ಬರೋಬ್ಬರಿ ’15 ಗಂಟೆಗಳ ಕಾಲ ಕಿಟ್ ಧರಿಸಿದ್ದ ವೈದ್ಯರಿಗೆ ಆಗಿದ್ದೇನು ಗೊತ್ತಾ.? ನಮ್ಮ ಜೀವ ರಕ್ಷಣೆಗೆ ಹೋರಾಡುತ್ತಿರುವ ವೈದ್ಯರಿಗೆ ನಮ್ಮದೊಂದು ಸಲಾಂ
ಕೊರೋನಾ ರೋಗವೂ ವಿಶ್ವಕ್ಕೆ ಅಂಟಿರುವ ಮಹಾ-ಮಾರಿ ಎಂಬುದು ಈಗಾಗಲೇ ಎಲ್ಲಾರಿಗೂ ತಿಳಿದಿರುವ ಸತ್ಯ. ಇಡೀ ವಿಶ್ವದ್ಯಾಂತ ಈಗಾಗಲೇ ಸಾವಿರಾರು ಸಾವು ನೋವುಗಳು ಸಂಭವಿಸಿದೆ. ಮಾತ್ರವಲ್ಲದೆ ವಿಶ್ವದ ಎಲ್ಲಾ ವೈದ್ಯಕೀಯ ಸಿಬ್ಬಂದಿಗಳು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಈ ರೋಗದ ವಿರುದ್ದ ಹೋರಾಡಲು ಶ್ರ,ಮಿಸುತ್ತಿದ್ದರೆ. ಮಾತ್ರವಲ್ಲದೆ ಈಗಾಗಲೇ ಸಾವಿರಾರು ವೈದ್ಯಕೀಯ ಸಿಬ್ಬಂದಿಗಳು ಇದಕ್ಕಾಗಿ ಪ್ರಾಣತೆತ್ತಿರುವುದು ವಿಷಾಧನೀಯ ಸಂಗತಿ.
ಒರ್ವ ಸಾಮಾನ್ಯ ನಾಗರೀಕರಿಗೆ ಕೊರೋನಾ ವಿರುದ್ದ ನೀಡುವ ಮೊದಲ ಸಲಹೆ ಎಂದರೆ ಅದು ಕಡ್ಡಾಯವಾಗಿ ಮಾಸ್ಕ್ ಧರಿಸಿ ಎನ್ನುವುದು ಅದರೆ ಉಸಿರಾಡಲು ಸಮಸ್ಯೆಯಾಗುತ್ತದೆ, ಕಿರಿಕಿರಿ ಎನ್ನುವ ಕಾರಣ ನೀಡಿ ಮಾಸ್ಕ್ ಧರಿಸಲು ಹಿಂಜರಿಯುತ್ತೇವೆ ಅದರೆ ನಮ್ಮನ್ನು ಕಾಪಾಡಲು ದೇವರ ರೂಪದಲ್ಲಿರುವ ವೈದ್ಯರು ಮಾತ್ರ 24 ನಾಲ್ಕು ಗಂಟೆ ಪಿಪಿಇ ಕಿಟ್ ಧರಿಸಿ ಸೇವೆ ಮಾಡುತ್ತಾರೆ ಅವರ ಸ್ಥಿತಿ ಹೇಗಿರಬಹುದು ಎಂಬುದನ್ನು ನೀವೂ ಒಮ್ಮೆ ಯೋಚಿಸಿ.
ಕೊರೋನಾ ಸೋಂಕಿತರ ಸೇವೆಯಲ್ಲಿರುವ ಪ್ರತಿಯೊಬ್ಬರು ಪಿಪಿಇ ಕಿಟ್ ಧರಿಸಬೇಕಾಗಿರುವುದು ಕಡ್ಡಾಯ. ಸದ್ಯ ವೈದ್ಯರೊಬ್ಬರು ಸುಮಾರು 15 ಗಂಟೆಗಳ ಕಾಲ ಪಿಪಿಇ ಕಿಟ್ ಧರಿಸಿದ ಬಳಿಕ ಕಿಟ್ ತೆಗೆದಾಗ ಯಾವ ರೀತಿಯ ಬೇವರು ಬಂದಿದೆ ಎಂಬ ಪೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 15 ಗಂಟೆಗಳ ಬಳಿಕ ಪಿಪಿಇ ಕಿಟ್ ತೆಗೆದ ಬಳಿಕ ವೈದ್ಯರ ದೇಹ ಪೂರ್ತಿ ಬೆವರುಮಯವಾಗಿ ನೀರಿನಂತಿತ್ತು. ಸದ್ಯ ಈ ವಿಡಿಯೋ ಶೋಷಿಯಲ್ ಮೀಡಿಯಾದಲ್ಲಿ ಪುಲ್ ವೈರಲ್ ಆಗಿದೆ. ಕೊರೋನಾ ವಿರುದ್ದ ಯಶಸ್ವಿಯಾಗಿ ಹೋರಾಡಲು ಮಾಸ್ಕ್ ಹಾಗೂ ಸ್ಯಾನಿಟೈಸರ್ ಪ್ರಬಲ ಆಸ್ತ್ರವಾಗಿದ್ದು ಪ್ರತಿಯೊಬ್ಬರು ಇದನ್ನು ಬಳಸಿ ಹಾಗೂ ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಹೋಗಿ ಎಂಬುದು ಈ ಮೂಲಕ ನಮ್ಮ ವಿನಂತಿ.
Comments
Post a Comment