ನವದೆಹಲಿ : ನಗರವಾಸಿಗಳಿಗೆ ಕೇಂದ್ರ ಸರ್ಕಾರ ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಿದ್ದು, ಉದ್ಯೋಗ ಖಾತ್ರಿ ಯೋಜನೆಯನ್ನು ನಗರಗಳಿಗೂ ವಿಸ್ತರಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ವಸತಿ ಹಾಗೂ ನಗರಾಭಿವೃದ್ಧಿ ಜಂಟಿ ನಿರ್ದೇಶಕ ಸಂಜಯ್ ಕುಮಾರ್ ಈ ಬಗ್ಗೆ ಮಾಹಿತಿ ನೀಡಿದ್ದು, ನರೇಗಾವನ್ನು ಸಣ್ಣ ಮತ್ತು ಮಧ್ಯಮ ನಗರಕ್ಕೆ ವಿಸ್ತರಿಸುವ ಚಿಂತನೆ ಮಾಡಲಾಗಿದ್ದು, ಇದಕ್ಕಾಗಿ 35,068 ಕೋಟಿ ರೂ. ಮೀಸಲಿಡುವುದಾಗಿ ಹೇಳಿದ್ದಾರೆ.
ಕೊರೊನಾ ವೈರಸ್ ನಿಂದ ಆಗಿರುವ ಪರಿಣಾಮವನ್ನು ತಗ್ಗಿಸುವ ಉದ್ದೇಶದಿಂದ ಸಣ್ಣ ನಗರಗಳಲ್ಲಿ ಮೊದಲು ನರೇಗಾ ಯೋಜನೆಯನ್ನು ಆರಂಭಿಸಲಾಗುವುದು. ರಸ್ತೆ ನಿರ್ಮಾಣ, ಬಾವಿ ನಿರ್ಮಾಣದಂತಹ ಕೆಲಸಗಳು ಇದರಲ್ಲಿ ಒಳಗೊಳ್ಳಲಿವೆ. ದೇಶದ 270 ಮಿಲಿಯನ್ ಜನರಿಗೆ ಇದರಿಂದ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಈ ಯೋಜನೆಯನ್ನು ಅನುಷ್ಠಾನಕ್ಕೆ ತಂದಿತ್ತು. ಈ ಯೋಜನೆಯನ್ವಯ ಗ್ರಾಮೀಣ ಒಳನಾಡು ಪ್ರದೇಶಗಳಲ್ಲಿ ವರ್ಷಕ್ಕೆ ಕನಿಷ್ಠ ನೂರು ದಿನ ಕೆಲಸದ ಖಾತರಿಯಿದ್ದು, 202 ರೂ. ಕನಿಷ್ಠ ದಿನಗೂಲಿ ನೀಡಲಾಗುತ್ತದೆ.
Comments
Post a Comment