Breaking News!! ಸಿಬಿಐ ದಾಳಿ ಬಳಿಕ ಡಿಕೆಶಿ ಫಸ್ಟ್ ರಿಯಾಕ್ಷನ್ ಏನೆಂದು ಗೊತ್ತಾ!!!

ಬೆಂಗಳೂರು: ಸಿಬಿಐ ದಾಳಿ ಬಳಿಕ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ತಮ್ಮ ಬೆಂಬಲಿಗರಿಗೆ ಧನ್ಯವಾದ ಅರ್ಪಿಸಿದ್ದಾರೆ. ಸಿಬಿಐ ದಾಳಿ ವೇಳೆ ತಮ್ಮನ್ನು ಬೆಂಬಲಿಸಿದ ಎಲ್ಲಾ ಕಾರ್ಯಕರ್ತರಿಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

ನಿಮ್ಮ ಅಭಿಮಾನಕ್ಕೆ ಋಣಿಯಾಗಿದ್ದೇನೆ ಎಂದಿರುವ ಡಿಕೆಶಿ, ಅಭಿಮಾನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದಿದ್ದಾರೆ. ತಲೆಬಾಗಿಸಿ ನಿಮಗೆಲ್ಲಾ ನಮಸ್ಕಾರ ಅರ್ಪಿಸಲು ಬಯಸುತ್ತೇನೆ ಎಂದ ಡಿಕೆಶಿ, ನಾನು ಯಾವ ರೀತಿಯ ತಪ್ಪೂ ಮಾಡಿಲ್ಲ, ನಿಮಗೆ ಕಳಂಕ ತರುವ ಕೆಲಸ ಮಾಡಿಲ್ಲ ಎಂದಿದ್ದಾರೆ.

2017ರಲ್ಲಿ ಗುಜರಾತ್ ಚುನಾವಣೆ ಸಂದರ್ಭದಲ್ಲಿ ಐಟಿ ದಾಳಿ ನಡೆದಿತ್ತು. 2018ರಲ್ಲಿ ಇಡಿ ಕೇಸ್ ಹಾಕಿ ಬಂಧನ ಮಾಡಿದರು ಎಂದು ಹಳೆಯ ತನಿಖೆಗಳನ್ನು ಪ್ರಸ್ತಾಪಿಸಿದ ಡಿಕೆಶಿ, ಸಿಬಿಐ ತನಿಖೆಗೆ ಅಡ್ವೋಕೇಟ್ ಜನರಲ್ ಬೇಡ ಎಂದರೂ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ದಾಳಿ ನಡಿದಿದೆ. ಇದು ಮುಗಿಯಲ್ಲ ಎಂದು ಡಿಕೆಶಿ ಭವಿಷ್ಯ ನುಡಿದರು.

ಕಳೆದ 30 ವರ್ಷದ ರಾಜಕಾರಣದಲ್ಲಿ ಒಂದೂ ತನಿಖೆ ಇಲ್ಲ, ಯಾರೂ ನನ್ನನ್ನು ಭ್ರಷ್ಟ ಎಂದು ತೋರಿಸಲು ಸಾಧ್ಯವಾಗಿಲ್ಲ ಎಂದ ಡಿಕೆಶಿ, ನಾನು ಯಾರನ್ನು ದೂಷಣೆ ಮಾಡಲ್ಲ ಎಂದರು. ಅಧಿಕಾರಿಗಳು ಸರ್ಕಾರ ಹೇಳಿದಂತೆ ಕೇಳುತ್ತಾರೆ. ಸಿಬಿಐ ಅಧಿಕಾರಿಗಳು ಸ್ವಲ್ಪ ವೃತ್ತಿಪರವಾಗಿ ಇದ್ದಾರೆ ಎಂದೂ ಡಿಕೆಶಿ ಶ್ಲಾಘಿಸಿದರು.

50 ಲಕ್ಷ ಸಿಕ್ಕಿದೆ ಎಂದು ವರದಿ ಬರುತ್ತಿದೆ. ನಾನು ತಲೆ ಕೆಡಿಸಿಕೊಳ್ಳಲು ಹೋಗಲ್ಲ. ದಾಳಿ ನಡೆಸಿದ ಅಧಿಕಾರಿಗಳು ಎಲ್ಲಾ ಲೆಕ್ಕ ಹಾಕಿಕೊಂಡು ಹೋಗಿದ್ದಾರೆ. ಪ್ಯಾಂಟ್, ಪಂಚೆ, ಸೀರೆ ಲೆಕ್ಕ ಹಾಕಿದ್ದಾರೆ. ನಾನು ತಪ್ಪು ಮಾಡಿಲ್ಲ, ರಾಜಕಾರಣದ ಕುತಂತ್ರಕ್ಕೆ ಬಗ್ಗಲ್ಲ, ಒತ್ತಡಕ್ಕೆ ಹೆದರಲ್ಲ ಎಂದು ವಿಶ್ವಾಸದ ಮಾತುಗಳನ್ನಾಡಿದ ಡಿಕೆಶಿ, ಭಕ್ತ ಉಂಟು ಭಗವಂತ ಉಂಟು ಎಂದರು.

ಕುತಂತ್ರಕ್ಕೆ ಹೆದರುವ ಮಗ ನಾನಲ್ಲ ಎಂದು ತೊಡೆತಟ್ಟಿರುವ ಡಿಕೆಶಿ, ತೊಂದರೆ ಕೊಡುವವರಿಗೆ ದೇವರು ಒಳ್ಳೆಯದು ಮಾಡಲಿ. ನಾಳೆಯಿಂದ ಚುನಾವಣೆ ಕೆಲಸ ಮಾಡಬೇಕಿದೆ. ಈ ದಾಳಿಗೆ ಉಪ ಚುನಾವಣೆಯಲ್ಲಿ ಉತ್ತರ ಕೊಡೋಣ ಎಂದರು.

Comments