪಾಲಿಗೆ ಖೋತಾ ಆಗಿದೆ ಎನ್ನುವುದನ್ನು ಒಪ್ಪಿಕೊಳ್ಳುತ್ತೇವೆ. ಆದರೆ, ಈ ವಿಚಾರದಲ್ಲಿ ಕೇಂದ್ರದ ಜೊತೆ ಸಂಘರ್ಷಕ್ಕೆ ಇಳಿಯುವುದಿಲ್ಲ"ಎಂದು ಸುಧಾಕರ್ ಸ್ಪಷ್ಟ ಪಡಿಸಿದರು.
"ಸಂಘರ್ಷ ಮಾಡಿಕೊಂಡು ಬರುವುದು ಕಾಂಗ್ರೆಸ್ಸಿನ ನೀತಿ. ಆದರೆ, ಕೇಂದ್ರದ ಜೊತೆ ಸಂಘರ್ಷ ನಡೆಸದೇ, ರಾಜ್ಯದ ಅಭಿವೃದ್ದಿ ಹೇಗೆ ಮಾಡಬೇಕು ಎನ್ನುವುದು ನಮಗೆ ಅರಿತಿದೆ"ಎಂದು ಸಿದ್ದರಾಮಯ್ಯನವರ ಟೀಕೆಗೆ ಸುಧಾಕರ್ ಉತ್ತರಿಸಿದ್ದಾರೆ. "ಸಿದ್ದರಾಮಯ್ಯನವರು ಸ್ವತಂತ್ರರು. ಅವರು ಡಿಜೆ ಹಳ್ಳಿಗಾದರೂ ಹೋಗಲಿ, ನಮಗೇನು ಅಭ್ಯಂತರವಿಲ್ಲ. ಎಲ್ಲಾ ವಿಚಾರದಲ್ಲೂ ನಮ್ಮ ಸರಕಾರ ಸರಿಯಾದ ದಾರಿಯಲ್ಲಿ ಸಾಗುತ್ತಿದೆ"ಎಂದು ಡಾ.ಸುಧಾಕರ್ ಹೇಳಿದರು.
"ದೇಶ ಎದುರಿಸುತ್ತಿರುವ ಈಗಿನ ಆರ್ಥಿಕ ದುಸ್ಥಿತಿಗೆ ನೋಟು ರದ್ದತಿ, ಜಿಎಸ್ಟಿ ಜಾರಿ ಮತ್ತು ಕೆಲಸವೇ ಗೊತ್ತಿಲ್ಲದ ಅಡ್ಡಕಸುಬಿ ಸಚಿವರು ಕೂಡಾ ಕಾರಣ. ಕೇಂದ್ರ ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಅವರನ್ನು ವಜಾಗೊಳಿಸಬೇಕು" ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದರು.
Comments
Post a Comment