ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಿವಾಸದಲ್ಲಿ ಮೇಲೆ CBI ದಾಳಿ ಕುರಿತು ಮತನಾಡಿದ ಬಿಜೆಪಿ ವಿಧಾನಪರಿಷತ್ ಸದಸ್ಯ ಚ್.ವಿಶ್ವನಾಥ್, ಅವರಿಗೆ ಗೆದ್ದು ಬರುವುದೂ ಗೊತ್ತು. ಅವರಿಗೆ ಆ ಶಕ್ತಿ ಇದೆ ಎಂದಿದ್ದಾರೆ.
ಇಂದು (ಸೋಮವಾರ) ಸುದ್ದಿಗಾರರೊಂದಿಗೆ ಮತನಾಡಿದ ಅವರು, ನಾನು ತುಂಬಾ ವರ್ಷ ಅವರ ಜೊತೆ ಇದ್ದವನು. ಈಗಾಗಿ ಈ ಮಾತು ಹೇಳುತ್ತಿದ್ದೇನೆ. ಡಿಕೆಶಿಗೆ ಇಂತಹವನ್ನು ಎದರಿಸುವುದು ಗೊತ್ತು. ಗೆದ್ದು ಬರುವುದೂ ಗೊತ್ತು. ಅವರಿಗೆ ಆ ಶಕ್ತಿ ಇದೆ ಎಂದು ಹೇಳಿದರು.
ಇವೆಲ್ಲ ದಾಳಿಗಳು ಒಂದು ರೀತಿಯಲ್ಲಿ ಸಹಜ. ಇವುಗಳನ್ನು ರಾಜಕೀಯ ದಾಳಿ ಎಂದು ವಿಶ್ಲೇಷಣೆ ಮಾಡುವುದು ಸರಿಯಲ್ಲ. ದಾಳಿ ಬಗ್ಗೆ ಹಾಗೆ ಹೇಳಿರುವ ಸಿದ್ದರಾಮಯ್ಯ ಹೇಳಿಕೆ ಸತ್ಯವಲ್ಲ. ಇವೆಲ್ಲವು ಒಂದೊಂದು ರೀತಿ ಸಹಜ ಪ್ರಕ್ರಿಯೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ತಿರುಗೇಟು ಕೊಟ್ಟಿದ್ದಾರೆ.
Comments
Post a Comment